ಉಪೇಂದ್ರ ಹುಟ್ಟುಹಬ್ಬಕ್ಕೆ ಮಗಳ ವಿಶ್ ಹೀಗಿತ್ತು
Recommended Video

ಇಂದು ರಿಯಲ್ ಸ್ಟಾರ್ ಉಪೇಂದ್ರ ಅವರ ಜನ್ಮದಿನ. ಈಗಾಗಲೇ ಈ ದಿನವನ್ನು ಅವರ ಅಭಿಮಾನಿಗಳು ಅದ್ದೂರಿಯಾಗಿ ಆಚರಿಸುತ್ತಿದ್ದಾರೆ. ರಾತ್ರಿಯಿಂದಲೇ ಕತ್ರಿಗುಪ್ಪೆ ಬಳಿ ಇರುವ ಅವರ ನಿವಾಸದಲ್ಲಿ ಅಭಿಮಾನಿಗಳ ಹಬ್ಬ ಶುರುವಾಗಿದೆ. ಅಭಿಮಾನಿಗಳ ಶುಭಾಶಯಗಳ ಜೊತೆಗೆ ಉಪ್ಪಿ ಮಗಳು ವಿಶೇಷವಾಗಿ ಅಪ್ಪನಿಗೆ ವಿಶ್ ಮಾಡಿದ್ದಾಳೆ.
ತಮ್ಮ ಇನ್ಟಾಗ್ರಾಮ್ ಖಾತೆಯಲ್ಲಿ ಯಾವಾಗಲೂ ಸಕ್ರೀಯರಾಗಿರುವ ಐಶ್ವರ್ಯ ಅದರ ಮೂಲಕ ಅಪ್ಪನಿಗೆ ಶುಭ ಕೋರಿದ್ದಾರೆ. ''ಹುಟ್ಟುಹಬ್ಬದ ಶುಭಾಶಯಗಳು ಪಪ್ಪ. ನಾನು ನಿನ್ನನ್ನು ತುಂಬ ಪ್ರೀತಿಸುತ್ತೇನೆ. ನನ್ನ ಎಲ್ಲ ಕಷ್ಟದಲ್ಲಿ ನೀನು ಸಹಾಯ ಮಾಡಿದ್ದೀಯ. ನೀನು ಇಲ್ಲದೆ ನನ್ನ ಜೀವನವನ್ನು ಊಹಿಸಿಕೊಳ್ಳುವುದು ಕಷ್ಟ.'' ಎಂದು ಅಪ್ಪನಿಗೆ ಅಕ್ಕರೆಯಿಂದ ವಿಶ್ ಮಾಡಿದ್ದಾರೆ.
ಅಂದಹಾಗೆ, ಈ ಬಾರಿ ಉಪೇಂದ್ರ 50ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅರ್ಧ ಶತಕ ಬಾರಿಸಿರುವ ಅವರು ಎಂದಿನಂತೆ ಈ ದಿನವನ್ನು ಅಭಿಮಾನಿಗಳಿಗಾಗಿ ಮುಡಿಪಿಟ್ಟಿದ್ದಾರೆ.

ಇನ್ನು ರಿಯಲ್ ಸ್ಟಾರ್ ಹುಟ್ಟುಹಬ್ಬದ ವಿಶೇಷವಾಗಿ 'ಐ ಲವ್ ಯೂ' ಸಿನಿಮಾದ ಟೀಸರ್ ಹಾಗೂ 'ಹೋಮ್ ಮಿನಿಸ್ಟರ್' ಸಿನಿಮಾದ ಒಂದು ಹಾಡು ಬಿಡುಗಡೆಯಾಗಲಿದೆ. ಜೊತೆಗೆ ಉಪೇಂದ್ರ ತಮ್ಮ UPP (ಉತ್ತಮ ಪ್ರಜಾಕೀಯ ಪಕ್ಷ) ಪಕ್ಷವನನ್ನು ಲಾಂಚ್ ಮಾಡಲಿದ್ದಾರೆ.


Click it and Unblock the Notifications











