For Quick Alerts
  ALLOW NOTIFICATIONS  
  For Daily Alerts

  ರಚಿತಾ ರಾಮ್ ಮತ್ತೊಂದು ಸಿನಿಮಾ: 'ಲವ್ ಯೂ ರಚ್ಚು' ಎಂದ ಸ್ಟಾರ್ ನಟ

  |

  ಡಿಂಪಲ್ ಕ್ವೀನ್ ರಚಿತಾ ಕೈಯಲ್ಲಿ ಹತ್ತಾರು ಪ್ರಾಜೆಕ್ಟ್‌ಗಳಿವೆ. ಆದರೂ ಒಂದರ ಹಿಂದೆ ಒಂದರಂತೆ ಹೊಸ ಸಿನಿಮಾಗಳು ಸಹ ಸೇರುತ್ತಲೇ ಇದೆ. ರಮೇಶ್ ಅರವಿಂದ್ ಜೊತೆ 100, ಪ್ರಜ್ವಲ್ ಜೊತೆ ವೀರಂ, ಸತೀಶ್ ನೀನಾಸಂ ಜೊತೆ ಮ್ಯಾಟ್ನಿ, ಏಪ್ರಿಲ್, ಲಿಲ್ಲಿ, ಮಾನ್ಸೂನ್ ರಾಗಾ ಹೀಗೆ ಹಲವು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

  ಈಗ ಅಜಯ್ ರಾವ್ ಜೊತೆ ಹೊಸ ಪ್ರಾಜೆಕ್ಟ್‌ಗೆ ಸಹಿ ಹಾಕಿದ್ದು, ಮೊದಲ ಸಲ ಸ್ಯಾಂಡಲ್‌ವುಡ್ ಕೃಷ್ಣ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ರಚಿತಾ ಮತ್ತು ಅಜಯ್ ಚಿತ್ರಕ್ಕೆ 'ಲವ್ ಯೂ ರಚ್ಚು' ಎಂದು ಹೆಸರಿಡಲಾಗಿದೆಯಂತೆ.

  ಮಾರುವೇಷದಲ್ಲಿ ಕಮರ್ಷಿಯಲ್ ಸ್ಟ್ರೀಟ್ ಸುತ್ತಾಡಿದ ಕನ್ನಡದ ಖ್ಯಾತ ನಟಿಮಾರುವೇಷದಲ್ಲಿ ಕಮರ್ಷಿಯಲ್ ಸ್ಟ್ರೀಟ್ ಸುತ್ತಾಡಿದ ಕನ್ನಡದ ಖ್ಯಾತ ನಟಿ

  ಶಂಕರ್ ರಾಜ್ ಎಂಬ ಯುವ ನಿರ್ದೇಶಕ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದು, ಇದು ಇವರ ಮೊದಲ ಪ್ರಾಜೆಕ್ಟ್. ಜಿ ಸಿನಿಮಾಸ್ ಪ್ರೊಡಕ್ಷನ್ ಅಡಿಯಲ್ಲಿ ಗುರುದೇಶಪಾಂಡೆ ಲವ್ ಯೂ ರಚ್ಚುಗೆ ಬಂಡವಾಳ ಹಾಕಲಿದ್ದಾರೆ ಎಂದು ತಿಳಿದು ಬಂದಿದೆ.

  ಜನವರಿ 24ಕ್ಕೆ ಲವ್ ಯೂ ರಚ್ಚು ಸಿನಿಮಾದ ಮುಹೂರ್ತ ಕಾರ್ಯಕ್ರಮ ಮಾಡಲು ಚಿತ್ರತಂಡ ನಿರ್ಧರಿಸಿದೆ. ಇನ್ನುಳಿದಂತೆ ಈ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಅತಿ ಶೀಘ್ರದಲ್ಲಿ ಚಿತ್ರೀಕರಣ ಸಹ ಪ್ರಾರಂಭಿಸಲಿದೆ.

  ಪೆಂಟಗನ್ ಚಿತ್ರಕ್ಕೆ ಸಾಥ್ ನೀಡಿದ ಡಿಂಪಲ್ ಕ್ವೀನ್ ರಚಿತಾ ರಾಮ್ಪೆಂಟಗನ್ ಚಿತ್ರಕ್ಕೆ ಸಾಥ್ ನೀಡಿದ ಡಿಂಪಲ್ ಕ್ವೀನ್ ರಚಿತಾ ರಾಮ್

  ಪ್ರೇಮ್ ನಿರ್ದೇಶನದ ಏಕ್ ಲವ್ ಯಾ' ಸಿನಿಮಾದಲ್ಲೂ ರಚಿತಾ ರಾಮ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವೀರಂ ಚಿತ್ರದ ಕಾಸ್ಟ್ಯೂಮ್ ಖರೀದಿ ಮಾಡಲು ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ರಚಿತಾ ಮಾರುವೇಷದಲ್ಲಿ ಸುತ್ತಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

  ಧ್ರುವ ಸರ್ಜಾಗೆ ನಿಜಕ್ಕೂ ಮೈಲೇಜ್ ಕೊಡುತ್ತಾ ಪೊಗರು | Fimibeat Kannada
  English summary
  Kannada actor Ajay Rao and Rachita Ram sharing screen space together for the first time. the movie titled as a 'Love You Rachu'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X