ಅಜೇಯ್ ರಾವ್ 'ಜೈ ಭಜರಂಗ ಬಲಿ' ಹಿಂದಿಗೆ ಡಬ್
'ಎಕ್ಸ್ ಕ್ಯೂಸ್ ಮಿ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಅಡಿಯಿಟ್ಟ ನಟ ಅಜೇಯ್ ರಾವ್. ಇದೀಗ ಅವರ ಹೆಸರನ್ನು ಸಂಖ್ಯಾಶಾಸ್ತ್ರಕ್ಕೆ ಅನುಗುಣವಾಗಿ ಕೃಷ್ಣ ಅಜೇಯ್ ರಾವ್ ಎಂದು ಬದಲಾಯಿಸಿಕೊಂಡಿದ್ದಾರೆ. ಹೆಸರಿನ ಬದಲಾವಣೆ ಜೊತೆಗೆ 'ಜೈ ಭಜರಂಗ ಬಲಿ' ಎಂದು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ ಅಜೇಯ್.
'ರೋಜ್' ಚಿತ್ರದ ಬಳಿಕ ಅಜೇಯ್ ಅಭಿನಯದ ಚಿತ್ರವಿದು. ಅಜೇಯ್ ಅವರಿಗೆ ಈ ಬಾರಿ ಚೆಂದುಳ್ಳಿ ಚೆಲುವೆ ಸಿಂಧು ಲೋಕನಾಥ್ ಜೋಡಿಯಾಗಿದ್ದಾರೆ. ಹರಿಮೋನಿಯಂ ರೀಟ್ಸ್ ಲಾಂಛನದಲ್ಲಿ ಎಸ್.ಟಿ.ಪಾಲ್ ರಾಜ್ ಅವರು ನಿರ್ಮಿಸಿರುವ ಹಾಗೂ ರವಿವರ್ಮ ನಿರ್ದೇಶನದ 'ಜೈ ಭಜರಂಗ ಬಲಿ' ಚಿತ್ರ ನವಂಬರ್ ಮೊದಲವಾರದಲ್ಲಿ ಬಿಡುಗಡೆಯಾಗಲಿದೆ. [ರೋಸ್ ಚಿತ್ರ ವಿಮರ್ಶೆ]

'ಸಂಗಮ' ಚಿತ್ರದ ನಂತರ ರವಿವರ್ಮ ಅವರು ನಿರ್ದೇಶಿಸಿರುವ ಈ ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ನೀಡಿದ್ದಾರೆ. ಎ.ವೆಂಕಟೇಶ್ ಅವರ ಛಾಯಾಗ್ರಹಣ, ಗಣೇಶ್ ಸಂಕಲನ, ಇಮ್ರಾನ್, ಕಲೈ ನೃತ್ಯ ನಿರ್ದೇಶನ ರವಿವರ್ಮ, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಹಾಗೂ ಮೋಹನ್ ಬಿ.ಕೆರೆ ಕಲಾ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಯೋಗರಾಜ್ ಭಟ್ ಬರೆದರೆ ಸಂಭಾಷಣೆಯನ್ನು ವಿನಾಯಕರಾಮ ಕಲಗಾರು ಬರೆದಿದ್ದಾರೆ.
ಅಜಯ್ ರಾವ್, ಸಿಂಧೂಲೋಕನಾಥ್, ಅನಂತನಾಗ್, ರವಿಶಂಕರ್, ಶೋಭರಾಜ್, ಆದಿಲೋಕೇಶ್, ಬುಲೆಟ್ ಪ್ರಕಾಶ್, ಮಿತ್ರ, ಅರುಣ್ ಸಾಗರ್, ಶ್ರುತಿನಾಯ್ಡು, ಟೆನ್ನಿಸ್ ಕೃಷ್ಣ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











