»   » ಗೆದ್ದ 'ಕೃಷ್ಣಲೀಲಾ' ; ಅಜೇಯ್ ರಾವ್ ಗೆ ಶುಕ್ರದೆಸೆ

ಗೆದ್ದ 'ಕೃಷ್ಣಲೀಲಾ' ; ಅಜೇಯ್ ರಾವ್ ಗೆ ಶುಕ್ರದೆಸೆ

Posted By:
Subscribe to Filmibeat Kannada

ನಟ ಅಜೇಯ್ ರಾವ್ ಅದೃಷ್ಟ ಖುಲಾಯಿಸಿಬಿಟ್ಟಿದೆ. 'ಕೃಷ್ಣಲೀಲಾ' ಹಿಟ್ ಆಗಿದ್ದೇ ಆಗಿದ್ದು, 'ಸ್ಯಾಂಡಲ್ ವುಡ್ ಕೃಷ್ಣ' ಸ್ಮೈಲ್ ಮಾಡ್ತಿದ್ದಾರೆ. ರಿಲೀಸ್ ಆದ ಒಂದೇ ವಾರದಲ್ಲಿ 3.5 ಕೋಟಿ ಕಲೆಕ್ಷನ್ ಮಾಡುವ ಮೂಲಕ 'ಕೃಷ್ಣಲೀಲಾ' ದಾಖಲೆ ಬರೆದಿದೆ.

ಅಲ್ಲಿಗೆ, ನಿರ್ಮಾಪಕ ಅಜೇಯ್ ರಾವ್ ಜೇಬು ತುಂಬುತ್ತಿದೆ. ಅದರ ಜೊತೆಗೆ ಕೆಲಸ ಕೂಡ ಜಾಸ್ತಿಯಾಗುತ್ತಿದೆ. ಮೊನ್ನೆಯಷ್ಟೇ, ಅಜೇಯ್ ರಾವ್ ಮತ್ತು ರಾಧಿಕಾ ಪಂಡಿತ್ ಅಭಿನಯದ 'ಎಂದೆಂದಿಗೂ' ಚಿತ್ರದ ಆಡಿಯೋ ರಿಲೀಸ್ ಆಯ್ತು.[ಅಜೇಯ್ ರಾವ್ 'ಕೃಷ್ಣಲೀಲಾ'ಗೆ ಬಾಕ್ಸಾಫೀಸ್ ಉಡೀಸ್]


Ajai Rao starrer A Second Hand Lover Audio release is scheduled this week

ಇದರ ಬೆನ್ನಲ್ಲೇ ಅಜೇಯ್ ರಾವ್ ಅವರ ಮತ್ತೊಂದು ಸಿನಿಮಾ 'ಎ 2nd ಹ್ಯಾಂಡ್ ಲವ್ವರ್' ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಇದೇ ವಾರ ಚಿತ್ರದ ಆಡಿಯೋ ರಿಲೀಸ್ ಆಗುವ ಸಾಧ್ಯತೆ ಇದೆ.


ಎಲ್ಲೆಲ್ಲೂ 'ಕೃಷ್ಣಲೀಲಾ' ಫೀವರ್ ಇರುವ ಕಾರಣ, ಅಜೇಯ್ ರಾವ್ ರವರ ಉಳಿದೂ ಚಿತ್ರಗಳೂ ಇದೇ ಗ್ಯಾಪಲ್ಲಿ ಸದ್ದು ಮಾಡುತ್ತಿವೆ. ಈಗಾಗಲೇ 'ಎ 2nd ಹ್ಯಾಂಡ್ ಲವ್ವರ್' ಚಿತ್ರದ ಟೀಸರ್ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ.[ಮಂಗಳಮುಖಿಯರ ಕೈಗೆ ಸಿಕ್ಕಿ ನಲುಗಿದ 'ಕೃಷ್ಣ' ಅಜೇಯ್ ರಾವ್]


Ajai Rao starrer A Second Hand Lover Audio release is scheduled this week

ಪ್ರೀತಿ ಮತ್ತು ನಂಬಿಕೆ ಸುತ್ತ ಸುತ್ತುವ 'ಎ 2nd ಹ್ಯಾಂಡ್ ಲವ್ವರ್' ಚಿತ್ರದಲ್ಲಿ ಅಜೇಯ್ ರಾವ್ ಗೆ ಜೋಡಿಯಾಗಿರುವುದು ನಟಿ ಪ್ರಣೀತಾ. 'ಲಕ್ಷ್ಮೀ' ಚಿತ್ರದ ಬಳಿಕ 'ಎ 2nd ಹ್ಯಾಂಡ್ ಲವ್ವರ್'ಗೆ ಆಕ್ಷನ್ ಕಟ್ ಹೇಳಿದ್ದಾರೆ ನಿರ್ದೇಶಕ ರಾಘವ ಲೋಕಿ.


ರಿಲೀಸ್ ಗೆ ಸಿದ್ದವಾಗಿರುವ 'ಎ 2nd ಹ್ಯಾಂಡ್ ಲವ್ವರ್' ಸದ್ಯದಲ್ಲೇ ತೆರೆಗೆ ಬರಲಿದೆ. ಅದಕ್ಕೂ ಮುನ್ನ ಗುರುಕಿರಣ್ ಸಂಗೀತ ನಿರ್ದೇಶನದ ಹಾಡುಗಳ ಬಗ್ಗೆ ಎಲ್ಲರ ಕಾತರ ಇದೆ. ಅದಕ್ಕೆ ಇದೇ ವಾರ ತೆರೆ ಬೀಳಬಹುದು. (ಏಜೆನ್ಸೀಸ್)

English summary
After the success of 'Krishna Leela', Ajay Rao is in news regarding his upcoming releases. 'Endendigu' Audio was released last friday and this week, the Actor's another film 'A Second Hand Lover' audio release is scheduled. Both the movies are releasing shortly.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada