twitter
    For Quick Alerts
    ALLOW NOTIFICATIONS  
    For Daily Alerts

    ಮುತ್ತಪ್ಪ ರೈ ಕುರಿತು ಜಯರಾಜ್ ಪುತ್ರ ಅಜಿತ್ ಹೇಳಿದ ಅಚ್ಚರಿಯ ಸಂಗತಿ

    |

    ಭೂಗತ ಲೋಕದಲ್ಲಿ ಗುರುತಿಸಿಕೊಂಡಿದ್ದ ಮುತ್ತಪ್ಪ ರೈ ಇತ್ತೀಚೆಗೆ ಮೃತಪಟ್ಟ ಬಳಿಕ ಜಯರಾಜ್ ಅವರ ಮಗ, ನಟ ಅಜಿತ್ ಜಯರಾಜ್ ಹಾಕಿದ್ದ ಫೇಸ್‌ಬುಕ್ ಪೋಸ್ಟ್ ವೈರಲ್ ಆಗಿತ್ತು. ಅಜಿತ್ ಅವರ ಬರಹ ಮುತ್ತಪ್ಪ ರೈ ಅವರನ್ನೇ ಉಲ್ಲೇಖಿಸಿತ್ತು ಎಂದು ಹೇಳಲಾಗಿತ್ತು.

    Recommended Video

    ನನ್ನ ತಂದೆಯ ಬಗ್ಗೆ ಏನಾದರು ಪೋಸ್ಟ್‌ ಹಾಕ್ತಿನಿ ನಿಮಗೇನು ಅಂದ ಡಾನ್ ಜಯರಾಜ್ ಮಗ | Ajith Jayaraj

    ಆದರೆ ತಾವು ಹಾಕಿದ ಪೋಸ್ಟ್‌ಗೂ ಮುತ್ತಪ್ಪ ರೈ ಅವರ ಸಾವಿಗೂ ಯಾವುದೇ ಸಂಬಂಧವಿಲ್ಲ. ಅವರ ಸಾವಿನ ಸುದ್ದಿ ತಿಳಿಯುವ ಮುಂಚೆಯೇ ಆ ಪೋಸ್ಟ್ ಹಾಕಲಾಗಿತ್ತು. ನನ್ನ ತಂದೆಯ ಕುರಿತಾದ ವಿಡಿಯೋಕ್ಕೆ ಯಾರೋ ಹಾಕಿದ್ದ ಕೆಟ್ಟ ಕಾಮೆಂಟ್‌ಗಳಿಗೆ ಪ್ರತಿಯಾಗಿ ನೀಡಿದ್ದ ಉತ್ತರವಾಗಿತ್ತು ಎಂದು ಅವರು ಸ್ಪಷ್ಟೀಕರಣ ನೀಡಿದ್ದರು. ಜನರಿಗೆ ನನ್ನ ತಂದೆಯ ಬಗ್ಗೆ ಏನೂ ತಿಳಿದಿಲ್ಲ. ಗೊತ್ತಿಲ್ಲದೆ ಕಾಮೆಂಟ್ ಹಾಕುತ್ತಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದರು. ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಅವರು ಇದರ ಬಗ್ಗೆ ವಿವರಣೆ ನೀಡಿದ್ದಾರೆ. ಮುಂದೆ ಓದಿ...

    ಕ್ಯಾನ್ಸರ್ ಇದ್ದಿದ್ದೇ ಗೊತ್ತಿರಲಿಲ್ಲ

    ಕ್ಯಾನ್ಸರ್ ಇದ್ದಿದ್ದೇ ಗೊತ್ತಿರಲಿಲ್ಲ

    ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ ಎರಡು ದಿನಗಳಲ್ಲಿ ಮುತ್ತಪ್ಪ ರೈ ತೀರಿಕೊಂಡರು. ವಾಸ್ತವವಾಗಿ ಮುತ್ತಪ್ಪ ರೈ ಎಂಬುವವರು ಇದ್ದರು ಮತ್ತು ಇದ್ದಾರೆ ಎಂಬುದಷ್ಟೇ ನನಗೆ ಗೊತ್ತಿಲ್ಲ. ಅವರಿಗೆ ಕ್ಯಾನ್ಸರ್ ಇತ್ತು ಎನ್ನುವುದೇ ನನಗೆ ತಿಳಿದಿರಲಿಲ್ಲ. ಹಾಗೆಯೇ ಅವರ ಸಾವಿನ ಬಗ್ಗೆ ನನಗೆ ಮಾಹಿತಿ ಗೊತ್ತಾಗಿದ್ದೂ ತಡವಾಗಿ ಎಂದು ತಮ್ಮ ತಂದೆಯ ಸಾವಿಗೆ ಕಾರಣರಾಗಿದ್ದವರು ಎಂಬ ಆರೋಪ ಹೊತ್ತಿದ್ದ ಮುತ್ತಪ್ಪ ರೈ ಕುರಿತು ಅಜಿತ್, ಅಚ್ಚರಿಯ ಹೇಳಿಕೆ ನೀಡಿದ್ದಾರೆ.

    ಮುತ್ತಪ್ಪ ರೈ ಸಾವಿನ ಬಳಿಕ ಜಯರಾಜ್ ಪುತ್ರನ ಫೇಸ್‌ಬುಕ್ ಪೋಸ್ಟ್ ವೈರಲ್ಮುತ್ತಪ್ಪ ರೈ ಸಾವಿನ ಬಳಿಕ ಜಯರಾಜ್ ಪುತ್ರನ ಫೇಸ್‌ಬುಕ್ ಪೋಸ್ಟ್ ವೈರಲ್

    ಅವರ ಆತ್ಮಕ್ಕೆ ಶಾಂತಿ ಸಿಗಲಿ

    ಅವರ ಆತ್ಮಕ್ಕೆ ಶಾಂತಿ ಸಿಗಲಿ

    ತಂದೆಯ ಕೊಲೆ ಪ್ರಕರಣದಲ್ಲಿ ಅವರ ಹೆಸರು 'ಕೇಳಿಬಂದಿತ್ತು'. ಅದರ ಬಗ್ಗೆ ನಾನು ಏನೂ ಹೇಳೊಲ್ಲ. ಮುತ್ತಪ್ಪ ರೈ ಆತ್ಮಕ್ಕೆ ಶಾಂತಿ ಸಿಗಲಿ. ಈ ಭೂಗತ ಲೋಕ ಅದರ ದ್ವೇಷ, ಜಿದ್ದಿನ ಬಗ್ಗೆ ನನಗೆ ತಿಳಿವಳಿಕೆ ಇಲ್ಲ. ನನ್ನ ತಂದೆಯನ್ನು ಕೊಂದವರ ಬಗ್ಗೆಯೂ ನಾನು ಪ್ರತೀಕಾರದ ಭಾವ ಹೊಂದಿಲ್ಲ. ಏಕೆಂದರೆ ದೇವರನ್ನು ನಾನು ನಂಬುತ್ತೇನೆ. ಆತನೇ ನೋಡಿಕೊಳ್ಳುತ್ತಾನೆ. ತಮ್ಮ ಮಾಡಿದವರಿಗೆ ಕರ್ಮವೇ ಉತ್ತರ ನೀಡುತ್ತದೆ.

    ಕೆಟ್ಟದನ್ನು ಮಾಡಲಿಲ್ಲ

    ಕೆಟ್ಟದನ್ನು ಮಾಡಲಿಲ್ಲ

    ನನ್ನ ತಂದೆ ಡಾನ್ ಆಗಬೇಕು ಎಂದುಕೊಂಡವರಲ್ಲ. ಅವರು ವಿದ್ಯಾವಂತ. ಎಚ್‌ಎಎಲ್‌ನಲ್ಲಿ ಉದ್ಯೋಗಿಯಾಗಿದ್ದವರು. ಸಮಾಜ ಸೇವೆಯ ಹೋರಾಟಕ್ಕೆ ಇಳಿದರು. ಸಮಾಜ ಸೇವೆಗೆ ರಾಜಕೀಯದ ಮಾರ್ಗ ಆರಿಸಿಕೊಂಡರು. ಆದರೆ ದಾರಿಯಲ್ಲಿ ಬೇರೆ ಬೇರೆ ಘಟನೆಗಳು ನಡೆದವು. ಅವರು ಯಾರಿಗೂ ಕೆಟ್ಟದನ್ನು ಮಾಡಲಿಲ್ಲ. ಇದ್ದಷ್ಟೂ ಕಾಲ ಜನರಿಗೆ ಒಳಿತನ್ನೇ ಮಾಡಿದರು.

    ಮುತ್ತಪ್ಪ ರೈ ಬಗ್ಗೆ ಹೀಗೆ ಹೇಳಿದ್ದರು ನಿರ್ದೇಶಕ ರಾಮ್‌ ಗೋಪಾಲ್ ವರ್ಮಾಮುತ್ತಪ್ಪ ರೈ ಬಗ್ಗೆ ಹೀಗೆ ಹೇಳಿದ್ದರು ನಿರ್ದೇಶಕ ರಾಮ್‌ ಗೋಪಾಲ್ ವರ್ಮಾ

    ಆ ಕುಟುಂಬ ಪಡುವ ಕಷ್ಟ ನೋಡಿ...

    ಆ ಕುಟುಂಬ ಪಡುವ ಕಷ್ಟ ನೋಡಿ...

    ತಂದೆ ಸತ್ತಾಗ ನಾನು ಎಂಟು ತಿಂಗಳ ಮಗು. ಒಂದು ಸಾವಿನ ನೋವು ಆ ಕುಟುಂಬವನ್ನು ಎಂತಹ ಸಂಕಷ್ಟ, ಒದ್ದಾಟಗಳಿಗೆ ದೂಡುತ್ತವೆ ಎಂಬುದನ್ನು ಕಣ್ಣಾರೆ ನೋಡಿ ಬೆಳೆದವನು ನಾನು. ನನ್ನನ್ನು ಬೆಳೆಸಲು ಅಮ್ಮ ಪಟ್ಟ ಪಾಡು ಅಷ್ಟಿಷ್ಟಲ್ಲ. ರೌಡಿಸಂನಲ್ಲಿ ಹೆಸರು ಮಾಡುವುದು, ಸೇಡು ತೀರಿಸಿಕೊಳ್ಳುವುದು ಎನ್ನುವವರು ನಮ್ಮ ಹಿಂದೆ ಕಷ್ಟಪಡುವವರು ಯಾರು ಎಂದು ಯೋಚಿಸಬೇಕು. ಎರಡು ನಿಮಿಷ ಸಾಕು ಹೊಡೆಯಲು. ಹೊಡೆಯುತ್ತೇವೆ, ಹೊಡೆಸಿಕೊಳ್ಳುತ್ತೇವೆ, ಉರುಳಿ ಹೋಗುತ್ತೇವೆ. ಆದರೆ ಅದಾದ ಬಳಿಕ ಕುಟುಂಬದ ಗತಿಯೇನು? ಯಾರಿಗೂ ಆ ಕಷ್ಟ ಬರಬಾರದು.

    ಸೇಡು ತೀರಿಸಿಕೊಳ್ಳಲು ಮುಂದಾಗಲಿಲ್ಲ

    ಸೇಡು ತೀರಿಸಿಕೊಳ್ಳಲು ಮುಂದಾಗಲಿಲ್ಲ

    ಪ್ರತೀಕಾರವನ್ನು ಮನಸಲ್ಲಿ ಇಟ್ಟುಕೊಂಡವರಿಗೆ ಅದು ಮತ್ತೆ ಮರಳುತ್ತದೆ. ಕರ್ಮ ಎನ್ನುವುದು ಮುಂದುವರಿಯುತ್ತದೆ ಎಂದು ತಂದೆಯ ಸಾವಿನ ಕುರಿತು ತಮಗೆ ಮಾಹಿತಿ, ಪ್ರಚೋದನೆಗಳಿದ್ದರೂ ಸೇಡು ತೀರಿಸಿಕೊಳ್ಳುವುದಕ್ಕಾಗಿ ತಾವು ಕೂಡ ಅಂಡರ್ ವರ್ಲ್ಡ್‌ಗೆ ಇಳಿಯುವಂತಹ ಕೆಲಸ ಮಾಡಲಿಲ್ಲ ಎಂಬುದನ್ನು ವಿವರಿಸಿದರು.

