For Quick Alerts
  ALLOW NOTIFICATIONS  
  For Daily Alerts

  ಕೋವಿಡ್‌ಗೆ ಬಲಿಯಾದ ನಟ ಅಜಯ್‌ ರಾವ್ ಮೇಕಪ್‌ ಮ್ಯಾನ್

  |

  ನಟ ಅಜಯ್ ರಾವ್ ಕಹಿಸುದ್ದಿಯೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಜಯ್‌ ರಾವ್ ಅವರ ಮೇಕಪ್‌ ಮ್ಯಾನ್ ಕೋವಿಡ್‌ನಿಂದಾಗಿ ನಿಧನ ಹೊಂದಿದ್ದಾರೆ.

  ಮೇಕಪ್‌ ಮ್ಯಾನ್‌ನ ಕೆಲವು ಚಿತ್ರಗಳನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ಅಜಯ್ ರಾವ್, 'ಕಳೆದ 11 ವರ್ಷಗಳಿಂದಲೂ ನನ್ನ ಖಾಸಗಿ ಮೇಕಪ್‌ಮ್ಯಾನ್ ಆಗಿದ್ದ ಜಯರಾಮ್ ಕೋವಿಡ್‌ಗೆ ಬಲಿಯಾಗಿದ್ದಾರೆ' ಎಂದಿದ್ದಾರೆ.

  ಜಯರಾಮ್ ಸಾವಿನಿಂದ ಅತೀವ ದುಃಖವಾಗಿರುವುದಾಗಿ ಹೇಳಿರುವ ಅಜಯ್ ರಾವ್, ಜಯರಾಮ್ ಆತ್ಮಕ್ಕೆ ಶಾಂತಿ ಧಕ್ಕಲೆಂದು ಪ್ರಾರ್ಥಿಸಿದ್ದಾರೆ. ಜಯರಾಮ್ ತಮ್ಮೊಂದಿಗೆ ತೆಗೆಸಿಕೊಂಡಿದ್ದ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

  ಕೋವಿಡ್ ಎರಡನೇ ಅಲೆಯಲ್ಲಿ ಚಂದನವನದ ಹಲವಾರು ಮಂದಿ ಕೊರೊನಾಕ್ಕೆ ಬಲಿಯಾಗಿದ್ದಾರೆ. ಹಲವು ಸಿನಿಮಾ ನಟ-ನಟಿಯರು, ತಂತ್ರಜ್ಞರನ್ನು ಕೊರೊನಾ ಬಲಿ ತೆಗೆದುಕೊಂಡಿದೆ.

  Junior NTR ಗಾಗಿ ಪ್ರಶಾಂತ್ ನೀಲ್ ಮಾಡಿದ್ದಾರೆ ಭಯಂಕರ ಕಥೆ | Filmibeat Kannada

  ಹಿರಿಯ ನಟ ಬಿ.ಎಂ.ಕೃಷ್ಣೇಗೌಡ, ನಿರ್ದೇಶಕ ತಿಪಟೂರು ರಘು, ಆರ್.ಎಸ್.ರಾಜಾರಾಮ್, ಚಿತ್ರಸಾಹಿತಿ ಶ್ರೀರಂಗ, ಕೋಟಿ ರಾಮು, ಶಂಖನಾದ ಅರವಿಂದ್, ನಿರ್ದೇಶಕ ರೇಣುಕಾ ಶರ್ಮಾ ಇನ್ನೂ ಹಲವಾರು ಮಂದಿ ಕೆಲವೇ ದಿನಗಳ ಅಂತರದಲ್ಲಿ ಸಾವನ್ನಪ್ಪಿದ್ದಾರೆ.

  English summary
  Actor Ajai Rao Personal Makeup man Jayram dies due to Covid-19. Ajay Rao express pray for Jayram's family.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X