ತಮಿಳು ನಟಿ ಜೊತೆ ವಿಜಯ್ ದೇವರಕೊಂಡ ಮದುವೆ?

Recommended Video

ವಿಜಯ್ ದೇವರಕೊಂಡ ಮದುವೆ ಆಗುವ ಹುಡುಗಿ ಯಾರು ಗೊತ್ತಾ? | FILMIBEAT KANNADA

ಟಾಲಿವುಡ್ ನಟ ವಿಜಯ್ ದೇವರಕೊಂಡ ಸದಾ ಒಂದಲ್ಲೊಂದು ವಿಚಾರದ ಮೂಲಕ ಸುದ್ದಿಯಲ್ಲಿರುತ್ತಾರೆ. ಸಿನಿಮಾ ಆಗಲಿ ಅಥವಾ ಖಾಸಗಿ ವಿಚಾರವಾಗಲಿ ಸದ್ದು ಮಾಡುತ್ತಲೆ ಇರುತ್ತಾರೆ. ಇತ್ತೀಚಿನ ದಿನಗಳಲ್ಲಿ ಸೌತ್ ಸಿನಿ ಇಂಡಸ್ಟ್ರಿಯಲ್ಲಿ ನಟಿ ರಶ್ಮಿಕಾ ಮಂದಣ್ಣ ಜೊತೆ ವಿಜಯ್ ಹೆಸರು ಜೋರಾಗಿಯೆ ಓಡಾಡುತ್ತಿದೆ.

ಇದ್ರ ನಡುವೆ ಈಗ ವಿಜಯ್ ದೇವರಕೊಂಡ ಸಧ್ಯದಲ್ಲೇ ಮದುವೆ ಆಗಲಿದ್ದಾರೆ ಎನ್ನುವ ಸುದ್ದಿ ಸಂಚಲನ ಮೂಡಿಸಿದೆ. ವಿಜಯ್ ಮದುವೇನಾ ಅಂತ ಮಹಿಳಾ ಅಭಿಮಾನಿಗಳು ಒಮ್ಮೆ ಶಾಕ್ ಆಗುವಂತೆ ಮಾಡಿದೆ. ತೆಲುಗಿನ ಅರ್ಜುನ್ ರೆಡ್ಡಿ ದಿಢೀರನೆ ಹಸೆಮಣೆ ಏರುವ ಪ್ಲಾನ್ ಮಾಡಿದ್ದಾರಾ ಎಂದು ಎಲ್ಲರು ಅಚ್ಚರಿ ಪಟ್ಟುಕೊಳ್ಳುವಂತಾಗಿದೆ.

ಅಂದ್ಹಾಗೆ ವಿಜಯ್ ತಮಿಳು ನಟಿ ಐಶ್ವರ್ಯಾ ರಾಜೇಶ್ ಜೊತೆ ವಿವಾಹವಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದ್ರೆ ಅಚ್ಚರಿಕರ ಸಂಗತಿ ಅಂದ್ರೆ ಈ ವಿಚಾರ ನಟಿ ಐಶ್ವರ್ಯಾ ಅವರಿಗೆ ಗೊತ್ತಿಲ್ಲವಂತೆ. ಚಿತ್ರರಂಗದಲ್ಲಿ ಈಗಷ್ಟೆ ಬೆಳಯುತ್ತಿರುವ ಐಶ್ವರ್ಯಾ ಪ್ರೀತಿಯಲ್ಲಿ ಬಿದ್ದಿದ್ದಾರೆ. ಸಧ್ಯದಲ್ಲೇ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ವಿಚಾರ ತಿಳಿದು ಐಶ್ವರ್ಯಾ ಒಮ್ಮೆ ಶಾಕ್ ಆಗಿದ್ದಾರೆ. ಅಲ್ಲದೆ ಯಾರು ಆ ನಟ ಎಂದು ಗೊಂದಲಕ್ಕೆ ಒಳಗಾಗಿದ್ದಾರಂತೆ. ಈ ಬಗ್ಗೆ ಐಶ್ವರ್ಯಾ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟಪಡಿಸಿದ್ದಾರೆ.

Aishwarya Rajesh clarifies marriage rumors with actor Vijay Devarakonda

"ನನ್ನ ಪ್ರೀತಿಯ ವಿಚಾರ ಕೆಲವು ದಿನಗಳಿಂದ ಹರಿದಾಡುತ್ತಿದೆ. ದಯವಿಟ್ಟು ಆ ವ್ಯಕ್ತಿಯಾರು ಎಂದು ನನಗೂ ತಿಳಿಸಿ. ಆತ ಯಾರು ಎಂದು ತಿಳಿದುಕೊಳ್ಳು ಕುತೂಹಲ ನನಗೂ ಇದೆ. ದಯವಿಟ್ಟು ಈ ರೀತಿಯ ಸುಳ್ಳು ಸುದ್ದಿಯನ್ನು ಹಬ್ಬಿಸುವುದನ್ನು ಬಿಡಿ. ಏನಾದ್ರು ಇದ್ರೆ ನಾನೆ ನಿಮಗೆ ತಿಳಿಸುತ್ತೇನೆ. ನಾನು ಏಕಾಂಕಿ ಜೀವನವನ್ನ ಸಂತಸದಿಂದ ಕಳೆಯುತ್ತಿದ್ದೇನೆ" ಎಂದು ಹೇಳುವ ಮೂಲಕ ಗಾಸಿಪ್ ಹರಡಿಸುವವರ ಬಾಯಿ ಮುಚ್ಚಿಸಿದ್ದಾರೆ ಐಶ್ವರ್ಯಾ.

ಐಶ್ವರ್ಯಾ ಬಗ್ಗೆ ಗಾಸಿಪ್ ಹರಡುತ್ತಿರುವುದು ಯಾವ ನಟನ ಜೊತೆ ಎಂದು ಹೇಳದಿದ್ದರು, ವಿಜಯ್ ದೇವರಕೊಂಡ ಅಂತಾನೆ ಎಲ್ಲರು ಹೇಳುತ್ತಿದ್ದಾರೆ. ಐಶ್ವರ್ಯಾ ಮೊದಲ ಬಾರಿಗೆ ವಿಜಯ್ ದೇವರಕೊಂಡ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಟಾಲಿವುಡ್ ಗೆ ಕಾಲಿಡುತ್ತಿದ್ದಾರೆ.

ಅಂದ್ಹಾಗೆ ವಿಜಯ್ ಜೊತೆ ಅಭಿನಯಿಸಿದ ನಾಯಕಿಯರಿಗೆಲ್ಲ ಸಂಬಂಧ ಕಲ್ಪಿಸಿ ಗಾಸಿಪ್ ಹರಿದಾಡುತ್ತಿರುವುದು ಇದೆ ಹೊಸದೇನಲ್ಲ. ಈಗ ಐಶ್ವರ್ಯಾ ವಿಚಾರದಲ್ಲು ಹಾಗೆ ಆಗಿದೆ. ಆದ್ರೆ ವಿಜಯ್ ದೇವರಕೊಂಡ ಇದ್ಯಾವುದಕ್ಕು ತಲೆಕೆಡಿಸಿಕೊಳ್ಳದೆ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ .

More from Filmibeat

English summary
Tamil actress Aishwarya Rajesh clarifies marriage rumors with actor Vijay Devarakonda. Aishwarya Rajesh paired opposite vijay devarakonda next movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X