ಪ್ರೀತಿಯ ತಾಯಿ ಹುಟ್ಟುಹಬ್ಬ ಆಚರಿಸಿದ ಅಜಯ್ ರಾವ್
ನಟ ಅಜಯ್ ರಾವ್ ತಮ್ಮ ಪ್ರೀತಿಯ ತಾಯಿಯ ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದಾರೆ. ಅಮ್ಮನ 71 ನೇ ವರ್ಷದ ಬರ್ತ್ ಡೇಯನ್ನು ಸಂಭ್ರಮದಿಂದ ಮಾಡಿದ್ದಾರೆ.
ಅಜಯ್ ರಾವ್ ಅವರ ಇಡೀ ಕುಟುಂಬ ಹಿರಿ ಜೀವದ ಹುಟ್ಟುಹಬ್ಬದಲ್ಲಿ ಜೊತೆಯಾಗಿದೆ. ಕೇಕ್ ಕಟ್ ಮಾಡಿಸಿ ಅವರಿಗೆ ಶುಭಾಶಯ ತಿಳಿಸಿದೆ. ಅಜಯ್ ರಾವ್ ಪತ್ನಿ ಸ್ವಪ್ನ ಕೂಡ ಅತ್ತೆಯ ಹುಟ್ಟುಹಬ್ಬದಲ್ಲಿ ಅವರ ಜೊತೆಗೆ ಇದ್ದರು.
ಕಳೆದ ವರ್ಷ ಅಜಯ್ ರಾವ್ ಕುಟುಂಬಕ್ಕೆ ಹೊಸ ಸದಸ್ಯೆ ಬಂದಿದ್ದಾರೆ. ಅಜಯ್ ಹಾಗೂ ಸ್ವಪ್ನ ಬಾಳಲ್ಲಿ ಮಹಾಲಕ್ಷ್ಮಿಯಾಗಿ ಮಗಳು ಚರಿಷ್ಮಾ ಬಂದಿದ್ದಾಳೆ. ಮೊಮ್ಮಗಳನ್ನು ಕೂರಿಸಿಕೊಂಡು ಆಕೆಗೆ ಮೊದಲು ಕೇಕ್ ತಿನ್ನಿಸಿ ಅಜ್ಜಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ತಾಯಿಯ ಹುಟ್ಟುಹಬ್ಬದ ವಿಡಿಯೋವನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಜಯ್ ಅಭಿಮಾನಿಗಳು ಶುಭಾಶಯ ತಿಳಿಸಿದ್ದಾರೆ.
ಅಜಯ್ ರಾವ್ 'ತಾಯಿಗೆ ತಕ್ಕ ಮಗ' ಸಿನಿಮಾದ ನಂತರ 'ಕೃಷ್ಣ ಟಾಕೀಸ್', 'ಶೋಕಿವಾಲ', 'ರೈನ್ ಬೋ' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
More from Filmibeat
English summary
Kannada actor Ajay Rao celebrated his mother birthday.


Click it and Unblock the Notifications