    'ರೈ' ಸಿನಿಮಾ ನಿಂತು ಹೊಯ್ತಾ ? ಏನಂತಾರೆ ವರ್ಮ ?'ರೈ' ಸಿನಿಮಾ ನಿಂತು ಹೊಯ್ತಾ ? ಏನಂತಾರೆ ವರ್ಮ ?

    ಚಿತ್ರರಂಗದಲ್ಲಿ ಬೆಳೆಯುವ ಆಸೆ

    ಚಿತ್ರರಂಗದಲ್ಲಿ ಬೆಳೆಯುವ ಆಸೆ

    ಈಗಾಗಲೇ ಒಟ್ಟು ನಾಲ್ಕು ಸಿನಿಮಾಗಳನ್ನು ಮಾಡಿದ್ದೇನೆ. ಎಲ್ಲ ಸರಿಯಾಗಿದ್ದರೆ 'ರೈಮ್ಸ್' ಚಿತ್ರ ಬಿಡುಗಡೆಯಾಗಬೇಕಿತ್ತು. ದಕ್ಷಿಣ ಭಾರತದಲ್ಲಿಯೇ ಮೊದಲ ಬಾರಿಗೆ ಭಗತ್ ಸಿಂಗ್ ಕುರಿತಾದ ಕ್ರಾಂತಿವೀರ ಭಗತ್ ಸಿಂಗ್ ಚಿತ್ರ ಸಿದ್ಧವಾಗಿದೆ. ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಬೇಕು ಎನ್ನುವುದು ನನ್ನ ಬಯಕೆ. ಹೀಗಾಗಿ ಇಟ್ಟ ಹೆಜ್ಜೆ ಹಿಂದೆ ಇರಿಸಿಲ್ಲ ಎಂದು ಸಿನಿಮಾರಂಗದ ಕನಸನ್ನು ಹಂಚಿಕೊಂಡಿದ್ದಾರೆ.

    ರಾಜಕೀಯಕ್ಕೆ ಬರುತ್ತಾರೆ ಅಜಿತ್

    ರಾಜಕೀಯಕ್ಕೆ ಬರುತ್ತಾರೆ ಅಜಿತ್

    ಇಷ್ಟೇ ಅಲ್ಲ, ತಂದೆಯಂತೆಯೇ ರಾಜಕೀಯ ರಂಗದಲ್ಲಿ ಬೆಳೆಯಬೇಕೆಂಬ ತುಡಿತವೂ ಅಜಿತ್ ಅವರಲ್ಲಿದೆ. ರಾಜಕೀಯ ಚಟುವಟಿಕೆಗಳಲ್ಲಿ ಸಣ್ಣ ಮಟ್ಟದಲ್ಲಿ ತೊಡಗಿಸಿಕೊಂಡಿದ್ದೆ. ಮುಂದೆ ಸಂಪೂರ್ಣವಾಗಿ ರಾಜಕೀಯಕ್ಕೆ ಬರುತ್ತೇನೆ. ಈ ವಿಚಾರವಾಗಿ ರಾಜಕೀಯ ಪಕ್ಷವೊಂದರ ಜತೆ ಮಾತುಕತೆ ನಡೆದಿದೆ. ಮುಂದೆ ಅದನ್ನು ಘೋಷಿಸುತ್ತೇನೆ ಎಂದು ತಿಳಿಸಿದ್ದಾರೆ.

    English summary
    Actor Ajith Jayraj said he did not know Muthappa Rai was suffering from cancer till his death.
    Monday, May 18, 2020, 17:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X