ಮೊದಲ ಮಗುವಿನ ನಿರೀಕ್ಷೆಯಲ್ಲಿ ಅಜಯ್ ರಾವ್ ಪತ್ನಿ
ನಟ ಅಜಯ್ ರಾವ್ ಅವರ ಈ ವರ್ಷದ ಗಣೇಶ ಹಬ್ಬ ತುಂಬ ವಿಶೇಷವಾಗಿದೆ. ಅವರ ಈ ವರ್ಷದ ಹಬ್ಬವನ್ನು ಸ್ಪೆಷಲ್ ಆಗುವಂತೆ ಮಾಡಿರುವುದು ಪತ್ನಿ ಸ್ವಪ್ನ.
ಪ್ರತಿ ಹೆಣ್ಣಿಗೂ ತಾಯಿ ಆಗಬೇಕು ಎಂಬ ಕನಸು ಇರುತ್ತದೆ. ತಾಯ್ತನ ಎನ್ನುವುದು ಪ್ರಕೃತಿ ಒಬ್ಬ ಹೆಣ್ಣಿಗೆ ನೀಡಿರುವ ಅದ್ಬುತ ವರ. ಅದೇ ರೀತಿ ಸ್ವಪ್ನ ಅಜಯ್ ರಾವ್ ಈಗ ತುಂಬು ಗರ್ಭಿಣಿ ಆಗಿದ್ದಾರೆ. ತಾಯ್ತನದ ಸಂತಸದಲ್ಲಿ ಇರುವ ಅವರ ಫೋಟೋ ಗಳನ್ನು ಅಜಯ್ ರಾವ್ ಹಂಚಿಕೊಂಡಿದ್ದಾರೆ.

ಗಣೇಶ ಹಬ್ಬದ ವಿಶೇಷವಾಗಿ ಸ್ವಪ್ನ ಅವರೇ ತಮ್ಮ ಕೈಯಾರೆ ಗಣೇಶನ ಚಿತ್ರ ಬಿಡಿಸಿದ್ದಾರೆ. ಸುಂದರ ಗಣೇಶನ ಜೊತೆಗೆ ಅಭಿಮಾನಿಗಳಿಗೆ ಅಜಯ್ ರಾವ್ ಹಬ್ಬದ ಶುಭಾಶಯ ತಿಳಿಸಿದ್ದಾರೆ.

ಅಂದಹಾಗೆ, 'ಸ್ಯಾಂಡಲ್ ವುಡ್ ಕೃಷ್ಣ' ಅಜೇಯ್ ರಾವ್ 2014ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಹೊಸಪೇಟೆ ಮೂಲದವರಾದ ಸ್ವಪ್ನ ಅವರನ್ನು ಅಜಯ್ ರಾವ್ ಪ್ರೀತಿಸಿ ಮದುವೆ ಆಗಿದ್ದರು.
More from Filmibeat
English summary
Kannada actor Ajay Rao and Swapna expecting their first child.


Click it and Unblock the Notifications











