'ಫ್ಯಾಂಟಮ್' ಸಿನಿಮಾಗೆ ಸಂಗೀತ ನಿರ್ದೇಶಕ ಫಿಕ್ಸ್: ಮೊದಲ ಬಾರಿಗೆ ಕಿಚ್ಚನ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ ಇವರು
ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷೆಯ ಸಿನಿಮಾ ಫ್ಯಾಂಟಮ್. ಈಗಾಗಲೆ ಎಲ್ಲಾ ತಯಾರಿಗಳನ್ನು ಮಾಡಿಕೊಂಡಿರುವ ಸಿನಿಮಾತಂಡ ಚಿತ್ರೀಕರಣಕ್ಕೆ ಹೊರಡಲು ಸಿದ್ಧವಾಗಿದೆ. ನಿರ್ದೇಶಕ ಅನೂಪ್ ಬಂಡಾರಿ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾ ಇದಾಗಿದ್ದು, ಮೊದಲ ಬಾರಿಗೆ ಅನೂಪ್ ಭಂಡಾರಿ, ಕಿಚ್ಚನಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
Recommended Video
ಬಹುತೇಕ ತಂತ್ರಜ್ಞರು ಮತ್ತು ಕಲಾವಿದರು ಚಿತ್ರಕ್ಕೆ ಫೈನಲ್ ಆಗಿದ್ದಾರೆ. ಸದ್ಯ ಚಿತ್ರದ ಸಂಗೀತ ನಿರ್ದೇಶಕ ಯಾರು ಎನ್ನುವುದು ಬಹಿರಂಗವಾಗಿದೆ. ಸ್ಯಾಂಡಲ್ ವುಡ್ ಖ್ಯಾತ ಸಂಗೀತ ನಿರ್ದೇಶಕರಲ್ಲಿ ಒಬ್ಬರಾಗಿರುವ ಅಜನೀಶ್ ಲೋಕನಾಥ್ ಸುದೀಪ್ ಫ್ಯಾಂಟಮ್ ಸಿನಿಮಾಗೆ ಸಂಗೀತ ಸಂಯೋಜನೆ ಮಾಡುದ್ದಾರೆ. ಮುಂದೆ ಓದಿ..

ಫ್ಯಾಂಟಮ್ ಗೆ ಅಜನೀಶ್ ಲೋಕನಾಥ್ ಸಂಗೀತ
ಕಿಚ್ಚನ ಚಿತ್ರಕ್ಕೆ ಮೊದಲ ಬಾರಿಗೆ ಅಜನೀಶ್ ಲೋಕನಾಥ್ ಸಂಗೀತ ನೀಡುತ್ತಿದ್ದಾರೆ. ಅನೂಪ್ ಭಂಡಾರಿ ನಿರ್ದೇಶನದ ಎರಡೂ ಚಿತ್ರಕ್ಕೂ ಅಜನೀಶ್ ಲೋಕನಾಥ್ ಅವರೆ ಸಂಗೀತ ನೀಡಿದ್ದಾರೆ. ರಂಗೀತರಂಗ ಮತ್ತು ರಾಜರಥ ಸಿನಿಮಾಗಳಿಗೆ ಸುಂದರ ಹಾಡುಗಳನ್ನು ನೀಡಿದ್ದು ಅಜನೀಶ್ ಲೋಕನಾಥ್. ಈಗ ಫ್ಯಾಂಟಮ್ ಮೂರನೆ ಬಾರಿಗೆ ಅನೂಪ್ ಮತ್ತು ಅಜನೀಶ್ ಒಂದಾಗುತ್ತಿದ್ದಾರೆ.

ಸೂಪರ್ ಹಿಟ್ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ
ಉಳಿದವರು ಕಂಡಂತೆ, ಕಿರಿಕ್ ಪಾರ್ಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೆಲ್ ಬಾಟಂ, ಅವನೇ ಶ್ರೀಮನ್ನಾರಾಯಣ, ದಿಯಾ ಅಂತಹ ಸೂಪರ್ ಹಿಟ್ ಸಿನಿಮಾಗಳಿಗೆ ಅದ್ಭುತ ಸಂಗೀತ ನೀಡಿದ್ದಾರೆ. ಸದ್ಯ ಫ್ಯಾಂಟಮ್ ಸಿನಿಮಾಗೆ ಸಂಗೀತ ಸಂಯೋಜನೆ ಮಾಡುತ್ತಿರುವುದು ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ.

ಜುಲೈ ಮೊದಲ ವಾರದಿಂದ ಚಿತ್ರೀಕರಣ
ಜುಲೈ ಮೊದಲ ವಾರದಲ್ಲಿಯೆ ಫ್ಯಾಂಟಮ್ ಸಿನಿಮಾದ ಚಿತ್ರೀಕರಣ ಆರಂಭವಾಗುತ್ತಿದೆ. ಕೊರೊನಾ ನಂತರ ಚಿತ್ರೀಕರಣಕ್ಕೆ ಹೊರಡುತ್ತಿರುವ ಮೊದಲ ಸಿನಿಮಾ ಇದಾಗಿದೆ. ತೆಲಂಗಾಣದಲ್ಲಿ ಕಾಡಿಮ ಸೆಟ್ ಹಾಕಲಾಗಿದ್ದು, ಕಳೆದ ಎರಡು ವಾರಗಳಿಂದ ಸೆಟ್ ನಿರ್ಮಾಣ ಕಾರ್ಯ ನಡೆಯುತ್ತಿದೆ.

ಸುದೀಪ್ ಗೆ ಶ್ರದ್ಧಾ ಶ್ರೀನಾಥ್ ನಾಯಕಿ
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗೆ ನಾಯಕಿಯಾಗಿ ಶ್ರದ್ಧಾ ಶ್ರೀನಾಥ್ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ಬಾರಿಗೆ ಶ್ರದ್ಧಾ ಕಿಚ್ಚನ ಜೊತೆ ರೊಮ್ಯಾನ್ಸ್ ಮಾಡುತ್ತಿದ್ದಾರೆ. ಫ್ರೆಶ್ ಕಾಂಬಿನೇಶನ್ ಮತ್ತು ಸಾಕಷ್ಟು ಹೊಸತನಗಳಿಂದ ಕೂಡಿರುವ ಫ್ಯಾಂಟಮ್ ಸಿನಿಮಾದ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ.


Click it and Unblock the Notifications











