ಪವರ್ ಸ್ಟಾರ್ ಫ್ಯಾನ್ಸ್ ಗೆ ಗುಡ್ ನ್ಯೂಸ್: ಕಿರುಚಿತ್ರವಾಗಿದೆ ಪುನೀತ್ ಜೀವನಚರಿತ್ರೆ.!
Recommended Video
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆಲ್ಲಾ ಖುಷಿ ನೀಡುವ ಸುದ್ದಿಯೊಂದು ಹೊರಬಿದ್ದಿದೆ. ಈ ವರ್ಷದ ಅಪ್ಪು ಹುಟ್ಟುಹಬ್ಬದೊಂದು ಪುನೀತ್ ಫ್ಯಾನ್ಸ್ ಗೆ ಸಿಕ್ಕಾಪಟ್ಟೆ ಸ್ಪೆಷಲ್ ಆಗಿರುವ ಉಡುಗೊರೆಯೊಂದು ಸಿಗಲಿದೆ. ವಿಶೇಷ ಅಂದ್ರೆ, ಆ ಉಡುಗೊರೆಯನ್ನ ರೆಡಿ ಮಾಡಿರುವುದು ಅಪ್ಪು ಅಭಿಮಾನಿಗಳೇ.!
ಅಪ್ಪು ಅಭಿಮಾನಿಗಳಿಂದ, ಅಪ್ಪು ಅಭಿಮಾನಿಗಳಿಗಾಗಿ, ಅಪ್ಪು ಅಭಿಮಾನಿಗಳಿಗೋಸ್ಕರ 'ಅಜಾತಶತ್ರು' ಎಂಬ ಕಿರುಚಿತ್ರ ಬಿಡುಗಡೆ ಆಗಲಿದೆ. ಅಣ್ಣಾವ್ರ ಮಗ, ರಾಜರತ್ನ, ಸರ್ವೋತ್ತಮ ಪುನೀತ್ ರಾಜ್ ಕುಮಾರ್ ಜೀವನ ಮತ್ತು ಅವರು ಮಾಡಿರುವ ಉತ್ತಮ ಕಾರ್ಯಗಳ ಕುರಿತಾದ ಶಾರ್ಟ್ ಫಿಲ್ಮ್ ಈ 'ಅಜಾತಶತ್ರು'. ಮುಂದೆ ಓದಿರಿ...

ಪುನೀತ್ ರಾಜ್ ಕುಮಾರ್ ಗೆ ಟ್ರಿಬ್ಯೂಟ್
ಆರು ತಿಂಗಳ ಪುಟ್ಟ ಕಂದಮ್ಮ ಆಗಿದ್ದಾಗಲೇ, ಬೆಳ್ಳಿಪರದೆ ಮೇಲೆ ಕಾಣಿಸಿಕೊಂಡಿದ್ದ ಪುನೀತ್ ರಾಜ್ ಕುಮಾರ್ ಬಾಲನಟನಾಗಿ, ಯಶಸ್ವಿ ಕನ್ನಡ ನಟನಾಗಿ, ಉತ್ತಮ ಗಾಯಕನಾಗಿ ಸ್ಯಾಂಡಲ್ ವುಡ್ ನಲ್ಲಿ ಮಿಂಚಿದ್ದಾರೆ. ಇಂತಿಪ್ಪ ಪುನೀತ್ ರಾಜ್ ಕುಮಾರ್ ಗೆ ಟ್ರಿಬ್ಯೂಟ್ ನೀಡುವ ಸಲುವಾಗಿ ಅಭಿಮಾನಿಗಳು ಅಪ್ಪು ಬಗ್ಗೆ 'ಅಜಾತಶತ್ರು' ಎಂಬ ಕಿರುಚಿತ್ರ ಸಿದ್ಧ ಪಡಿಸಿದ್ದಾರೆ.

ಅಪ್ಪು ಅಭಿಮಾನಿಗಳಿಂದ ಕೊಡುಗೆ
'ಅಜಾತಶತ್ರು' ಎಂಬ ಕಿರುಚಿತ್ರವನ್ನು ರೆಡಿ ಮಾಡಿರುವುದು ತೇಜಸ್ ರಂಗನಾಥ್. ಮನೋಜ್ ಕುಮಾರ್, ವಿಶ್ವನಾಥ್ ಗೌಡ, ಶರತ್ ಕುಮಾರ್, ಪೃಥ್ವಿರಾಜ್, ತಿಲಕ್ ಗೌಡ, ಸಮಂಜು ಮಣಿ ಸೇರಿ 'ಅಜಾತಶತ್ರು' ಕಿರುಚಿತ್ರವನ್ನು ತಯಾರು ಮಾಡಿದ್ದಾರೆ.

ವಿಶ್ ಮಾಡಿದ ಧೀರೇನ್ ರಾಮ್ ಕುಮಾರ್
''ಅಜಾತಶತ್ರು' ಕಿರುಚಿತ್ರಕ್ಕೆ ಹಾಗೂ ಚಿತ್ರತಂಡಕ್ಕೆ ಒಳ್ಳೆಯ ಯಶಸ್ಸು ಸಿಗಲಿ'' ಎಂದು ಪುನೀತ್ ರಾಜ್ ಕುಮಾರ್ ಸೋದರಳಿಯ ನಟ ಧೀರೇನ್ ರಾಮ್ ಕುಮಾರ್ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ವಿಶ್ ಮಾಡಿದ್ದಾರೆ.

ಅಪ್ಪು ಹುಟ್ಟುಹಬ್ಬದಂದು ರಿಲೀಸ್
ಮಾರ್ಚ್ 17 ರಂದು ಪುನೀತ್ ರಾಜ್ ಕುಮಾರ್ ಜನ್ಮದಿನ. ಅಂದು ಈ 'ಅಜಾತಶತ್ರು' ಕಿರುಚಿತ್ರ ರಿಲೀಸ್ ಆಗಲಿದೆ. ಕನ್ನಡ ಚಿತ್ರರಂಗದಲ್ಲಿ ಯಾವುದೇ ವಿವಾದಗಳಲ್ಲಿ ಸಿಲುಕದ, ಸ್ನೇಹಜೀವಿ ಆಗಿರುವ ಪುನೀತ್ ರಾಜ್ ಕುಮಾರ್ ಕುರಿತಾದ ಕಿರುಚಿತ್ರವನ್ನು ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ.


Click it and Unblock the Notifications











