»   » 'ಕೃಷ್ಣ-ರುಕ್ಕು' ರೋಮ್ಯಾನ್ಸ್ ನೋಡಲು ನೀವು ರೆಡಿನಾ?

'ಕೃಷ್ಣ-ರುಕ್ಕು' ರೋಮ್ಯಾನ್ಸ್ ನೋಡಲು ನೀವು ರೆಡಿನಾ?

Posted By:
Subscribe to Filmibeat Kannada

'ಕೃಷ್ಣನ್ ಲವ್ ಸ್ಟೋರಿ', 'ಕೃಷ್ಣನ್ ಮ್ಯಾರೇಜ್ ಸ್ಟೋರಿ', 'ಕೃಷ್ಣಲೀಲಾ' ಸೇರಿದಂತೆ 'ಕೃಷ್ಣ' ಸೀರೀಸ್ ಸಿನಿಮಾಗಳಿಗೆ ಫೇಮಸ್ ಆಗಿರುವ ನಟ ಅಜೇಯ್ ರಾವ್ ಇದೀಗ ರುಕ್ಮಿಣಿ ಜೊತೆ ನಿಮ್ಮ ಮುಂದೆ ಹಾಜರಾಗುತ್ತಿದ್ದಾರೆ.

ಹೌದು, ಅಜೇಯ್ ರಾವ್ ಮತ್ತು ಬೇಬಿ ಡಾಲ್ ಅಮೂಲ್ಯ ನಟಿಸಿರುವ ನೂತನ ಸಿನಿಮಾ 'ಕೃಷ್ಣ-ರುಕ್ಕು' ಇದೇ ತಿಂಗಳ 26ನೇ ತಾರೀಖು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.


ajay-rao-and-amulya-starrer-krishna-rukku-to-release-on-feb-26th

ಶ್ರೀ ವೆಂಕಟೇಶ್ವರ ಕೃಪಾ ಎಂಟರ್ ಟೈನರ್ ಅರ್ಪಿಸುವ, ವಾಸವಿ ಎಂಟರ್ ಪ್ರೈಸಸ್ ಲಾಂಛನದಲ್ಲಿ ಉದಯ್.ಕೆ.ಮೆಹ್ತಾ ಅವರು ನಿರ್ಮಿಸುತ್ತಿರುವ ಚಿತ್ರ 'ಕೃಷ್ಣ ರುಕ್ಕು'.


ಅಪ್ಪಟ ಲವ್ ಸ್ಟೋರಿ ಆಗಿರುವ ಈ ಚಿತ್ರಕ್ಕೆ ಅನಿಲ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಶೋಭರಾಜ್, ಗಿರಿಜಾ ಲೋಕೇಶ್, ಲೇಖಾ ಚಂದ್ರ, ಸಿದ್ಧಾರ್ಥ್ ಮಾದ್ಯಮಿಕ, ವಿಜಯ್ ಚೆಂಡೂರ್ ಮುಂತಾದವರು ತಾರಾಬಳಗದಲ್ಲಿದ್ದಾರೆ.['ಕೃಷ್ಣ' ಅಜೇಯ್ ರಾವ್ ಗೆ ಬೇಬಿ ಡಾಲ್ ಅಮೂಲ್ಯ 'ರುಕ್ಕು']


ajay-rao-and-amulya-starrer-krishna-rukku-to-release-on-feb-26th

ಶ್ರೀಧರ್.ವಿ.ಸಂಭ್ರಮ್ ಸಂಗೀತ ನಿರ್ದೇಶನ, ರವಿವರ್ಮಾ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಇಡೀ ಫ್ಯಾಮಿಲಿ ಕೂತು ನೋಡಬಹುದಾದ ಸಿನಿಮಾ 'ಕೃಷ್ಣ-ರುಕ್ಕು' ಬರುವ ಶುಕ್ರವಾರ ನಿಮ್ಮ ಮುಂದೆ. ನೋಡೋಕೆ ನೀವು ರೆಡಿನಾ?


English summary
Kannada Actor Ajay Rao and Amulya starrer 'Krishna-Rukku' is all set to release on February 26th. The movie is directed by Anil Kumar.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada