»   » ಪುನೀತ್ ಚಿತ್ರದಲ್ಲಿ ಚಂದ್ರಕಾಂತಾ ಖ್ಯಾತಿಯ 'ಕ್ರೂರ್ ಸಿಂಗ್'!

ಪುನೀತ್ ಚಿತ್ರದಲ್ಲಿ ಚಂದ್ರಕಾಂತಾ ಖ್ಯಾತಿಯ 'ಕ್ರೂರ್ ಸಿಂಗ್'!

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 'ಅಂಜನಿಪುತ್ರ' ಚಿತ್ರದಲ್ಲಿ ಹಲವು ಸ್ಟಾರ್ ಕಲಾವಿದರು ಅಭಿನಯಿಸುತ್ತಿದ್ದಾರೆ. ಕನ್ನಡದ ನಟ ರವಿಶಂಕರ್ ಮತ್ತು ನಟಿ ರಮ್ಯಾಕೃಷ್ಣ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದರೇ, ಬಾಲಿವುಡ್ ನಟ ಮುಖೇಶ್ ತಿವಾರಿ ವಿಲನ್ ಪಾತ್ರದಲ್ಲಿ ಅಬ್ಬರಿಸುತ್ತಿದ್ದಾರೆ.

ಇದೀಗ, ಬಾಲಿವುಡ್ ನ ಮತ್ತೋರ್ವ ನಟ 'ಅಂಜನಿಪುತ್ರ' ಚಿತ್ರತಂಡವನ್ನ ಸೇರಿಕೊಂಡಿದ್ದಾರೆ. 90ರ ದಶಕದ ಖ್ಯಾತ ನಟ ಅಖಿಲೇಂದ್ರ ಮಿಶ್ರಾ ಈಗ ಪುನೀತ್ ಎದುರು ಖಳನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

'ಅಂಜನಿಪುತ್ರ' ಹಾಡಿನಲ್ಲಿ ಅಪ್ಪು ಸ್ಪೆಷಲ್ ಗೆಟಪ್ ಹೇಗಿದೆ ನೋಡಿ

Akhilendra Mishra will play villain in Anjaniputra

ಈ ಮೂಲಕ ಕನ್ನಡದಲ್ಲಿ ಅಖಿಲೇಂದ್ರ ಮಿಶ್ರಾ 2ನೇ ಸಿನಿಮಾ ಮಾಡುತ್ತಿದ್ದಾರೆ. ಇದಕ್ಕು ಮುಂಚೆ ಶ್ರೀಮುರುಳಿ ಅಭಿನಯದ ಸಿದ್ದು ಚಿತ್ರದಲ್ಲಿ ಅಖಿಲೇಂದ್ರ ಮೊದಲ ಬಾರಿಗೆ ಬಣ್ಣ ಹಚ್ಚಿದ್ದರು.

'ಚಂದ್ರಕಾಂತ್' ಟಿವಿ ಸಿರಿಯಲ್, ಮತ್ತು 'ಲಗಾನ್', 'ಗಂಗಾಜಲ್' ಅಂತಹ ಸೂಪರ್ ಹಿಟ್ ಚಿತ್ರಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಅಖಿಲೇಂದ್ರ ಮಿಶ್ರಾ ಈಗ ಸ್ಯಾಂಡಲ್ ವುಡ್ ಗೆ ಜಿಗಿದಿದ್ದಾರೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ಇದು ಕೂಡ ಒಂದಾಗಿದ್ದು, ಎರಡು ಫೈಟ್ ಮತ್ತು ಕೆಲವು ದೃಶ್ಯಗಳಲ್ಲಿ ಅಖಿಲೇಂದ್ರ ಅಭಿನಯಿಸಲಿದ್ದಾರಂತೆ.

80ರಷ್ಟು ಶೂಟಿಂಗ್ ಮುಗಿಸಿದ 'ಅಂಜನಿಪುತ್ರ', ಕ್ಲೈಮ್ಯಾಕ್ಸ್ ಎಲ್ಲಿ?

ಇನ್ನುಳಿದಂತೆ ರಶ್ಮಿಕಾ ಮಂದಣ್ಣ ನಾಯಕಿ ಆಗಿದ್ದು, ಸಾಧುಕೋಕಿಲಾ, ಚಿಕ್ಕಣ್ಣ, ಗಿರಿ, ಧರ್ಮ ಸೇರಿದಂತೆ ಹಲವು ತಾರ ಬಳಗದಲ್ಲಿದ್ದಾರೆ. ಎಲ್ಲ ಅಂದುಕೊಂಡಂತೆ ಆದ್ರೆ, ಅಕ್ಟೋಬರ್ ನಲ್ಲಿ ಚಿತ್ರೀಕರಣ ಮುಕ್ತಾಯವಾಗಲಿದ್ದು, ನಂವೆಂಬರ್ ನಲ್ಲಿ ಸಿನಿಮಾ ತೆರೆಕಾಣಲಿದೆ.

English summary
Hindi actor Akhilendra Mishra returns to Kannada films with Anjaniputra. He plays one of the antagonists in the film and will join shooting in October.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada