»   » ಸಿನಿಮಾದಲ್ಲಿ ಎರಡನೇ ಮ್ಯಾಚ್‌ಗೆಅಜಯ್‌ ಜಡೇಜಾ ಪ್ಯಾಡ್‌ ಅಪ್‌

ಸಿನಿಮಾದಲ್ಲಿ ಎರಡನೇ ಮ್ಯಾಚ್‌ಗೆಅಜಯ್‌ ಜಡೇಜಾ ಪ್ಯಾಡ್‌ ಅಪ್‌

Posted By: Staff
Subscribe to Filmibeat Kannada

\ಅಜಯ್‌ ಜಡೇಜಾ ಈಗ ಫುಲ್‌ ಟೈಂ ಸಿನಿಮಾ ಹೀರೋ. ಅವರ ಮೊದಲ ಸಿನಿಮಾ ತೆರೆ ಕಾಣುವ ಮುನ್ನವೇ ಎರಡನೇ ಚಿತ್ರಕ್ಕೆ ಸಹಿ ಹಾಕಿದ್ದಾರೆ.

ಕ್ರಿಕೆಟ್‌ನಿಂದ 5 ವರ್ಷಗಳ ಕಾಲ ನಿಷೇಧಕ್ಕೆ ಗುರಿಯಾಗಿರುವ ಜಡೇಜಾ ಈಗ ಸಂತೋಷವಾಗಿದ್ದಾರೆ. ಇದನ್ನು ಖುದ್ದು ಅವರೇ ಹೇಳಿಕೊಂಡಿದ್ದಾರೆ. ಮಾಜಿ ಮಂತ್ರಿ ಜಯಾ ಜೈಟ್ಲಿ ಪುತ್ರಿ ಅದಿತಿ ಜೈಟ್ಲಿ ಜೊತೆಗಿನ ದಾಂಪತ್ಯ ಸುಖ, ಸಿನಿಮಾ ಶೂಟಿಂಗ್‌ನ ಮುದವನ್ನ ಜಡೇಜಾ ಅನುಭವಿಸುತ್ತಿದ್ದಾರೆ. ಕ್ರಿಕೆಟ್‌ನಿಂದ ತಳ್ಳಿದರೇನು, ನಾನು ಸುಮ್ಮನಿಲ್ಲ. ನನ್ನ ಪ್ರತಿಭೆ ಪ್ರದರ್ಶನಕ್ಕೆ ಚೆಂದದೊಂದು ವೇದಿಕೆ ಸಿಕ್ಕಿದೆ ಅನ್ನುತ್ತಾರವರು.

ಸುನಿಲ್‌ ಶೆಟ್ಟಿ ಹಾಗೂ ಸೆಲಿನಾ ಜೈಟ್ಲಿ ಜೊತೆ ಅಭಿನಯಿಸಿರುವ ಮೊದಲ ಚಿತ್ರದ ಹೆಸರು ಇನ್ನೂ ಗೊತ್ತಾಗಿಲ್ಲ. ಆದರೆ ಇವರ ಎರಡನೇ ಚಿತ್ರಕ್ಕೆ ಸಹಿ ಮಾಡುವ ಮೊದಲೇ ಹೆಸರು ಇಟ್ಟು ಆಗಿತ್ತು. ಪಲ್‌ ಪಲ್‌ ದಿಲ್‌ ಕೇ ಪಾಸ್‌ ಎಂಬುದು ಚಿತ್ರದ ಶೀರ್ಷಿಕೆ. ಅಜ್ಜಿ- ಮೊಮ್ಮಗನ ಸಂಬಂಧ ಸಿನಿಮಾದ ವಸ್ತು. ಸುಷ್ಮಾ ಸೇಠ್‌ ಅಜ್ಜಿ. ಅಜಯ್‌ ಜಡೇಜಾ ಮೊಮ್ಮಗ. ನಾಯಕಿ ಯಾರೂ ಅಂತ ಇನ್ನೂ ಗೊತ್ತಿಲ್ಲ. ಕೃಷ್ಣ ಕುಮಾರ್‌ ಇದರ ನಿರ್ದೇಶಕರು. ಜಡೇಜಾ ಇಷ್ಟಪಡುವ ಮರಗಳ ಸುತ್ತುವ ಶಾಟ್‌ ಕೂಡ ಸಿನಿಮಾದಲ್ಲಿ ಇದೆಯಂತೆ !

ಚಿತ್ರದ ಅರ್ಧ ಭಾಗದ ಚಿತ್ರೀಕರಣ ನವ ದೆಹಲಿಯಲ್ಲಿ. ಉಳಿದರ್ಧಕ್ಕೆ ತಂಡ ನ್ಯೂಜಿಲೆಂಡ್‌ಗೆ ಹಾರಲಿದೆ. ಅಂದಹಾಗೆ, ಚಿತ್ರಲೋಕಕ್ಕೆ ಕಾಲಿಟ್ಟ ನಂತರ ಜಡೇಜಾಗೆ ವಿದೇಶಗಳ ಸುತ್ತುವ ಮುಫತ್ತು ಅವಕಾಶ. ಇವರ ಮೊದಲ ಸಿನಿಮಾದ ಕೆಲ ಭಾಗಗಳ ಶೂಟಿಂಗ್‌ ಲಂಡನ್‌ನಲ್ಲಿ ನಡೆದಿತ್ತು. ಈಗ ನ್ಯೂಜಿಲೆಂಡಿಗೆ ಹೋಗುವ ಅವಕಾಶ. ತಾವು ಹೋಗುವೆಡೆಗೆಲ್ಲಾ ಪತ್ನಿಯನ್ನೂ ಕರೆದುಕೊಂಡು ಹೋಗುವ ಜಡೇಜಾಗೆ ಎಂಡತಿ ಅಂದರೆ ಪಂಚಪ್ರಾಣ. ಆದರೆ ಗಂಡ- ಹೆಂಡತಿ ಇಬ್ಬರ ಖರ್ಚನ್ನೂ ಭರಿಸಲು ನಿರ್ಮಾಪಕರಿಗೆ ಇರಬೇಕು ತ್ರಾಣ.

ಸಿನಿಮಾ ಇನ್ನಿಂಗ್ಸ್‌ನಲ್ಲಿ ಜಡೇಜಾ ಸೆಂಚುರಿ ಹೊಡೆಯುತ್ತಾರೋ, ಡಕ್‌ಗೆ ಔಟಾಗುತ್ತಾರೋ? \

English summary
Abandoned Cricketer Ajay Jadeja signs His Second Film
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada