ಹುಟ್ಟುಹಬ್ಬಕ್ಕೆ ಕೃಷ್ಣ ಅಜಯ್ ರಾವ್ ಹೊಸ ಸಿನಿಮಾ

ನಟ ಅಜಯ್ ರಾವ್ ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಬರ್ತ್ ಡೇ ವಿಶೇಷವಾಗಿ ಅವರ ಹೊಸ ಸಿನಿಮಾದ ಸುದ್ದಿ ಇದೀಗ ಬಂದಿದೆ. 'ತಾಯಿಗೆ ತಕ್ಕ ಮಗ' ಬಳಿಕ ಹೊಸ ಸಿನಿಮಾದ ಸಿದ್ದತೆಯಲ್ಲಿ ಅಜಯ್ ಇದ್ದಾರೆ.

ಗೋಕುಲ ಎಂಟಟೈನರ್ಸ್ ಬ್ಯಾನರ್ ನಲ್ಲಿ ಅಜಯ್ ಹೊಸ ಸಿನಿಮಾವನ್ನು ಮಾಡುತ್ತಿದ್ದಾರೆ. ಗೋವಿಂದ ರಾಜು ಎ ಹೆಚ್ ಹಾಗೂ ಕೃಷ್ಣಮೂರ್ತಿ ಸಿನಿಮಾಗೆ ಬಂಡವಾಳ ಹಾಕುತ್ತಿದ್ದಾರೆ. 'ಪ್ರೊಡಕ್ಷನ್ಸ್ ನಂಬರ್ 2' ಹೆಸರಿನಲ್ಲಿ ಸದ್ಯ ಸಿನಿಮಾ ಶುರು ಆಗುತ್ತಿದೆ.

 ajay rao will do his next project with gokula entertainers

ಆನಂದ್ ಪ್ರಿಯ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಇವರು ನಿರ್ದೇಶಕ ಪ್ರೇಮ್ ಹಾಗೂ ನಾಗೇಂದ್ರ ಪ್ರಸಾದ್ ಬಳಿ ಕೆಲಸ ಮಾಡಿದ್ದರು. ವಿ ಶ್ರೀಧರ್ ಸಂಭ್ರಮ್ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ. ಅಜಯ್ ರಾವ್ ಹಾಗೂ ಶ್ರೀಧರ್ ಕಾಂಬಿನೇಶನ್ ನ ಐದನೇ ಸಿನಿಮಾ ಇದಾಗಿದೆ. ಈ ಚಿತ್ರದ ಹೆಸರು ಕೂಡ ಕೃಷ್ಣ ಎಂದೇ ಇರುತ್ತದೆಯೇ ಎನ್ನವ ಕುತೂಹಲ ಇದೆ.

'ಇರುವುದೆಲ್ಲವ ಬಿಟ್ಟು' ಹಾಗೂ 'ರಂಗಿತರಂಗ' ಚಿತ್ರಗಳಿಗೆ ಕೆಲಸ ಮಾಡಿದ್ದ ವಿಲಿಯಂ ಡೇವಿಡ್ ಈ ಸಿನಿಮಾದ ಛಾಯಾಗ್ರಾಹಕರಾಗಿದ್ದಾರೆ. ಸದ್ಯ, ಅಜಯ್ ರಾವ್ ಹುಟ್ಟುಹಬ್ಬದ ವಿಶೇಷವಾಗಿ ಸಿನಿಮಾದ ಬಗ್ಗೆ ಮಾಹಿತಿ ನೀಡಿದೆ. ಚಿತ್ರದ ಚಿತ್ರೀಕರಣ ಮೇ ತಿಂಗಳಿನಿಂದ ಆರಂಭ ಆಗಲಿದೆ.

More from Filmibeat

English summary
Kannada actor Ajay Rao will do his next project with Gokula Entertainer.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X