ಚಿಕ್ಕಣ್ಣ ಹಾಕಿದ್ದ ಚಾಲೆಂಜ್ ಪೂರೈಸಿದ ನಟ ಅಜಯ್ ರಾವ್
ಹಾಸ್ಯ ನಟ ಚಿಕ್ಕಣ್ಣ ಅವರು ನಟ ಅಜಯ್ ರಾವ್‌ಗೆ ಒಂದು ಸವಾಲು ಹಾಕಿದ್ದರು. ಆರ್‌ಸಿಬಿ ತಂಡದ ಕುರಿತು ಆರ್‌ಸಿಬಿ ತಂಡದ ಅಭಿಮಾನದ ಕುರಿತು ನಾನ್‌ಸ್ಟಾಪ್ ಆಗಿ ಹೇಳಿರುವ ಡೈಲಾಗ್ ಹೇಳಿ ವಿಡಿಯೋ ಮಾಡಬೇಕು ಎಂದು ಹೇಳಿದ್ದರು.
ಚಿಕ್ಕಣ್ಣ ಅವರ ಸವಾಲು ಸ್ವೀಕರಿಸಿದ್ದ ನಟ ಅಜಯ್ ರಾವ್ ಡೈಲಾಗ್ ಹೇಳಿ ಡೈಲಾಗ್ ಚಾಲೆಂಜ್ ಪೂರೈಸಿದ್ದಾರೆ. ಚಿಕ್ಕಣ್ಣ ಅವರ ಆರ್‌ಸಿಬಿ ಡೈಲಾಗ್ ನಾನ್‌ಸ್ಟಾಪ್ ಹೇಳಿ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಮುಂದೆ ಈ ಚಾಲೆಂಜ್‌ನ್ನು ಚಿತ್ರದ ನಾಯಕಿ ನಟಿ ಅಪೂರ್ವ ಹಾಗೂ ಕನ್ನಡ ಕಲಾಭಿಮಾನಿಗಳು ಮುಂದುವರಿಸಿ ಎಂದು ವಿನಂತಿಸಿಕೊಂಡಿದ್ದಾರೆ.

ಅಂದ್ಹಾಗೆ, ಚಿಕ್ಕಣ್ಣ ಹೇಳುವ ಆ ಡೈಲಾಗ್ ಕೃಷ್ಣ ಟಾಕೀಸ್ ಸಿನಿಮಾದು. ಆರ್‌ಸಿಬಿ ತಂಡದ ಬಗ್ಗೆ ವಿರೋಧಿಗಳು ಏನೇ ಹೇಳಿದರು, ನಾವು ಆರ್‌ಸಿಬಿ ಫ್ಯಾನ್ ಎಂದು ಸುಮಾರು 40 ಸೆಕೆಂಡ್ ನಾನ್‌ಸ್ಟಾಪ್ ಭರ್ಜರಿ ಡೈಲಾಗ್ ಹೊಡೆದಿದ್ದಾರೆ. ಈ ಡೈಲಾಗ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಇನ್ನುಳಿದಂತೆ ಕೃಷ್ಣ ಟಾಕೀಸ್ ಸಿನಿಮಾದಲ್ಲಿ ಅಜಯ್ ರಾವ್ ನಾಯಕ ನಟನಾಗಿ ನಟಿಸಿದ್ದು, ಚಿಕ್ಕಣ್ಣ ಹಾಸ್ಯ ಕಲಾವಿದನಾಗಿ ಕಾಣಿಸಿಕೊಂಡಿದ್ದಾರೆ. ವಿಜಯ್ ಆನಂದ್ ಈ ಚಿತ್ರ ನಿರ್ದೇಶಿಸಿದ್ದು, ಇದು ಹಾರರ್ ಥ್ರಿಲ್ಲಿಂಗ್ ಸಿನಿಮಾ ಆಗಿದೆ.
ಸಿಂಧು ಲೋಕನಾಥ್, ಅಪೂರ್ವ, ಯಶ್ ಶೆಟ್ಟಿ, ನಿರಂತ್, ಶೋಭ್‌ರಾಜ್, ಮಂಡ್ಯ ರಮೇಶ್, ಪ್ರಮೋದ್ ಶೆಟ್ಟಿ ಸೇರಿದಂತೆ ಹಲವರು ಈ ಚಿತ್ರದಲ್ಲಿ ನಟಿಸಿದ್ದಾರೆ. ವಿ ಶ್ರೀಧರ್ ಸಂಭ್ರಮ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಏಪ್ರಿಲ್ 9 ರಂದು ಈ ಚಿತ್ರ ತೆರೆಕಾಣುತ್ತಿದೆ.


Click it and Unblock the Notifications











