Don't Miss!
- News
7th Pay Commission; ವೇತನ ಶ್ರೇಣಿ, ಹೊಸ ವೇತನ ರಚನೆ ಮಾನದಂಡಗಳು
- Lifestyle
Horoscope Today 1 Feb 2023: ಬುಧವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ವಿವೋ Y100; ಖರೀದಿಗೆ ಕ್ಯೂ ಖಚಿತ!
- Automobiles
ಭಾರತದಲ್ಲಿ ಹ್ಯುಂಡೈ i20 ಕಾರುಗಳ ಬೆಲೆ ಏರಿಕೆ
- Sports
ಕೌಂಟಿ ಚಾಂಪಿಯನ್ಶಿಪ್: ಲೂಸಿಸ್ಟರ್ಶೈರ್ ಪರ ಆಡಲಿದ್ದಾರೆ ಅಜಿಂಕ್ಯಾ ರಹಾನೆ
- Finance
Jio 5G services: ಇಂದಿನಿಂದ ಮತ್ತೆ 34 ನಗರಗಳಲ್ಲಿ ಪ್ರಾರಂಭ- ಮಧ್ಯ ಕರ್ನಾಟಕದ ಯಾವ ನಗರಕ್ಕೆ ಕೊಡುಗೆ? ಮಾಹಿತಿ ಪಡೆಯಿರಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕೊನೆಗೂ ಬಾಲಿವುಡ್ಗೆ ಜೀವ ಬಂತು: 3 ದಿನದ 'ದೃಶ್ಯಂ 2' ಬಾಕ್ಸಾಫೀಸ್ ಕಲೆಕ್ಷನ್ ಇಷ್ಟು!
ಸೋತು ಸೋತು ಸುಣ್ಣವಾಗಿದ್ದ ಬಾಲಿವುಡ್ಗೆ 'ದೃಶ್ಯಂ 2' ಹೊಸ ಚೈತನ್ಯ ನೀಡಿದೆ. ಈ ವರ್ಷ ರಿಲೀಸ್ ಆಗಿದ್ದ ಶೇ. 80ರಷ್ಟು ಬಾಲಿವುಡ್ ಸಿನಿಮಾಗಳು ಬಾಕ್ಸಾಫೀಸ್ನಲ್ಲಿ ಮಕಾಡೆ ಮಲಗಿವೆ. ಹೀಗಾಗಿ 'ದೃಶ್ಯಂ 2' ಮೇಲೆ ಸಹಜವಾಗಿಯೇ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಅದರಂತೆ ಸಿನಿಮಾಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ.
'ದೃಶ್ಯಂ 2' ರಿಲೀಸ್ ಆದಲ್ಲಿಂದ ಸಿನಿಮಾ ಬಾಕ್ಸಾಫೀಸ್ನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡುತ್ತಿದೆ. ಬಾಲಿವುಡ್ನಲ್ಲಿ ಮೊದಲ ಮೂರು ದಿನಗಳಲ್ಲಿ ಅತೀ ಹೆಚ್ಚು ಗಳಿಕೆ ಕಂಡಿರೋ 'ಭೂಲ್ ಭೂಲಯ್ಯ 2', 'ಬ್ರಹ್ಮಾಸ್ತ್ರ' ಸಿನಿಮಾ ಕಲೆಕ್ಷನ್ ಅನ್ನು 'ದೃಶ್ಯಂ 2' ಹಿಂದಿಕ್ಕಿದೆ.
ಅತಿಥಿ
ಪಾತ್ರಕ್ಕೆ
ಅತೀ
ಹೆಚ್ಚು
ಕೋಟಿ
ಕೋಟಿ
ಕೇಳುವ
ಬಾಲಿವುಡ್
ಸ್ಟಾರ್ಗಳು
ಇವರೇ:
ಸಂಭಾವನೆ
ಎಷ್ಟು?
