ಕನ್ನಡದಲ್ಲಿ 'ಜಗಮಲ್ಲ'ನಾಗಿ ಸದ್ದು ಮಾಡ್ತಿದೆ ಅಜಿತ್ 'ವಿಶ್ವಾಸಂ'
ಕನ್ನಡ ಚಿತ್ರರಂಗ ಡಬ್ಬಿಂಗ್ ಸಿನಿಮಾಗಳಿಗೆ ಬಾಗಿಲು ತೆಗೆದಾಗಿದೆ. ಈಗಾಗಲೇ ಹಲವು ಪರಭಾಷಾ ಚಿತ್ರಗಳು ಡಬ್ ಆಗಿ ರಿಲೀಸ್ ಆಗಿವೆ. ಅದರಂತೆ ಮತ್ತೊಮ್ಮೆ ಕಾಲಿವುಡ್ ನ ಸ್ಟಾರ್ ನಟ ತಲಾ ಅಜಿತ್ ಅಭಿನಯದ 'ವಿಶ್ವಾಸಂ' ಚಿತ್ರ ಕನ್ನಡಕ್ಕೆ 'ಜಗಮಲ್ಲ'ನಾಗಿ ಡಬ್ ಆಗಿ ರಿಲೀಸ್ ಆಗ್ತಿದೆ.
ಕಳೆದ ವರ್ಷದ ಅಂತ್ಯದಲ್ಲಿ 'ವಿಶ್ವಾಸಂ' ಸಿನಿಮಾ ತಮಿಳಿನಲ್ಲಿ ತೆರೆಕಂಡು ದೊಡ್ಡ ಸಕ್ಸಸ್ ಕಂಡಿತ್ತು. ಇದೀಗ ಈ ಸಿನಿಮಾವನ್ನ ಹರಿವು ಕ್ರಿಯೇಷನ್ಸ್ ಕನ್ನಡಕ್ಕೆ ಡಬ್ ಮಾಡಿ ರಿಲೀಸ್ ಮಾಡುವುದಕ್ಕೆ ಸಜ್ಜಾಗಿದೆ. ಈಗಾಗಲೇ ಹಾಡುಗಳನ್ನ ಬಿಡುಗಡೆ ಮಾಡಿದ್ದು, ಸದ್ದು ಮಾಡ್ತಿದೆ. ಇದೀಗ, ಜಗಮಲ್ಲ ಟ್ರೈಲರ್ ತೆರೆಕಂಡಿದೆ.
ಚಿತ್ರ ಸಾಹಿತಿ, ನಿರ್ದೇಶಕ ಹೃದಯ ಶಿವ 'ಜಗಮಲ್ಲ' ಚಿತ್ರಕ್ಕೆ ಸಂಭಾಷಣೆ ಹಾಗೂ ಗೀತೆ ರಚನೆ ಮಾಡಿದ್ದಾರೆ. ಹಾರಿಜನ್ ಪ್ರೋಡಕ್ಷನ್ ವಿತರಣೆ ಮಾಡ್ತಿದೆ. ಜಗಮಲ್ಲ ಚಿತ್ರದಲ್ಲಿ ಅಜಿತ್ ಕುಮಾರ್ ಡಬಲ್ ಶೇಡ್ ನಲ್ಲಿ ಕಾಣಿಸಿಕೊಂಡಿದ್ದು, ಜಗಮಪತಿ ಬಾಬು ವಿಲನ್ ಪಾತ್ರ ಮಾಡಿದ್ದಾರೆ.

ನಾಯಕಿಯಾಗಿ ನಯನತಾರಾ ನಟಿಸಿದ್ದಾರೆ. ತಮಿಳಿನ ಅವತರಣಿಕೆ ಸಕ್ಸಸ್ ಆಗಿದ್ದು, ಕನ್ನಡದವತರಣಿಕೆಯೂ ಯಶಸ್ವಿಯಾಗಲಿದೆ ಅನ್ನುವ ವಿಶ್ವಾಸದಲ್ಲಿ ತಂಡ. ಈ ಹಿಂದೆ ಅಜಿತ್ ಅವರ ತಮಿಳು ಚಿತ್ರಗಳಾದ ಎನ್ನಿ ಅರಿಂದಲ್ (ಸತ್ಯದೇವ್ ಐಪಿಎಸ್) ಅರಂಭಂ (ಧೀರಾ) ಹಾಗೂ ವಿವೇಗಂ (ಕಮಾಂಡೋ) ಚಿತ್ರವಾಗಿ ಕನ್ನಡದಲ್ಲಿ ಡಬ್ ಆಗಿ ಬಿಡುಗಡೆಯಾಗಿದ್ವು. ಇದೀಗ ವಿಶ್ವಾಸಂ ಜಗಮಲ್ಲನಾಗಿದ್ದು, ಈ ಚಿತ್ರ ಆ ಲಿಸ್ಟ್ ಸೇರ್ಪಡೆಯಾಗ್ತಿದೆ.


Click it and Unblock the Notifications











