For Quick Alerts
  ALLOW NOTIFICATIONS  
  For Daily Alerts

  ಜಿ.ವಿ. ಅಯ್ಯರ್‌ ಎಂಬ ಆಧುನಿಕ ಋಷಿಯ ಭಾಗವತ!

  By *ಸತ್ಯಬೋಧ
  |

  The Irish are fair people ; they never speak well of one another ಅನ್ನುವ ಸ್ಯಾಮ್ಯುಯಲ್‌ ಜಾನ್ಸನ್‌ ಮಾತು ನಮ್ಮ ಅಯ್ಯರ್‌ ಅವರಿಗೂ ಹೊಂದುತ್ತದೆ. ಅಯ್ಯರ್‌ ಯಾರ ಬಗ್ಗೆಯೂ ಮೆಚ್ಚುಗೆಯ ಮಾತಾಡಿದವರೇ ಅಲ್ಲ . ಅದಕ್ಕೆ ಕಾರಣ ಮೆಚ್ಚಿಕೊಂಡರೆ ಹಣ ಕೊಡಬೇಕಾಗುತ್ತೆ ಅನ್ನುವುದು ಪಾಮರರ punಡಿತ ವೈಯೆನ್ಕೆ ಜೋಕು !

  ಅಗ್ನಿಪರ್ವತದಂತೆ ಇಷ್ಟು ಕಾಲ ಮೌನವಾಗಿದ್ದ ಗಣಪತಿ ವೆಂಕಟರಮಣಪತಿ ಅಯ್ಯರ್‌ ಮತ್ತೆ ಹೊಗೆಯಾಡಲಾರಂಭಿಸಿದ್ದಾರೆ. ಈ ಸಾರಿ ಅವರು ಎತ್ತಿಕೊಂಡಿರುವ ಚಿತ್ರದ ಹೆಸರು ಶ್ರೀಕೃಷ್ಣಲೀಲೆ. ವರ್ತಮಾನಕ್ಕೂ ಅವರ ಚಿತ್ರಕೂ ಯಾವುದೇ ಸಂಬಂಧವೂ ಇರುವುದಿಲ್ಲ ಅನ್ನುವುದು ಅವರ ಸಿನಿಮಾಗಳನ್ನು ನೋಡಿದವರಿಗೆ ಗೊತ್ತು . ಅವರೇನಿದ್ದರೂ ಕಳೆದ ಕಾಲದ ಹಾದಿಯಲ್ಲಿ ಒಂಟಿಯಾಗಿ ಅಲೆಯುವವರು . ಸಮಕಾಲೀನತೆಯ ಬಗ್ಗೆ ಅಷ್ಟಾಗಿ ಗಮನ ಕೊಡದವರು. ಅವರ ಮಧ್ವಾಚಾರ್ಯ, ಶಂಕರಾಚಾರ್ಯ ಮುಂತಾದ ಚಿತ್ರಗಳು ಇದಕ್ಕೆ ಸಾಕ್ಷಿ .

  ಬರಿಗಾಲ ನಿರ್ದೇಶಕ ಎಂದೇ ಹೆಸರಾಗಿರುವ ಅಯ್ಯರ್‌ ಮೂಲತಃ ಸಿಡುಕ . ಅವರ ಜೊತೆ ಮಾತಾಡುವುದೇ ಒಂದು ಸಾಹಸ. ಈ ದುಸ್ಸಾಹಸಕ್ಕೆ ಆಗಾಗ ಯಾರಾದರೂ ಬಲಿಯಾಗುತ್ತಲೇ ಇರುತ್ತಾರೆ. ಕಳೆದ ವಾರ ಅವರ ಸಿಟ್ಟಿಗೆ ಬಲಿಯಾದದ್ದು ದೂರದರ್ಶನ. ಅವರ ಹಿಂದಿ ಸೀರಿಯಲ್‌ ಶಾಂತಲಾವನ್ನು ದೂರದರ್ಶನ ನಡುರಾತ್ರಿ ಪ್ರಸಾರ ಮಾಡಿತಂತೆ. ದುಡ್ಡು ಕೊಟ್ಟ ಮೇಲೆ ನಮ್ಮಿಷ್ಟ ಅನ್ನುವುದು ದೂರದರ್ಶನ ಪಾಲಿಸಿ. ಅಯ್ಯರ್‌ ಅದನ್ನು ಇಷ್ಟ ಪಡಲಿಲ್ಲ . ದೂರದರ್ಶನ ಅಧಿಕಾರಿಗಳ ಜನ್ಮ ಜಾಲಾಡಿದರು.

  ಒಂದು ಕಾಲದಲ್ಲಿ ಕೆಲವು ಒಳ್ಳೆಯ ಸಿನಿಮಾಗಳನ್ನು ಕೊಟ್ಟಿದ್ದಾರೆ, ಒಳ್ಳೆಯ ಗೀತೆಗಳನ್ನು ಬರೆದಿದ್ದಾರೆ ಎಂದು ನಂಬಲಾಗುವ ಜೀವಿ ಅಯ್ಯರ್‌, ಇದೀಗ ಯಂತ್ರ ಮೀಡಿಯಾಕ್ಕಾಗಿ ಕೃಷ್ಣಲೀಲೆಯೆಂಬ ಕನ್ನಡ ಚಿತ್ರವನ್ನೂ, ತಮಿಳು, ಮಲಯಾಳಂ, ಹಿಂದೀಯಲ್ಲಿ 13 ಕಂತುಗಳ ಸೀರಿಯಲ್ಲನ್ನೂ ಏಕಕಾಲಕ್ಕೆ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಮದುವೆಯಾದ ಸುಮನ್‌ ನಗರ್‌ಕರ್‌ ಯಶೋಧೆಯಾಗಿ ನಟಿಸುತ್ತಿದ್ದಾರೆ. ನೀರಜಾ ಎಂಬ ಕೇರಳದ ಬಾಲಕಿ ಕೃಷ್ಣನ ಪಾತ್ರದಲ್ಲಿದ್ದರೆ, ಅಯ್ಯರ್‌ ಮಗ ರಾಘವೇಂದ್ರ ಕನ್ನಡದ ಕಂಸ.

  ಪುರಂದರ ದಾಸರ ಕೀರ್ತನೆಗಳನ್ನು ಆಧರಿಸಿದ ಸಿನಿಮಾ ಇದು. 38 ಕೀರ್ತನೆಗಳನ್ನು ಬಳಸಿಕೊಳ್ಳಲಾಗಿದೆ ಎಂದೂ, ಅವಕ್ಕೆ ಜಯಶ್ರೀ ಅರವಿಂದ್‌ ಸಂಗೀತ ನೀಡಿದ್ದಾರೆಂದೂ, ರಾಜೇಶ್‌ ಕೃಷ್ಣನ್‌, ಹೇಮಂತ್‌, ರಮೇಶ್‌ಚಂದ್ರ ಮುಂತಾದವರು ಅವುಗಳನ್ನು ಹಾಡಿದ್ದಾರೆಂದೂ ಸುದ್ದಿಯಾಗಿದೆ. ಈಗಾಗಲೇ ಚಿತ್ರ ಶೇ.80 ರಷ್ಟು ಖರ್ಚಾಗಿದೆ ಎನ್ನುತ್ತಾರೆ ಅಯ್ಯರ್‌. ಒಟ್ಪು ಒಂದು ಕೋಟಿ ರುಪಾಯಿ ಪ್ರಾಜೆಕ್ಟ್‌ ಅದು.

  ಇದು 16 ಎಂಎಂನಲ್ಲಿ ಚಿತ್ರೀಕರಿಸಿದ ಸಿನಿಮಾ. ಇದನ್ನೇ ಬ್ಲೋಅಪ್‌ ಮಾಡಿ ಚಿತ್ರಮಂದಿರಗಳಲ್ಲಿ ಪ್ರದರ್ಶಿಸುತ್ತಾರಂತೆ. ಆಗ ಇದಕ್ಕೂ ಸಬ್ಸಿಡಿ ಸಿಗುತ್ತದೆಯೇ ? ಗುಣಮಟ್ಟ ಸಮಿತಿಯ ಮುಂದಿರುವ ಪ್ರಶ್ನೆ ಇದು !

  ಕೃಷ್ಣಲೀಲೆಯ ನಿರ್ಮಾಪಕಿ ಪಂಡರಿಬಾಯಿ. ಪತ್ರಿಕಾಗೋಷ್ಠಿಯಲ್ಲಿ ಆಕೆ ಅಯ್ಯರ್‌ರನ್ನು ತರಾಟೆಗೆ ತೆಗೆದುಕೊಂಡರು. ನಾನು ದೊಡ್ಡ ನಟಿಯಾಗಿದ್ದಾಗ ಕೂಡ ಅಯ್ಯರ್‌ ನನಗೆ ಒಂದೇ ಒಂದು ಅವಕಾಶವನ್ನು ಕೊಟ್ಟಿಲ್ಲ . ಯಾಕೆ ಹೀಗೆ ನನ್ನನ್ನು ನಿರ್ಲಕ್ಷ್ಯ ಮಾಡಿದರೋ ಗೊತ್ತಿಲ್ಲ . ಅದಕ್ಕೆ ಅಯ್ಯರ್‌ ಹೇಳಿದರು, ಈ ಚಿತ್ರಕ್ಕೆ ನೀನೇ ನಿರ್ಮಾಪಕಿ. ನೀನೇ ನಟಿಸು ಬೇಕಿದ್ದರೆ!

  Read more about: sandalwood kannada cinema
  English summary
  G.V.Iyer is producing kannada film Krishnaleele. Suman nagarkar is yashoda

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X