'ದೃಶ್ಯಂ 2' ಕಲೆಕ್ಷನ್ ಇಲ್ಲಿವರೆಗೂ ಸೋಲಿನ ಸುಳಿಗೆ ಸಿಲುಕಿ ಒದ್ದಾಡುತ್ತಿದ್ದ ಬಾಲಿವುಡ್ ಮಂದಿಗೆ ಜೀವ ಬಂದಂತಾಗಿದೆ. ಹಾಗಿದ್ದರೆ, ಮೊದಲ ಮೂರು ದಿನಗಳ ಕಲೆಕ್ಷನ್ 'ದೃಶ್ಯಂ 2' ಕಲೆಕ್ಷನ್ ಹೇಗಿದೆ? ಎಲ್ಲೆಲ್ಲಿ ಎಷ್ಟೆಷ್ಟು ಕಲೆಕ್ಷನ್ ಆಗಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

'ದೃಶ್ಯಂ 2' (ಹಿಂದಿ) 3ನೇ ದಿನ ಕಲೆಕ್ಷನ್ ಎಷ್ಟು?
ಮಲಯಾಳಂ ಸೂಪರ್ಸ್ಟಾರ್ ಮೋಹನ್ ಲಾಲ್ ಅಭಿನಯದ 'ದೃಶ್ಯಂ 2' ಸಿನಿಮಾವನ್ನೇ ಬಾಲಿವುಡ್ಗೆ ರಿಮೇಕ್ ಮಾಡಲಾಗಿತ್ತು. ಅಜಯ್ ದೇವಗನ್, ಟಬು, ಅಕ್ಷಯ್ ಖನ್ನಾ ಹಿಂದಿ ರಿಮೇಕ್ನಲ್ಲಿ ಕಾಣಿಸಿಕೊಂಡಿದ್ದರು. ಅದೇ ಸಿನಿಮಾವೀಗ ಬಿಡುಗಡೆಯಾಗಿದ್ದು, ಬಾಕ್ಸಾಫೀಸ್ನಲ್ಲಿ ಭರ್ಜರಿ ಗಳಿಕೆ ಮಾಡುತ್ತಿದೆ. 'ದೃಶ್ಯಂ 2' ಸಿನಿಮಾ 3ನೇ ದಿನ (ನವೆಂಬರ್ 20) ಸುಮಾರು 27.17 ಕೋಟಿ ರೂ. ಕಲೆಕ್ಷನ್ ಮಾಡಿದೆ. ಈ ಮೂಲಕ ಮತ್ತೆ ಬಾಲಿವುಡ್ ಮಂದಿಗೆ ಹಳೆಯ ದಿನಗಳನ್ನು ನೆನಪಿಸಿದೆ.

ಮೊದಲ ವಾರದ ಕಲೆಕ್ಷನ್ ಎಷ್ಟು?
ದೃಶ್ಯಂ 2 (ಹಿಂದಿ) ಮೊದಲ ದಿನ (ನವೆಂಬರ್ 18)ದಂದು 15.38 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಹಾಗೇ ಎರಡನೇ ದಿನ (ನವೆಂಬರ್ 19)ದಂದು ಗಳಿಕೆಯಲ್ಲಿ ಗಣನೀಯವಾಗಿ ಏರಿಕೆ ಕಂಡಿತ್ತು. ಬರೋಬ್ಬರಿ 21.59 ಕೋಟಿ ರೂಪಾಯಿ ಗಳಿಕೆ ಕಂಡು ಹೊಸ ಭರವಸೆಯನ್ನು ಮೂಡಿಸಿತ್ತು. ಅದೇ ಮೂರನೇ ದಿನ (ನವೆಂಬರ್ 20) 27.17 ಕೋಟಿ ರೂ. ಕಲೆಕ್ಷನ್ ಮಾಡಿದೆ. ಈ ಮೂರು ದಿನಗಳಲ್ಲಿ 'ದೃಶ್ಯಂ 2' 64.14 ಕೋಟಿ ರೂ. ಕಲೆಕ್ಷನ್ ಮಾಡಿದೆ. ಇದು ಬಾಲಿವುಡ್ಗೆ ಹೊಸ ಚೈತನ್ಯ ನೀಡಿದೆ.

'ದೃಶ್ಯಂ 2' ಹಿಂದಿಕ್ಕಿದ ಸಿನಿಮಾಗಳ್ಯಾವುವು?
2022ರಲ್ಲಿ ಕಾರ್ತಿಕ್ ಆರ್ಯನ್ ಅಭಿನಯದ 'ಭೂಲ್ ಭುಲಯ್ಯ 2'ಗೆ ಮಸ್ತ್ ಓಪನಿಂಗ್ ಸಿಕ್ಕಿತ್ತು. ಹಾಗೇ ರಣ್ಬೀರ್ ಕಪೂರ್ ಅಭಿನಯದ 'ಬ್ರಹ್ಮಾಸ್ತ್ರ' ಕೂಡ ಮೊದಲ ಮೂರು ದಿನಗಳಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಮೂದಲು ಮೂರು ದಿನಗಳ ಈ ಎರಡು ಸಿನಿಮಾಗಳ ಗಳಿಕೆಯನ್ನು ಉಡೀಸ್ ಮಾಡಿ ಮುನ್ನುಗುತ್ತಿದೆ. ಹೀಗೆ ಮುಂದುವರೆದರೆ ಈ ವಾರ ಕಳೆಯುವುದರೊಳಗೆ 'ದೃಶ್ಯಂ 2' 100 ಕೋಟಿ ರೂಪಾಯಿ ಕ್ಲಬ್ ಸೇರಬಹುದು ಎಂದು ಟ್ರೇಡ್ ಎಕ್ಸ್ಪರ್ಟ್ ನಿರೀಕ್ಷೆ ಮಾಡಿದ್ದಾರೆ.

ಬಾಲಿವುಡ್ಗೆ ಗೆಲುವು ಕೊಟ್ಟ ಸೌತ್ ರಿಮೇಕ್
ಹಿಂದಿ ಬೆಲ್ಟ್ಗಳಲ್ಲಿ ಬಾಲಿವುಡ್ ಸಿನಿಮಾ ತಲೆಕೆಳಗಾಗಿತ್ತು. ದಕ್ಷಿಣ ಭಾರತದ ಸಿನಿಮಾಗಳು ಸದ್ದು ಮಾಡುತ್ತಿದ್ದವು. ಈ ಕಾರಣಕ್ಕೆ ಬಾಲಿವುಡ್ ಮಂದಿ ನಿರ್ಮಾಣ ಮಾಡುತ್ತಿರೋ ಸಿನಿಮಾಗಳು ಟೀಕೆಯನ್ನು ಎದುರಿಸಿದ್ದವು. ಆದ್ರೀಗ ಬಹಳ ದಿನಗಳ ಬಳಿಕ ಬಾಲಿವುಡ್ಗೆ ಗೆಲುವು ಸಿಕ್ಕಿದೆ. ಅದೂ ಕೂಡ ದಕ್ಷಿಣ ಭಾರತದ ಸಿನಿಮಾದಿಂದಲೇ ಅನ್ನೋದು ವಿಶೇಷ. ಸದ್ಯ 'ದೃಶ್ಯಂ 2' ಬಾಕ್ಸಾಫೀಸ್ನಲ್ಲಿ ಬೇಜಾನ್ ಸದ್ದು ಮಾಡುತ್ತಿದೆ. ಈ ಮಧ್ಯೆ ಹಿಂದಿ ಬೆಲ್ಟ್ನಲ್ಲಿ ಮಿಂಚುತ್ತಿರೋ 'ಕಾಂತಾರ' ಕಲೆಕ್ಷನ್ ಏನಾಗುತ್ತೋ ಅನ್ನೋ ಕುತೂಹಲವಿದೆ.