»   » 'ಅಕಿರ'ನಿಗೆ ಪವರ್ ಫುಲ್ ವಾಯ್ಸ್ ನೀಡಿದ ಪವರ್ ಸ್ಟಾರ್!

'ಅಕಿರ'ನಿಗೆ ಪವರ್ ಫುಲ್ ವಾಯ್ಸ್ ನೀಡಿದ ಪವರ್ ಸ್ಟಾರ್!

Posted By:
Subscribe to Filmibeat Kannada

'ಪೊಲೀಸ್ ಕ್ವಾರ್ಟಸ್' ಖ್ಯಾತಿಯ ನಟ ಅನೀಶ್ ಅವರು 'ಅಕಿರ' ಚಿತ್ರದ ಮೂಲಕ ಮತ್ತೊಮ್ಮೆ ಗಾಂಧಿನಗರದಲ್ಲಿ ಕಾಣಿಸಿಕೊಂಡಿದ್ದು, ನಾಯಕಿ ನಟಿಯಾಗಿ ಅದಿತಿ ಅವರು ಅನಿಶ್ ಜೊತೆ ಡ್ಯುಯೆಟ್ ಹಾಡಿದ್ದಾರೆ.

ನಿರ್ದೇಶಕ ಜಿ.ನವೀನ್ ರೆಡ್ಡಿ ಆಕ್ಷನ್-ಕಟ್ ಹೇಳಿರುವ ಅನೀಶ್ ಅವರ 'ಅಕಿರ' ಚಿತ್ರದ ರೊಮ್ಯಾಂಟಿಕ್ ಹಾಡಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ತಮ್ಮ ವಾಯ್ಸ್ ನೀಡಿದ್ದು. ಆವಾರ್ಡ್ ವಿನ್ನಿಂಗ್ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರು ಚಿತ್ರದ ಹಾಡುಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

Akira Gets Power: Puneeth Rajkumar Croons For Anish's Next

ಸದ್ಯಕ್ಕೆ ಸ್ಯಾಂಡಲ್ ವುಡ್ ನಲ್ಲಿ ಲಕ್ಕಿ ವಾಯ್ಸ್ ಎಂದೇ ಖ್ಯಾತಿ ಪಡೆದಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು 'ಅಕಿರ' ಚಿತ್ರಕ್ಕೆ ಒಂದು ಹಾಡನ್ನು ಹಾಡಿದ್ದಾರೆ. ಇದಕ್ಕೆ ಫುಲ್ ಖುಷ್ ಆಗಿರುವ ಸಂಗೀತ ನಿರ್ದೇಶಕ ಅಜನೀಶ್ ಅವರು ತಮ್ಮ ಟ್ವಿಟ್ಟರ್ ನಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಅಲ್ಲದೇ ಪುನೀತ್ ಅವರು ಈ ಚಿತ್ರಕ್ಕೆ ಹಾಡಿದ್ದು, ದೀಪಾವಳಿ ಗಿಫ್ಟ್ ನೀಡಿದಂತಾಗಿದೆ ಎಂದಿದ್ದಾರೆ.

ಇನ್ನು ದ ಮೋಸ್ಟ್ ಬ್ಯುಸಿಯೆಸ್ಟ್ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ತಮ್ಮ ಗಾಯನದಿಂದ ಬರುವ ಆದಾಯವನ್ನು ಚಾರಿಟಿಗೆ ನೀಡುವ ಮೂಲಕ ಸಮಾಜ ಸೇವೆ ಮಾಡುತ್ತಿದ್ದಾರೆ.

ಇನ್ನು ಒಂದು ವಿಶೇಷ ಏನಪ್ಪಾ ಅಂದರೆ ಪುನೀತ್ ರಾಜ್ ಕುಮಾರ್ 'ಅಕಿರ' ಚಿತ್ರಕ್ಕೆ ಹಾಡಿದ್ದಕ್ಕಾಗಿ ಒಂದೇ ಒಂದು ಪೈಸೆ ಕೂಡ ಪಡೆದುಕೊಂಡಿಲ್ಲ, ಎಂದು ಪುನೀತ್ ರಾಜ್ ಕುಮಾರ್ ಅವರ ಮ್ಯಾನೇಜರ್ ಎನ್ ಎಸ್ ರಾಜಕುಮಾರ್ ಅವರು ತಿಳಿಸಿದ್ದಾರೆ.

    English summary
    The 'Rana Vikrama' actor Power Star Puneeth Rajkumar has sung a song in Anish's upcoming film 'Akira'. The music for the song has been composed by Award-winning music director Ajaneesh Lokanth.

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada