For Quick Alerts
  ALLOW NOTIFICATIONS  
  For Daily Alerts

  ಯುವರಾಜ್‌ಕುಮಾರ್ - ಸಂತೋಷ್ ಕೋಂಬೊ ಚಿತ್ರದಲ್ಲಿ ಉಪೇಂದ್ರ ಪುತ್ರಿ; ಆದ್ರೆ ನಾಯಕಿಯಲ್ಲ, ಈ ಪಾತ್ರ!

  |

  ಚಂದನವನದಲ್ಲಿ ಸ್ಟಾರ್ ನಟರ ಹಾಗೂ ನಟಿಯರ ಪುತ್ರಿಯರು ತಮ್ಮ ಪೋಷಕರಂತೆಯೇ ತಾವೂ ಸಹ ಚಿತ್ರರಂಗ ಪ್ರವೇಶಿಸುವ ಪ್ರವೃತ್ತಿ ಈ ಹಿಂದಿನಿಂದಲೂ ನಡೆಯುತ್ತಾ ಬಂದಿದೆ. ಶಿವ ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಹಾಗೂ ದರ್ಶನ್ ತೂಗುದೀಪ ಇಂದ ಹಿಡಿದು ಇಂದಿನ ಅಭಿಷೇಕ್ ಅಂಬರೀಶ್ ಅವರವರೆಗೂ ಸಹ ಹಲವಾರು ಸ್ಟಾರ್ ನಟರ ಹಾಗೂ ನಟಿಯರ ಮಕ್ಕಳು ಚಂದನವನಕ್ಕೆ ಎಂಟ್ರಿ ಕೊಟ್ಟಿದ್ದಾರೆ.

  ಈ ಪೈಕಿ ಪ್ರತಿಭೆ ಇದ್ದವರು ಗೆದ್ದು ಜನರ ಮನಸ್ಸಿನಲ್ಲಿ ಸ್ಥಾನ ಪಡೆದುಕೊಂಡು ಸ್ಟಾರ್ ಎನಿಸಿಕೊಂಡಿದ್ದಾರೆ. ಕೆಲವರು ಚಿತ್ರರಂಗ ಕೈಹಿಡಿಯಲಿಲ್ಲ ಎಂದು ಸುಮ್ಮನಾಗಿದ್ದಾರೆ ಹಾಗೂ ಇನ್ನೂ ಹಲವರು ಇಂದಿಗೂ ಸಹ ಸರಿಯಾದ ಸ್ಥಾನ ಗಿಟ್ಟಿಸಿಕೊಳ್ಳುವುದಕ್ಕಾಗಿ ಯತ್ನಿಸಲೇ ಇದ್ದಾರೆ. ಇನ್ನು ಈ ರೀತಿ ಸ್ಟಾರ್ ನಟ ಹಾಗೂ ನಟಿಯರ ಮಕ್ಕಳನ್ನು ಚಿತ್ರರಂಗಕ್ಕೆ ಪರಿಚಯಿಸುವ ಪ್ರವೃತ್ತಿಯನ್ನು ಕೆಲವರು ನೆಪೋಟಿಸಂ ಎಂದು ಗೇಲಿ ಮಾಡಿದ್ದೂ ಉಂಟು ಹಾಗೂ ಇನ್ನೂ ಹಲವರು ಸ್ಟಾರ್ ನಟರ ಮಕ್ಕಳೆಂದು ಒಂದೆರಡು ಚಿತ್ರಗಳ ಅವಕಾಶ ಸಿಗಬಹುದು, ನಿಜವಾದ ಟ್ಯಾಲೆಂಟ್ ಇದ್ದವರು ಚಿತ್ರರಂಗದಲ್ಲಿ ನಿಲ್ತಾರೆ ಬಿಡ್ರಿ ಎಂದು ಇದನ್ನೂ ಒಪ್ಪಿಕೊಂಡದ್ದೂ ಸಹ ಉಂಟು.

  ಇನ್ನು ಈ ವರ್ಷ ಈ ಕುರಿತಾಗಿ ಚರ್ಚೆಗಳು ಚಂದನವನದಲ್ಲಿ ತುಸು ಜೋರಾಗಿಯೇ ಇದೆ ಎನ್ನಬಹುದು. ಇದಕ್ಕೆ ಕಾರಣ ಈ ವರ್ಷ ಹಲವಾರು ನಟರ ಮಕ್ಕಳು ಚಿತ್ರರಂಗಕ್ಕೆ ಕಾಲಿಟ್ಟಿರುವುದು. ಈ ಸಾಲಿಗೆ ರಾಘವೇಂದ್ರ ರಾಜ್‌ಕುಮಾರ್ ಪುತ್ರ ಯುವ ರಾಜ್‌ಕುಮಾರ್ ಹಾಗೂ ಉಪೇಂದ್ರ ಪುತ್ರಿ ಐಶ್ವರ್ಯ ಉಪೇಂದ್ರ ಕೂಡ ಸೇರಿಕೊಂಡಿದ್ದಾರೆ. ವಿಶೇಷವೆಂದರೆ ಐಶ್ವರ್ಯ ಉಪೇಂದ್ರ ಯುವ ರಾಜ್‌ಕುಮಾರ್ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಇತ್ತೀಚಿಗಷ್ಟೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಈ ಕುರಿತಾಗಿ ಇದೀಗ ಮತ್ತೊಂದು ದೊಡ್ಡ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ.

  ಐಶ್ವರ್ಯ ಉಪೇಂದ್ರ ನಾಯಕಿಯಲ್ಲ!

  ಐಶ್ವರ್ಯ ಉಪೇಂದ್ರ ನಾಯಕಿಯಲ್ಲ!

  ಇನ್ನು ಯುವ ರಾಜ್‌ಕುಮಾರ್ ಹಾಗೂ ಸಂತೋಷ್ ಆನಂದ್‌ರಾಮ್ ಕಾಂಬಿನೇಶನ್‌ನ ಚಿತ್ರದಲ್ಲಿ ಐಶ್ವರ್ಯ ಉಪೇಂದ್ರ ನಾಯಕಿಯಾಗಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಇತ್ತು. ಆದರೆ ಈಗ ಕೇಳಿ ಬರುತ್ತಿರುವ ಸುದ್ದಿಯ ಪ್ರಕಾರ ಐಶ್ವರ್ಯಾ ಉಪೇಂದ್ರ ಈ ಚಿತ್ರದಲ್ಲಿ ಯುವ ರಾಜ್‌ಕುಮಾರ್ ತಂಗಿ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಎಂಬುದು. ಅಷ್ಟೇ ಅಲ್ಲದೇ ಐಶ್ವರ್ಯಾ ಉಪೇಂದ್ರ ನಿರ್ವಹಿಸಲಿರುವ ಪಾತ್ರ ಚಿತ್ರದ ಪ್ರಮುಖ ಪಾತ್ರಗಳಲ್ಲೊಂದು ಎಂದೂ ಸಹ ಹೇಳಲಾಗುತ್ತಿದೆ.

  ಚಿತ್ರದ ಹೈಪ್ ಮತ್ತಷ್ಟು ಏರುವುದು ಖಚಿತ

  ಚಿತ್ರದ ಹೈಪ್ ಮತ್ತಷ್ಟು ಏರುವುದು ಖಚಿತ

  ಇನ್ನು ಯುವ ರಾಜ್‌ಕುಮಾರ್, ಸಂತೋಷ್ ಆನಂದ್ ರಾಮ್ ಹಾಗೂ ಹೊಂಬಾಳೆ ಫಿಲ್ಮ್ಸ್ ಕಾಂಬಿನೇಶನ್‌ನ ಚಿತ್ರ ಎಂದಾಗಲೇ ಈ ಚಿತ್ರಕ್ಕೆ ದೊಡ್ಡ ಮಟ್ಟದ ಹೈಪ್ ಹುಟ್ಟಿಕೊಂಡಿತ್ತು. ಇದೀಗ ಐಶ್ವರ್ಯಾ ಉಪೇಂದ್ರ ಕೂಡ ಚಿತ್ರದಲ್ಲಿ ನಟಿಸಲಿದ್ದಾರೆ, ಅದರಲ್ಲೂ ಯುವ ರಾಜ್‌ಕುಮಾರ್ ತಂಗಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಚಿತ್ರದ ಮೇಲಿನ ನಿರೀಕ್ಷೆಯನ್ನು ಹಾಗೂ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಲಿದೆ.

  ಏಪ್ರಿಲ್‌ನಲ್ಲೇ ಚಿತ್ರ ಘೋಷಣೆ

  ಏಪ್ರಿಲ್‌ನಲ್ಲೇ ಚಿತ್ರ ಘೋಷಣೆ

  ಇನ್ನು ಸಂತೋಷ್ ಆನಂದ್‌ರಾಮ್ ಹಾಗೂ ಯುವ ರಾಜ್‌ಕುಮಾರ್ ಕಾಂಬಿನೇಶನ್ ಚಿತ್ರವನ್ನು ಕನ್ನಡದ ಪ್ರತಿಷ್ಠಿತ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಏಪ್ರಿಲ್ ತಿಂಗಳಿನಲ್ಲಿಯೇ ಘೋಷಣೆ ಮಾಡಿತ್ತು. ಕನ್ನಡ ಚಿತ್ರರಂಗದ ಮತ್ತೊಂದು ಪರ್ವ ಆರಂಭವಾಗುತ್ತಿದೆ, ರಾಜ್‌ವಂಶದ ಮೂರನೇ ತಲೆಮಾರಿನ ನಟ ಯುವ ರಾಜ್‌ಕುಮಾರ್ ಅವರನ್ನು ಹೆಮ್ಮೆಯಿಂದ ಪರಿಚಯಿಸುತ್ತಿದ್ದೇವೆ ಎಂದು ಹೊಂಬಾಳೆ ಫಿಲ್ಮ್ಸ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿತ್ತು.

  English summary
  Aishwarya Upendra to play Yuva Rajkumar's sister role in Santhosh Ananddram and Yuva combo film
  Saturday, December 3, 2022, 10:09
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X