ನಾಗಾರ್ಜುನ ಪುತ್ರನ ಮಾಜಿ ಪ್ರೇಯಸಿಯ ಮದ್ವೆ ಆಗೋಯ್ತು
ಎಲ್ಲ ಅಂದುಕೊಂಡಂತೆ ಆಗಿದ್ದರೇ ಇಷ್ಟೋತ್ತಿಗಾಗಲೇ, ತೆಲುಗು ಸೂಪರ್ ಸ್ಟಾರ್ ನಾಗಾರ್ಜುನ ಅವರ ಎರಡನೇ ಮಗ ಅಖಿಲ್ ಅಕ್ಕಿನೇನಿ ಅವರ ಮದುವೆ ಆಗಬೇಕಿತ್ತು. ಆದ್ರೆ, ಕಾರಣಾಂತರಗಳಿಂದ ನಿಶ್ಚಿತಾರ್ಥದ ಬಳಿಕ ಅಖಿಲ್ ಮದುವೆ ಮುರಿದು ಬಿತ್ತು.
ಇದೀಗ, ಅಖಿಲ್ ಜೊತೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದ ಶ್ರೀಯಾ ಭೂಪಾಲ್ ಬೇರೊಬ್ಬ ಯುವಕನ ಅದ್ಧೂರಿಯಾಗಿ ಜೊತೆ ಮದುವೆ ಆಗಿದ್ದಾರೆ.
ಖ್ಯಾತ ಉದ್ಯಮಿಯ ಮೊಮ್ಮಗನ ಜೊತೆ ಅಖಿಲ್ ಅಕ್ಕಿನೇನಿಯ ಮಾಜಿ ಪ್ರೇಯಸಿ ಶ್ರಿಯಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಟಾಲಿವುಡ್ ನ ಹಲವು ಗಣ್ಯರು, ಸೆಲೆಬ್ರಿಟಿಗಳು ಭಾಗವಹಿಸಿದ್ದಾರೆ. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮುಂದೆ ನೋಡಿ...

ಉದ್ಯಮಿ ಮೊಮ್ಮಗನ ಜೊತೆ ಮದುವೆ
ಏಪ್ರಿಲ್ ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ ಈಗ ಸಂಪ್ರದಾಯವಾಗಿ ಹೈದ್ರಾಬಾದ್ ನಲ್ಲಿ ಮದುವೆಯಾಗಿದೆ. ವಿನ್ಯಾಸಕಿ ಶ್ರಿಯಾ ಭೂಪಾಲ್ ಅಪೋಲೋ ಆಸ್ಪತ್ರೆಯ ಮಾಲೀಕರ ಮೊಮ್ಮಗ ಅನಿಂದಿತ ರೆಡ್ಡಿ ಜೊತೆ ಗುರು ಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮದುವೆಯಲ್ಲಿ ತಾರೆಯರು
ಶ್ರಿಯಾ ಮತ್ತು ಅನಿಂದಿತ ರೆಡ್ಡಿ ಅವರ ಮದುವೆಗೆ ಮೆಗಾಸ್ಟಾರ್ ಪುತ್ರ ರಾಮ್ ಚರಣ್ ಮತ್ತು ಪತ್ನಿ ಉಪಾಸನಾ, ಹಾಗೂ ಮಹೇಶ್ ಬಾಬು ಅವರ ಪತ್ನಿ ನಮ್ರತಾ ಸೇರಿದಂತೆ ಹಲವು ತಾರೆಯರು ಹಾಗೂ ರಾಜಕಾರಣಿಗಳು ಆಗಮಿಸಿದ್ದರು. ಶ್ರಿಯಾ ಅನೇಕ ನಟಿಯರಿಗೆ. ಡಿಸೈನರ್ ಆಗಿ ಕೆಲಸ ಮಾಡಿದ್ದಾರೆ. ರಾಶಿ ಖನ್ನಾ, ಪ್ರಗ್ನಾ ಕೂಡ ಈ ಮದುವೆಯಲ್ಲಿ ಹಾಜರಿದ್ದರು.

ನಟ ರಾಮ್ ಚರಣ್ ಸಂಬಂಧಿ ಜೊತೆ ಹೊಸ ಜೀವನ
ಶ್ರಿಯಾ ಭೂಪಾಲ್ ಅವರನ್ನ ಕೈ ಹಿಡಿದಿರುವ ಅನಿಂದಿತ ರೆಡ್ಡಿ ಅಪೋಲೋ ಸಂಸ್ಥೆಯ ಮಾಲೀಕ ಪ್ರತಾಪ್ ಸಿ ರೆಡ್ಡಿ ಅವರ ಮೊಮ್ಮಗ. ತೆಲಂಗಾಣ ರಾಜ್ಯದ ಶ್ರೀಮಂತ ಸಂಸದ ವಿಶ್ವೇಶ್ವರ ರೆಡ್ಡಿ ಅವರ ದೊಡ್ಡ ಮಗ. ನಟ ರಾಮ್ ಚರಣ್ ತೇಜ ಅವರ ಸಂಬಂಧಿ.

ರಾಮ್ ಚರಣ್ ತೇಜ ಸಂಬಂಧಿ ಹೇಗೆ.?
ಅಂದ್ಹಾಗೆ, ಅನಿಂದಿತ ರೆಡ್ಡಿ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅವರ ಭಾವಮೈದುನ. ಅಂದ್ರೆ, ರಾಮ್ ಚರಣ್ ತೇಜ ಅವರ ಪತ್ನಿ ಉಪಾಸನ ಅವರ ಸಹೋದರ. ಉಪಾಸನ ತಾಯಿ ಸಂಗೀತ ಮತ್ತು ಅನಿಂದಿತ ರೆಡ್ಡಿ ತಾಯಿ ಶೋಭನ ಸ್ವಂತ ಅಕ್ಕ-ತಂಗಿಯರು. ಹೀಗಾಗಿ, ಉಪಾಸನಗೆ ಅನಿಂದಿತ ರೆಡ್ಡಿ ಸಹೋದರ.

ಅಖಿಲ್ ಜೊತೆ ಮದುವೆ ನಿಲ್ಲಲು ಕಾರಣವೇನು.?
ಅಷ್ಟಕ್ಕೂ, ಅಖಿಲ್ ಜೊತೆ ಶ್ರಿಯಾ ಭೂಪಾಲ್ ಮದುವೆ ನಿಲ್ಲಲು ಕಾರಣವೇನು ಎಂಬುದು ಬಹಿರಂಗವಾಗಿಲ್ಲವಾದರೂ, ಮೂಲಗಳ ಪ್ರಕಾರ ಅಖಿಲ್ ಮತ್ತು ಶ್ರಿಯಾ ಅವರ ಸಂಬಂಧದಲ್ಲಿ ಬಿರುಕು ಮೂಡಿತ್ತು ಎನ್ನಲಾಗಿದೆ. ಸಿನಿಮಾಗಳಲ್ಲಿ ಬ್ಯುಸಿಯಾದ ಅಖಿಲ್, ಶ್ರಿಯಾ ಜೊತೆಯಲ್ಲಿ ಸಮಯ ಕಳೆಯುತ್ತಿರಲಿಲ್ಲ ಎಂಬ ಕಾರಣಕ್ಕೆ ಇಬ್ಬರು ದೂರವಾಗಲು ನಿರ್ಧರಿಸಿದರಂತೆ.


Click it and Unblock the Notifications











