ಅಜಿತ್, ಸೂರ್ಯ ಬಗ್ಗೆ ಕೀಳಾಗಿ ಮಾತನಾಡಿದ ನಟನ ವಿರುದ್ಧ ಫ್ಯಾನ್ಸ್ ಗರಂ

ಕನ್ನಡ, ತೆಲುಗು, ತಮಿಳು ಭಾಷೆ ಸೇರಿದಂತೆ ಸುಮಾರು 70ಕ್ಕೂ ಅಧಿಕ ಚಿತ್ರಗಳು ಅನೇಕ ಧಾರಾವಾಹಿಗಳಲ್ಲಿ ನಟಿಸಿರುವ ಬಹುಭಾಷಾ ನಟ ಬಬ್ಲು ಪೃಥ್ವಿರಾಜ್ ಅವರು ತಮಿಳು ನಟರಾದ ಅಜಿತ್ ಮತ್ತು ಸೂರ್ಯ ವಿರುದ್ಧ ವಿವಾದಾತ್ಮಕ ಹೇಳಿಕೆ ಭಾರಿ ಆಕ್ರೋಶಕ್ಕೆ ಕಾರಣವಾಗಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಪೃಥ್ವಿರಾಜ್, ಅಜಿತ್ ಕುಮಾರ್ ಮತ್ತು ಸೂರ್ಯ ಅವರ ಸಿನಿ ವೃತ್ತಿಯ ಬಗ್ಗೆ ಅಗೌರವವಾಗಿ ಮಾತನಾಡಿ ಅವಮಾನ ಮಾಡಿದ್ದಾರೆ. ಇದು ಸ್ಟಾರ್ ನಟರ ಅಭಿಮಾನಿಗಳನ್ನ ಕೆರಳಿಸಿದೆ.

ತಲಾ ಅಜಿತ್ ಅವರ ಡೆಡಿಕೇಷನ್ ಬಗ್ಗೆ ಕೀಳಾಗಿ ಮಾತನಾಡಿ, ಸೂರ್ಯ ಅವರ ಸಿನಿ ಬದುಕಿನ ಬಗ್ಗೆಯೂ ನೋವು ಆಗುವ ರೀತಿ ಹೇಳಿಕೆ ನೀಡಿದ್ದು ಯಾಕೆ ಎಂಬ ವಿಷ್ಯ ಈಗ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಯಾಗುತ್ತಿದೆ. ಅಷ್ಟೇ ಅಲ್ಲದೇ ಬಬ್ಲು ಪೃಥ್ವಿರಾಜ್ ಅವರನ್ನ ಅಭಿಮಾನಿಗಳು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಹಾಗಿದ್ರೆ, ಬಹುಭಾಷಾ ನಟ ಹೇಳಿದ್ದೇನು? ಮುಂದೆ ಓದಿ.....

ಅಜಿತ್ ಡೆಡಿಕೇಷನ್ ಜೀರೋ

ಅಜಿತ್ ಡೆಡಿಕೇಷನ್ ಜೀರೋ

''ಅಜಿತ್ ಕುಮಾರ್ ಸರಳ ವ್ಯಕ್ತಿ, ಡೌನ್ ಟು ಅರ್ತ್ ಎಂದು ಹೊಗಳುತ್ತಾರೆ. ಬಹಳ ಕೂಲ್ ಪರ್ಫಾಮೆನ್ಸ್ ಎಂದು ಮೆಚ್ಚಿಕೊಂಡಿದ್ದಾರೆ. ನಿಜ ಹೇಳ್ಬೇಕು ಅಂದ್ರೆ ಅಜಿತ್ ಡೆಡಿಕೇಷನ್ ಜೀರೋ, ಆತ ನಟನೆ ಮಾಡುವುದು ಬೇಕಾಗಿಲ್ಲ. ಇಂತಹ ನಟನೆಗೆ ಇಷ್ಟು ದೊಡ್ಡ ಸ್ಟಾರ್ ಪಟ್ಟ ಸಿಕ್ಕಿರುವುದು ಅದೃಷ್ಟ'' ಎಂದು ಪೃಥ್ವಿರಾಜ್ ಸಂದರ್ಶನದಲ್ಲಿ ಹೇಳಿದ್ದಾರೆ.

ಅಜಿತ್ ಗೆ ಅಡುಗೆ ಮಾಡುವ ಆಸಕ್ತಿ

ಅಜಿತ್ ಗೆ ಅಡುಗೆ ಮಾಡುವ ಆಸಕ್ತಿ

'ಅಜಿತ್ ಅವರಿಗೆ ನಟನೆ ಮಾಡುವುದಕ್ಕಿಂತ ಅಡುಗೆ ಮಾಡುವುದು, ಇತರೆ ಬೇರೆ ಕೆಲಸಗಳ ಬಗ್ಗೆ ಹೆಚ್ಚು ಆಸಕ್ತಿ. ನಿರ್ದೇಶಕರು ಶೂಟ್ ಇದೆ ಎಂದು ಕರೆದಾಗ ಆತನ್ನ ಯಾವುದೇ ರೀತಿಯ ಎಕ್ಸೈಟ್ ಮೆಂಟ್ ಕಾಣಲ್ಲ. ನಿರ್ದೇಶಕರಿಗೂ ಹೊಗಳಿದರೂ ಏನು ಖುಷಿ ಪಡಲ್ಲ' ಎಂದು ಕಾಲೆಳೆದಿದ್ದಾರೆ. ಆದರೆ ನಾನು ಆಗಲ್ಲ, ನಟನೆ ಎಂದು ಕರೆದ ತಕ್ಷಣ, ಬಹಳ ಎನರ್ಜಿಯಾಗಿ, ಅವಾರ್ಡ್ ಸಿಕ್ಕಷ್ಟೆ ಖುಷಿಯಿಂದ ಹೋಗ್ತೇನೆ'' ಎಂದು ಹೇಳಿ ಹೀಯಾಳಿಸಿದ್ದಾರೆ.

ಸೂರ್ಯ ಬಗ್ಗೆಯೂ ಕಾಮೆಂಟ್

ಸೂರ್ಯ ಬಗ್ಗೆಯೂ ಕಾಮೆಂಟ್

ಅಜಿತ್ ಮಾತ್ರವಲ್ಲ ತಮಿಳುನ ಮತ್ತೊಬ್ಬ ಸ್ಟಾರ್ ನಟ ಸೂರ್ಯ ಅವರ ಬಗ್ಗೆಯೂ ಕೀಳಾಗಿ ಮಾತನಾಡಿರುವ ಪೃಥ್ವಿರಾಜ್ ''ಸೂರ್ಯ ಭಯಾನಕ ವ್ಯಕ್ತಿ ಅವರೊಬ್ಬ ಸೆಲ್ಫ್ ಸೆಂಟ್ರೆಡ್ ವ್ಯಕ್ತಿ. ಆತನ ಅಧ್ಯಾಯ ಮುಗಿದಿದೆ'' ಎಂದು ಹೇಳುವ ಮೂಲಕ ಸೂರ್ಯ ಅಭಿಮಾನಿಗಳ ಕೆಂಗಣ್ಣಿ ಗುರಿಯಾಗಿದ್ದಾರೆ.

ಪೃಥ್ವಿರಾಜ್ ಗೆ ಫುಲ್ ಕ್ಲಾಸ್

ಪೃಥ್ವಿರಾಜ್ ಗೆ ಫುಲ್ ಕ್ಲಾಸ್

ದಿಗ್ಗಜ ನಿರ್ದೇಶಕ ಕೆ ಬಾಲಚಂದಿರ್ ಅವರ ಪರಿಚಯಿಸಿದ ನಟ ಪೃಥ್ವಿರಾಜ್. ಅಂತವರ ಗರಡಿಯಲ್ಲಿ ಬಂದ ನಟ, ತಮ್ಮ ಸಹನಟರ ಬಗ್ಗೆ ಹೀಗೆ ಮಾತನಾಡುವುದಾ? ಅವರ ಮಾತು ಸರಿಯಿಲ್ಲ ಎಂದು ಅಜಿತ್ ಮತ್ತು ಸೂರ್ಯ ಅಭಿಮಾನಿಗಳು ಪೂರ್ತಿ ತರಾಟೆ ತೆಗೆದುಕೊಂಡಿದ್ದಾರೆ.

ಪೃಥ್ವಿರಾಜ್ ಸಿನಿಮಾಗಳು

ಪೃಥ್ವಿರಾಜ್ ಸಿನಿಮಾಗಳು

ಬಾಲನಟನಾಗಿ ಸಿನಿಮಾರಂಗ ಪ್ರವೇಶ ಮಾಡಿದ ಪೃಥ್ವಿರಾಜ್ 1971ರಲ್ಲಿ 'ನಾಂಗು ಸುವರ್ಗಲ್' ಎಂಬ ತಮಿಳು ಸಿನಿಮಾದಲ್ಲಿ ನಟಿಸಿದ್ದರು. ಅಲ್ಲಿಂದ ಶುರುವಾದ ಅವರ ಸಿನಿ ಜರ್ನಿ ತೆಲುಗು, ತಮಿಳು, ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲೂ ಅಭಿನಯಿಸಿದ್ದಾರೆ. ಕನ್ನಡದಲ್ಲಿ ಸರ್ಕಲ್ ಇನ್ಸ್ ಪೆಕ್ಟರ್, ಭಗವಾನ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸುಮಾರು 70ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ.

More from Filmibeat

English summary
Tamil super star ajith kumar and suriya fans fire on actor babloo prithiveeraj. prithiveeraj says ajith is zero dedication suriya is a self centred person.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X