twitter
    For Quick Alerts
    ALLOW NOTIFICATIONS  
    For Daily Alerts

    'ವಿಕ್ರಾಂತ್ ರೋಣ'ನಿಗೆ ಅಂಜಿದ ಅಜಯ್ ದೇವಗನ್ ಸಿನಿಮಾ ಬಿಡುಗಡೆ ಮುಂದೂಡಿಕೆ!

    |

    ನಟ ಕಿಚ್ಚ ಸುದೀಪ್ ಮತ್ತು ಅಜಯ್ ದೇವಗನ್ ಇತ್ತೀಚೆಗೆ ಹೆಚ್ಚು ಸುದ್ದಿ ಆಗಿದ್ದು ಹಿಂದಿ ಭಾಷೆಯ ವಿಚಾರದಲ್ಲಿ. ಹಿಂದಿ ಭಾಷೆ ರಾಷ್ಟ್ರ ಭಾಷೆ, ಅದನ್ನು ಒಪ್ಪಿಕೊಳ್ಳಿ ಎಂದು ಸುದೀಪ್‌ಗೆ ಅಜಯ್ ದೇವಗನ್ ಟ್ವೀಟ್ ಮೂಲಕ ಟಾಂಗ್ ಕೊಟ್ಟಿದ್ದರು.

    ಅದೇ ರೀತಿ ಸುದೀಪ್ ಕೂಡ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯೇ ನೀಡಿದ್ದರು. ನಂತರ ಅಜಯ್ ದೇವಗನ್ ಕಿಚ್ಚನ ಬಳಿ ಕ್ಷಮೆ ಕೇಳಿದ್ದರು. ನಂತರ ಈ ವಿಚಾರವಾಗಿ ಸಾಕಷ್ಟು ಚರ್ಚೆಗಳು ನಡೆದವು. ಆದರೆ ಸುದೀಪ್ ಮತ್ತು ಅಜಯ್ ದೇವಗನ್ ನಡುವಿನ ವಾಕ್ ಸಮರ ಅವರ ಸಿನಿಮಾ ತನಕವೂ ತಲುಪಿತು.

    ಹಿಂದಿ ರಾಷ್ಟ್ರ ಭಾಷೆ ಎಲ್ಲರೂ ಗೌರವಿಸಿ: ಬಾಲಿವುಡ್‌ ನಟ ಅರ್ಜುನ್ ರಾಮ್‌ಪಾಲ್!ಹಿಂದಿ ರಾಷ್ಟ್ರ ಭಾಷೆ ಎಲ್ಲರೂ ಗೌರವಿಸಿ: ಬಾಲಿವುಡ್‌ ನಟ ಅರ್ಜುನ್ ರಾಮ್‌ಪಾಲ್!

    ವಿಕ್ರಾಂತ್ ರೋಣ ಸಿನಿಮಾ ರಿಲೀಸ್ ದಿನಾಂಕ ಮೊದಲೆ ಪ್ರಕಟ ಆಗಿತ್ತು. ಆದರೆ ಅದೇ ದಿನಾಂಕಕ್ಕೆ ಅಜಯ್ ದೇವಗನ್ ಹೊಸ ಸಿನಿಮಾ ರಿಲೀಸ್ ದಿನಾಂಕ ಅನೌನ್ಸ್ ಮಾಡಿತ್ತು. ಹಾಗಾಗಿ ಕಿಚ್ಚ ಮತ್ತು ಅಜಯ್ ದೇವಗನ್ ನಡುವೆ ಬಾಕ್ಸಾಫೀಸ್ ವಾರ್ ನಡೆಲಿದೆ ಎನ್ನಲಾಗಿತ್ತು. ಆದರೆ ಈಗ ಅಜಯ್ ದೇವಗನ್ ಯುಟರ್ನ್ ಹೊಡೆದಿದ್ದಾರೆ.

    ತೆಲುಗಿನಲ್ಲಿ 'ಗಡಂಗ್ ರಕ್ಕಮ್ಮಾ' ಕಮಾಲ್!ತೆಲುಗಿನಲ್ಲಿ 'ಗಡಂಗ್ ರಕ್ಕಮ್ಮಾ' ಕಮಾಲ್!

     ಜುಲೈ 29ಕ್ಕೆ 'ಥ್ಯಾಂಕ್ ಗಾಡ್'!

    ಜುಲೈ 29ಕ್ಕೆ 'ಥ್ಯಾಂಕ್ ಗಾಡ್'!

    ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ಜುಲೈ 28ಕ್ಕೆ ರಿಲೀಸ್ ಮಾಡುವುದಾಗಿ ಸಿನಿಮಾ ತಂಡ ಹೇಳಿಕೊಂಡಿದೆ. ಆದರೆ ಇದೆ ಬೆನ್ನಲ್ಲೆ ಒಂದು ದಿನ ತಡವಾಗಿ ಜುಲೈ 29ಕ್ಕೆ ಅಜಯ್ ದೇವಗನ್ ಅಭಿನಯದ ಥ್ಯಾಂಕ್ ಗಾಡ್ ಸಿನಿಮಾ ರಿಲೀಸ್ ದಿನಾಂಕವನ್ನು ನಿಗದಿ ಮಾಡಿಕೊಂಡಿತ್ತು. ಹೀಗಾಗಿ ಸುದೀಪ್ 'ವಿಕ್ರಾಂತ್ ರೋಣ' ಮತ್ತು 'ಥ್ಯಾಂಕ್ ಗಾಡ್' ಸಿನಿಮಾ ಬಾಕ್ಸಫೀಸ್‌ನಲ್ಲಿ ಮುಖಾ ಮುಖಿ ಆಗಲಿವೆ ಎನ್ನಲಾಗಿತ್ತು.

     ಒಂದು ಹೆಜ್ಜೆ ಹಿಂದೆ ಇಟ್ಟ ಅಜಯ್ ದೇವಗನ್!

    ಒಂದು ಹೆಜ್ಜೆ ಹಿಂದೆ ಇಟ್ಟ ಅಜಯ್ ದೇವಗನ್!

    ಈಗ ಬಾಲಿವುಡ್ ಥ್ಯಾಂಕ್ ಗಾಡ್ ಸಿನಿಮಾ ಹಿಂದೆ ಸರಿದದೆ. ಸದ್ಯ ಚಿತ್ರದ ರಿಲೀಸ್ ದಿನಾಂಕವನ್ನು ಸಿನಿಮಾ ತಂಡ ಮುಂದೂಡಿದೆ. 'ವಿಕ್ರಾಂತ್ ರೋಣ' ಹಿಂದಿಯಲ್ಲೂ ತೆರೆಗೆ ಬರುತ್ತಾ ಇರುವುದರಿಂದ, ಈ ಚಿತ್ರ ವಿಕ್ರಾಂತ್ ರೋಣನ ಜೊತೆಗೆ ತೆರೆಗೆ ಬರುದು ಉತ್ತಮ ನಿರ್ಧಾರ ಅಲ್ಲ ಅಂತ ಹೇಳಲಾಗುತ್ತಾ ಇತ್ತು. ಅಂತೆಯೇ ಈಗ ಸಿನಿಮಾ ಪೋಸ್ಟ್ ಪೋನ್ ಆಗಿದೆ. ಚಿತ್ರದ ವಿಎಫ್‌ಎಕ್ಸ್ ಕೆಲಸಗಳು ತಡವಾಗುತ್ತಾ ಇವೆ ಎನ್ನುವ ಕಾರಣ ನೀಡಿದೆ.

     'ವಿಕ್ರಾಂತ್ ರೋಣ'ನಿಗೆ ಹೆದರಿತಾ ಬಾಲಿವುಡ್!

    'ವಿಕ್ರಾಂತ್ ರೋಣ'ನಿಗೆ ಹೆದರಿತಾ ಬಾಲಿವುಡ್!

    ವಿಕ್ರಾಂತ್ ರೋಣ ಕನ್ನಡದ ಬಹುದೊಡ್ಡ ಸಿನಿಮಾಗಳಲ್ಲಿ ಒಂದು. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಆಗಿದೆ. ಇದು ಹೇಳಿ, ಕೇಳಿ ಪ್ಯಾನ್ ಇಂಡಿಯಾ ಸಿನಿಮಾ. ಎಲ್ಲಾ ರೀತಿಯ ಪ್ರೇಕ್ಷಕರ ಅಭಿರುಗೆ ತಕ್ಕಹಾಗೆ ಸಿನಿಮಾ ಮಾಡಲಾಗಿದೆ. ಹಾಗಾಗಿ ಈ ಸಿನಿಮಾ ಕೂಡ ಹಿಂದಿ ಬಾಕ್ಸಾಫೀಸ್ ಚಿಂದಿ ಮಾಡುವ ಲಕ್ಷಣಗಳು ಇವೆ. ಹಾಗಾಗಿ 'ವಿಕ್ರಾಂ ರೋಣ' ಅಂತಹ ಸಿನಿಮಾಗಳ ಎದುರು ನಿಲ್ಲಲು ಕೊಂಚ ಯೋಚನೆ ಮಾಡಬೇಕಾಗುತ್ತದೆ. ಹಾಗಾಗಿಯೇ ಅಜಯ್ ದೇವಗನ್ ಸಿನಿಮಾ ರಿಲೀಸ್‌ನಿಂದ ಹಿಂದೆ ಸರಿದಿದೆ.

     'ಕೆಜಿಎಫ್ 2' ಮುಂದೆ ನೆಲಕಚ್ಚಿದ ರನ್ ವೇ 34!

    'ಕೆಜಿಎಫ್ 2' ಮುಂದೆ ನೆಲಕಚ್ಚಿದ ರನ್ ವೇ 34!

    ಇನ್ನು ಕನ್ನಡದ 'ಕೆಜಿಎಫ್ 2' ಸಿನಿಮಾ ರಿಲೀಸ್ ಆದಾಗ ಒಂದು ದಿನದ ಅಂತರದಲ್ಲಿ ತಮಿಳಿನ ಬೀಸ್ಟ್ ರಿಲೀಸ್ ಆಗಿ ಸೋತಿತ್ತು. ನಂತರ ಬಂದ ಬಾಲಿವುಡ್‌ನ ರನ್ ವೇ 34, ' ಹೀರೋಪಂತಿ 2' ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸೋಲುಂಡ ಉದಾಹರಣೆ ಕಣ್ಣಮುಂದೆ ಇದೆ. ಅದರಲ್ಲೂ ರನ್ ವೇ 34 ಅಜಯ್ ದೇವಗನ್ ಅಭಿನಯದ ಸಿನಿಮಾ. ಹಾಗಾಗಿ ಮತ್ತೆ ಚಾನ್ಸ್ ತೆಗೆದುಕೊಳ್ಳಲು ಅಜಯ್ ದೇವಗನ್ ಸಿದ್ಧರಿಲ್ಲ ಎಂದು ಕಾಣುತ್ತದೆ.

    English summary
    Ajay Devgan's 'Thank God' release Postpone To Avoid Clash With Sudeep's 'Vikrat Rona', Know More
    Friday, May 27, 2022, 9:30
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X