ನಾಗಾರ್ಜುನ ಪುತ್ರನ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಶ್ರಿಯಾಗೆ ಬೇರೆ ಮದ್ವೆ.!
Recommended Video

ತೆಲುಗು ಸೂಪರ್ ಸ್ಟಾರ್ ಅಕ್ಕಿನೇನಿ ನಾಗಾರ್ಜುನ ಅವರ ಎರಡನೇ ಮಗ ಅಖಿಲ್ ಅಕ್ಕಿನೇನಿ ಅವರ ಮದುವೆ ನಿಂತು ಹೋಗಿದ್ದ ಸುದ್ದಿ ಬಹುಶಃ ನೆನಪಿರಬಹುದು. ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಅಖಿಲ್ ಎಂಗೇಜ್ ಮೆಂಟ್ ನಂತರ ಮದುವೆಗೆ ಬ್ರೇಕ್ ಹಾಕಿದ್ದರು.
ಇದೀಗ, ಅಖಿಲ್ ಅಕ್ಕಿನೇನಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಹುಡುಗಿ ಬೇರೆ ಯುವಕನೊಂದಿಗೆ ಸಪ್ತಪದಿ ತುಳಿಯಲು ಸಿದ್ದವಾಗಿದ್ದಾರೆ. ಉದ್ಯಮಿ ಪುತ್ರಿ ಶ್ರಿಯಾ ಭೂಪಾಲ್ ಮತ್ತೊಬ್ಬ ಯುವಕನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ.
ಅಖಿಲ್ ಜೊತೆ ಸಂಬಂಧ ಮುರಿದುಕೊಂಡ ಶ್ರಿಯಾ, ಮೆಗಾ ಪವರ್ ಸ್ಟಾರ್ ರಾಮ್ ಚರಣ್ ತೇಜ ಅವರ ಸಂಬಂಧಿ ಜೊತೆ ಹೊಸ ಜೀವನ ಆರಂಭಿಸಲಿದ್ದಾರೆ. ಅಷ್ಟಕ್ಕೂ, ಅಖಿಲ್ ಜೊತೆ ಮದುವೆ ನಿಂತು ಹೋಗಲು ಕಾರಣವೇನು.? ಶ್ರಿಯಾ ಭೂಪಾಲ್ ವರಿಸುತ್ತಿರುವ ಆ ಹುಡುಗ ಯಾರು.? ಮುಂದೆ ಓದಿ.....

ಅಖಿಲ್ ಮಾಜಿ ಪ್ರೇಯಸಿಯ ನಿಶ್ಚಿತಾರ್ಥ
ನಟ ಅಖಿಲ್ ಅಕ್ಕಿನೇನಿ ಮತ್ತು ಶ್ರಿಯಾ ಭೂಪಾಲ್ ಪರಸ್ಪರ ಪ್ರೀತಿಸಿ ಮನೆಯವರನ್ನ ಒಪ್ಪಿಸಿ ಮದುವೆಗೆ ಸಿದ್ದವಾಗಿದ್ದರು. ಆ ಸಂಬಂಧ ಮುರಿದ ಹಿನ್ನೆಲೆ ನಿನ್ನೆ (ಏಪ್ರಿಲ್ 22) ಅನಿಂದಿತ ರೆಡ್ಡಿ ಜೊತೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ ಉದ್ಯಮಿ ಪುತ್ರಿ ಶ್ರಿಯಾ ಭೂಪಾಲ್.

ಯಾರು ಈ ಅನಿಂದಿತ ರೆಡ್ಡಿ.?
ಶ್ರಿಯಾ ಭೂಪಾಲ್ ಅವರನ್ನ ಕೈ ಹಿಡಿಯಲಿರುವ ಅನಿಂದಿತ ರೆಡ್ಡಿ ಅಪೋಲೋ ಸಂಸ್ಥೆಯ ಮಾಲೀಕ ಪ್ರತಾಪ್ ಸಿ ರೆಡ್ಡಿ ಅವರ ಮೊಮ್ಮಗ. ತೆಲಂಗಾಣ ರಾಜ್ಯದ ಶ್ರೀಮಂತ ಸಂಸದ ವಿಶ್ವೇಶ್ವರ ರೆಡ್ಡಿ ಅವರ ದೊಡ್ಡ ಮಗ. ನಟ ರಾಮ್ ಚರಣ್ ತೇಜ ಅವರ ಸಂಬಂಧಿ.

ರಾಮ್ ಚರಣ್ ತೇಜ ಸಂಬಂಧಿ ಹೇಗೆ.?
ಅಂದ್ಹಾಗೆ, ಅನಿಂದಿತ ರೆಡ್ಡಿ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅವರ ಭಾವಮೈದುನ. ಅಂದ್ರೆ, ರಾಮ್ ಚರಣ್ ತೇಜ ಅವರ ಪತ್ನಿ ಉಪಾಸನ ಅವರ ಸಹೋದರ. ಉಪಾಸನ ತಾಯಿ ಸಂಗೀತ ಮತ್ತು ಅನಿಂದಿತ ರೆಡ್ಡಿ ತಾಯಿ ಶೋಭನ ಸ್ವಂತ ಅಕ್ಕ-ತಂಗಿಯರು. ಹೀಗಾಗಿ, ಉಪಾಸನಗೆ ಅನಿಂದಿತ ರೆಡ್ಡಿ ಸಹೋದರ.
in pics: ನಾಗಚೈತನ್ಯ-ಸಮಂತಾ ಮದುವೆ ಆಲ್ಬಂ

ಶ್ರಿಯಾ ಮದುವೆ ಯಾವಾಗ.?
ಅನಿಂದಿತ ರೆಡ್ಡಿ ದೇಶೀಯ ಮೋಟಾರು ಕ್ರೀಡಾ ವಲಯದಲ್ಲಿ ವಿಶೇಷ ಮನ್ನಣೆ ಪಡೆದುಕೊಂಡಿದ್ದಾರೆ. ಈ ಮೊದಲೇ ತಿಳಿದಿರುವಂತೆ ಶ್ರಿಯಾ ಭೂಪಾಲ್ ಫ್ಯಾಷನ್ ಡಿಸೈನರ್. ಸದ್ಯ, ಅದ್ಧೂರಿಯಾಗಿ ಎಂಗೇಜ್ ಮೆಂಟ್ ಮಾಡಿಕೊಂಡಿರುವ ನವ ಜೋಡಿಗಳು ಇದೇ ವರ್ಷ ಕಲ್ಯಾಣವಾಗುವ ತಯಾರಿ ನಡೆಸುತ್ತಿದ್ದಾರೆ.

ಅಖಿಲ್ ಜೊತೆ ಮದುವೆ ನಿಲ್ಲಲು ಕಾರಣವೇನು.?
ಅಷ್ಟಕ್ಕೂ, ಅಖಿಲ್ ಜೊತೆ ಶ್ರಿಯಾ ಭೂಪಾಲ್ ಮದುವೆ ನಿಲ್ಲಲು ಕಾರಣವೇನು ಎಂಬುದು ಬಹಿರಂಗವಾಗಿಲ್ಲವಾದರೂ, ಮೂಲಗಳ ಪ್ರಕಾರ ಅಖಿಲ್ ಮತ್ತು ಶ್ರಿಯಾ ಅವರ ಸಂಬಂಧದಲ್ಲಿ ಬಿರುಕು ಮೂಡಿತ್ತು ಎನ್ನಲಾಗಿದೆ. ಸಿನಿಮಾಗಳಲ್ಲಿ ಬ್ಯುಸಿಯಾದ ಅಖಿಲ್, ಶ್ರಿಯಾ ಜೊತೆಯಲ್ಲಿ ಸಮಯ ಕಳೆಯುತ್ತಿರಲಿಲ್ಲ ಎಂಬ ಕಾರಣಕ್ಕೆ ಇಬ್ಬರು ದೂರವಾಗಲು ನಿರ್ಧರಿಸಿದರಂತೆ.
in pics: ನಾಗಚೈತನ್ಯ-ಸಮಂತಾ ಮದುವೆ ಆರತಕ್ಷತೆ

ಮದುವೆ ದಿನಾಂಕವೂ ನಿಗದಿಯಾಗಿತ್ತು
2016ರ ಡಿಸೆಂಬರ್ 9 ರಂದು ಅಖಿಲ್ ಮತ್ತು ಶ್ರಿಯಾ ಅವರ ನಿಶ್ಚಿತಾರ್ಥ ಆಗಿತ್ತು. ನಾಗಾರ್ಜುನ ಕುಟುಂಬ, ಶ್ರಿಯಾ ಭೂಪಾಲ್ ಕುಟುಂಬ ಸೇರಿದಂತೆ ಚಿತ್ರರಂಗದ ಹಲವರು ಈ ಭಾಗಿಯಾಗಿದ್ದರು. ಕನ್ನಡ ನಟ ಶಿವರಾಜ್ ಕುಮಾರ್ ಈ ಕಾರ್ಯಕ್ರಮಕ್ಕೆ ಹೋಗಿದ್ದರು. 2017ರ ಮಾರ್ಚ್ ತಿಂಗಳಲ್ಲಿ ಮದುವೆ ಕೂಡ ಆಗಬೇಕಿತ್ತು. ಆದ್ರೆ, ನಿಶ್ಚಿತಾರ್ಥ ಮಾಡಿಕೊಂಡ ಮೂರೇ ತಿಂಗಳಲ್ಲಿ ಬ್ರೇಕ್ ಅಪ್ ಕೂಡ ಆಗೋಯ್ತು.


Click it and Unblock the Notifications











