ಹರಿಪ್ರಿಯಾ, ಅಜಯ್ ರಾವ್ ಖುಷಿಗೆ ಒಂದೇ ಕಾರಣ ಏನದು?
Recommended Video

ನಟಿ ಹರಿಪ್ರಿಯಾ ಈಗ ಸಿನಿಮಾಗಳ ಮೇಲೆ ಸಿನಿಮಾ ಮಾಡುತ್ತಿದ್ದಾರೆ. ಇತ್ತ ಅಜಯ್ ರಾವ್ ಕೂಡ ಸಖತ್ ಬ್ಯುಸಿ ಇದ್ದಾರೆ. ಇದೀಗ ಈ ಇಬ್ಬರ ಸಂತಸಕ್ಕೆ ಒಂದೇ ಕಾರಣ ಸಿಕ್ಕಿದೆ.
ಹೌದು, ಹರಿಪ್ರಿಯಾ ಹಾಗೂ ಅಜಯ್ ರಾವ್ ಈಗ 25ನೇ ಸಿನಿಮಾದ ಕೆಲಸಗಳಲ್ಲಿ ತೊಡಗಿದ್ದಾರೆ. ಒಂದೇ ಸಮಯದಲ್ಲಿ ಈ ಇಬ್ಬರು ಸಿಲ್ವರ್ ಜೂಬ್ಲಿಯ ಸಂಭ್ರಮದಲ್ಲಿ ಇದ್ದಾರೆ. ವಿಶೇಷ ಅಂದರೆ, ಈ ಇಬ್ಬರ 25ನೇ ಸಿನಿಮಾದ ಹೆಸರುಗಳಲ್ಲಿ ಸಹ ಕೊಂಚ ಸಾಮ್ಯತೆ ಇದೆ.
ಹಾಗಾದರೆ, ಅಜಯ್ ರಾವ್ ಮತ್ತು ಹರಿಪ್ರಿಯಾ ಅವರ 25ನೇ ಸಿನಿಮಾ ಯಾವುದು, ಆ ಸಿನಿಮಾಗಳ ವಿಶೇಷತೆ ಏನು ಎಂಬುದು ಮುಂದಿದೆ ಓದಿ...

ಹರಿಪ್ರಿಯಾ 25 ನೇ ಸಿನಿಮಾ
'ಡಾಟರ್ ಆಫ್ ಪಾರ್ವತಮ್ಮ' ನಟಿ ಹರಿಪ್ರಿಯಾ ಅವರ 25ನೇ ಸಿನಿಮಾವಾಗಿದೆ. 2007 ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಹರಿಪ್ರಿಯಾ ಅವರು ಈಗ ಸಿಲ್ವರ್ ಜೂಬ್ಲಿ ಸಂಭ್ರಮದಲ್ಲಿ ಇದ್ದಾರೆ. 11 ವರ್ಷಗಳಲ್ಲಿ ಅವರು 25 ಸಿನಿಮಾಗಳನ್ನು ಮಾಡಿದ್ದಾರೆ.

ಟ್ರೆಂಡಿಂಗ್ ನಲ್ಲಿ ಚಿತ್ರದ ಟೀಸರ್
ಕಳೆದ ಶನಿವಾರ 'ಡಾಟರ್ ಆಫ್ ಪಾರ್ವತಮ್ಮ' ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಮೊದಲ ಬಾರಿಗೆ ಹರಿಪ್ರಿಯಾ ತನಿಖಾಧಿಕಾರಿ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ. ಟೀಸರ್ ನೋಡುಗರ ಗಮನ ಸೆಳೆದಿದೆ. ಪಾರ್ವತಮ್ಮನ ಪಾತ್ರದಲ್ಲಿ ಸುಮಲತಾ ಅಂಬರೀಶ್ ನಟಿಸುತ್ತಿದ್ದಾರೆ. ಸದ್ಯ ಈ ಚಿತ್ರದ ಟೀಸರ್ ಯೂಟ್ಯೂಬ್ ನಲ್ಲಿ 4ನೇ ಟ್ರೆಂಡಿಂಗ್ ವಿಡಿಯೋ ಆಗಿದೆ.

ಅಜಯ್ ರಾವ್ 25ನೇ ಸಿನಿಮಾ
'ತಾಯಿಗೆ ತಕ್ಕ ಮಗ' ಸಿನಿಮಾ ನಟ ಅಜಯ್ ರಾವ್ 25ನೇ ಸಿನಿಮಾವಾಗಿದೆ. ಈ ಸಿನಿಮಾವನ್ನು ಶಶಾಂಕ್ ನಿರ್ದೇಶನ ಮಾಡುತ್ತಿದ್ದಾರೆ. 'ಕೃಷ್ಣನ್ ಲವ್ ಸ್ಟೋರಿ' ಹಾಗೂ 'ಕೃಷ್ಣಲೀಲಾ' ಬಳಿಕ ಮತ್ತೆ ಈ ಜೋಡಿ ಒಂದಾಗಿದೆ. ಆಶಿಕಾ ರಂಗನಾಥ್ ಸಿನಿಮಾದ ನಾಯಕಿ ಆಗಿದ್ದು, ತಾಯಿಯ ಪಾತ್ರದಲ್ಲಿ ಸುಮಲತಾ ಕಾಣಿಸಿಕೊಂಡಿದ್ದಾರೆ.

ಎರಡೂ ಚಿತ್ರಗಳಲ್ಲಿ ಒಂದೇ ರೀತಿಯ ಹೆಸರು
ವಿಶೇಷ ಅಂದರೆ, ಈ ಎರಡು ಚಿತ್ರಗಳ ಹೆಸರಿನಲ್ಲಿ ಕೊಂಚ ಸಾಮ್ಯತೆ ಇದೆ. 'ತಾಯಿಗೆ ತಕ್ಕ ಮಗ' ಹಾಗೂ 'ಡಾಟರ್ ಆಫ್ ಪಾರ್ವತಮ್ಮ' ಎರಡು ಚಿತ್ರಗಳಲ್ಲಿ ತಾಯಿಯ ಪಾತ್ರಕ್ಕೆ ಪ್ರಮುಖ್ಯಾತೆ ಇದ್ದು, ಟೈಟಲ್ ಕೂಡ ಅದೇ ಹೆಸರಿನಿಂದ ಕೂಡಿದೆ. ಹೀಗಿದ್ದರೂ ಎರಡೂ ಸಿನಿಮಾಗಳಲ್ಲಿ ಬೇರೆ ಬೇರೆ ರೀತಿಯ ಕಥೆ ಇದೆ.

ಸುಮಲತಾ ಅವರೇ ತಾಯಿ
ಒಂದು 'ತಾಯಿಗೆ ತಕ್ಕ ಮಗ' ಸಿನಿಮಾದಲ್ಲಿ ಅಜಯ್ ರಾವ್ ತಾಯಿಯಾಗಿ ಸುಮಲತಾ ಅಂಬರೀಶ್ ನಟಿಸಿದ್ದಾರೆ. ಮತ್ತೊಂದು ಕಡೆ 'ಡಾಟರ್ ಆಫ್ ಪಾರ್ವತಮ್ಮ' ಸಿನಿಮಾದಲ್ಲಿಯೂ ಹರಿಪ್ರಿಯಾಗೆ ಸುಮಲತಾ ತಾಯಿಯಾಗಿದ್ದಾರೆ. ಎರಡೂ ಚಿತ್ರಗಳಲ್ಲಿ ಇರುವ ಸಾಮ್ಯತೆಗಳಲ್ಲಿ ಇದೂ ಒಂದಾಗಿದೆ.


Click it and Unblock the Notifications











