For Quick Alerts
  ALLOW NOTIFICATIONS  
  For Daily Alerts

  ರಿಯಲ್ ಸ್ಟಾರ್ ಪುತ್ರಿಯ ಈ ಆಸೆ ಯಾವಾಗ ಈಡೆರುತ್ತೆ?

  |

  ರಿಯಲ್ ಸ್ಟಾರ್ ಉಪೇಂದ್ರ ಪುತ್ರಿ ಐಶ್ವರ್ಯ ಉಪೇಂದ್ರ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ತಾಯಿ ಪ್ರಿಯಾಂಕ ಉಪೇಂದ್ರ ಸಿನಿಮಾದ ಮೂಲಕ ಪ್ರೀತಿಯ ಮಗಳು ಕೂಡ ಚಿತ್ರರಂಗಕ್ಕೆ ಪರಿಚಯ ಆಗಿದ್ದಾರೆ.

  'ದೇವಕಿ' ಸಿನಿಮಾದ ಸುಂದರ ಪಾತ್ರದಲ್ಲಿ ನಟಿಸುವ ಮೂಲಕ ಐಶ್ವರ್ಯ ಮೊದಲ ಬಾರಿಗೆ ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಐಶ್ವರ್ಯ ಫಸ್ಟ್ ಲುಕ್ ಹಾಗೂ ಸಿನಿಮಾದ ಟೀಸರ್ ನಿನ್ನೆ ಬಿಡುಗಡೆಯಾಗಿದ್ದು, ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ.

  'ದೇವಕಿ'ಯಾಗಿ ಬದಲಾಯ್ತು 'ಹೌರಬ್ರಿಡ್ಜ್' ಸಿನಿಮಾ ಟೈಟಲ್ 'ದೇವಕಿ'ಯಾಗಿ ಬದಲಾಯ್ತು 'ಹೌರಬ್ರಿಡ್ಜ್' ಸಿನಿಮಾ ಟೈಟಲ್

  ಮೊದಲ ಸಿನಿಮಾ ಮಾಡಿದ ಐಶ್ವರ್ಯ ಮೊದಲ ಬಾರಿಗೆ ಮಾಧ್ಯಮದ ಮುಂದೆ ಮಾತನಾಡಿದರು. ತಮ್ಮ ಮುದ್ದು ಮಾತುಗಳ ಮೂಲಕ ಚಿತ್ರದ ಅನುಭವ ಹಂಚಿಕೊಂಡರು. ಇದೇ ವೇಳೆ ತಮ್ಮ ಒಂದು ಆಸೆಯನ್ನು ಸಹ ತಿಳಿಸಿದರು. ಮುಂದೆ ಓದಿ..

  ಐಶ್ವರ್ಯ ಆಸೆ ಏನು?

  ಐಶ್ವರ್ಯ ಆಸೆ ಏನು?

  ಐಶ್ವರ್ಯ ಉಪೇಂದ್ರಗೆ ಒಂದು ಆಸೆ ಇದೆಯಂತೆ. ಅದೇನೆಂದರೆ, ತಮ್ಮ ತಾಯಿ, ತಂದೆ ಹಾಗೂ ಅಣ್ಣನ ಜೊತೆಗೆ ಆಕೆ ಒಂದು ಸಿನಿಮಾ ಮಾಡಬೇಕಂತೆ. ತಮ್ಮ ಇಡೀ ಕುಟುಂಬ ಒಟ್ಟಿಗೆ ಒಂದು ಸಿನಿಮಾ ಮಾಡಬೇಕು ಎಂಬ ಆಸೆ ಇದೆ ಎಂದ ಐಶ್ವರ್ಯ, ಮುಂದೆ ಆ ಸಿನಿಮಾ ಮಾಡ್ತಿವಿ ಎಂದು ನಗು ನಗುತ್ತಾ ಹೇಳಿದರು.

  'ದೇವಕಿ' : ಉಪೇಂದ್ರ ಮಗಳ ಮೊದಲ ಚಿತ್ರದ ಮೊದಲ ಟೀಸರ್ 'ದೇವಕಿ' : ಉಪೇಂದ್ರ ಮಗಳ ಮೊದಲ ಚಿತ್ರದ ಮೊದಲ ಟೀಸರ್

  ಹ್ಯಾಪಿ ಮೂವಿ ಇರಬೇಕು

  ಹ್ಯಾಪಿ ಮೂವಿ ಇರಬೇಕು

  ತಮ್ಮ ಕುಟುಂಬದ ಜೊತೆಗೆ ಸಿನಿಮಾ ಮಾಡುವ ಆಸೆ ತಿಳಿಸಿದ ಐಶ್ವರ್ಯ ಆ ಸಿನಿಮಾದ ಹೇಗೆ ಇರಬೇಕು ಎಂಬುದನ್ನು ಹೇಳಲು ಮರೆಯಲಿಲ್ಲ. ತಂದೆ, ತಾಯಿ, ಅಣ್ಣ ಜೊತೆಗೆ ನಟಿಸುವ ಸಿನಿಮಾ ಹ್ಯಾಪಿಯಾಗಿ ಮುಗಿಯಬೇಕು. ಸೆಂಟಿಮೆಂಟ್ ಎಲ್ಲ ಇರಬಾರದು ಅಂತಾರೆ ಐಶ್ವರ್ಯ.

  ಕಾಮಿಡಿ ಸಿನಿಮಾ ಅಂದರೆ ಇಷ್ಟ

  ಕಾಮಿಡಿ ಸಿನಿಮಾ ಅಂದರೆ ಇಷ್ಟ

  ಐಶ್ವರ್ಯ ಉಪೇಂದ್ರಗೆ ಕಾಮಿಡಿ ಸಿನಿಮಾ ಅಂದರೆ ಬಹಳ ಇಷ್ಟ ಅಂತೆ. ಕಾಮಿಡಿ ಸಿನಿಮಾದಲ್ಲಿ ನಟನೆ ಮಾಡಬೇಕು ಅಂತ ಆಸೆ ಇದೆಯಂತೆ. ಆದರೆ, 'ದೇವಕಿ' ಸಿನಿಮಾದ ಪಾತ್ರವನ್ನು ಇಷ್ಟಪಟ್ಟು, ತಂದೆ, ತಾಯಿ ಹಾಗೂ ನಿರ್ದೇಶಕ ಲೋಹಿತ್ ಗಾಗಿ ಐಶ್ವರ್ಯ ಸಿನಿಮಾ ಮಾಡಿದ್ದಾರೆ. ಇನ್ನು ಲೋಹಿತ್ ಜೊತೆಗೆ ಎಷ್ಟು ಸಿನಿಮಾ ಬೇಕಾದರೂ ಮಾಡುತ್ತೇನೆ ಎಂದರು ಐಶ್ವರ್ಯ.

  'ಮಮ್ಮಿ' ಸಿನಿಮಾ ನೋಡಿ ಭಯ ಪಟ್ಟಿದ್ದರು

  'ಮಮ್ಮಿ' ಸಿನಿಮಾ ನೋಡಿ ಭಯ ಪಟ್ಟಿದ್ದರು

  ಈ ಹಿಂದೆ ಪ್ರಿಯಾಂಕ ಉಪೇಂದ್ರ ನಿರ್ದೇಶಕ ಲೋಹಿತ್ ಜೊತೆಗೆ 'ಮಮ್ಮಿ' ಸಿನಿಮಾ ಮಾಡಿದ್ದರು. ಈ ಸಿನಿಮಾ ನೋಡುವಾಗ ಐಶ್ವರ್ಯ ಸಿಕ್ಕಾಪಟ್ಟೆ ಭಯ ಪಟ್ಟಿದ್ದರಂತೆ. ಇನ್ನು 'ದೇವಕಿ' ಒಂದು ಥ್ರಿಲ್ಲರ್ ಸಿನಿಮಾಗಿದೆ. ಚಿತ್ರದ ಟೀಸರ್ ನಿನ್ನೆ ಬಿಡುಗಡೆಯಾಗಿದ್ದು, ಸಿನಿಮಾ ಏಪ್ರಿಲ್ ನಲ್ಲಿ ತೆರೆಗೆ ಬರಲಿದೆ.

  English summary
  Actor Upendra and Actress Priyanka Upendra's daughter Aishwarya Upendra want do a movie with his famiy. Aishwarya Upendra launched as a child actor from 'Devaki' kannada movie. The movie is directed by Lohith.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X