ಖ್ಯಾತ ನಟ ಅಕ್ಕಿನೇನಿ ನಾಗಶ್ವೇರರಾವ್ ಗೆ ಕ್ಯಾನ್ಸರ್

By ಅನಂತರಾಮು, ಹೈದರಾಬಾದ್

ತೆಲುಗು ಚಿತ್ರರಂಗದ ಖ್ಯಾತ ನಟ ಹಾಗೂ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಅಕ್ಕಿನೇನಿ ನಾಗೇಶ್ವರ ರಾವ್ (90) ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಇತ್ತೀಚೆಗೆ (ಅ.8) ಅವರು ಹೊಟ್ಟೆನೋವಿನ ಕಾರಣ ವೈದ್ಯರನ್ನು ಭೇಟಿ ಮಾಡಿದ್ದರು.

ವೈದ್ಯ ಪರೀಕ್ಷೆಯಲ್ಲಿ ಅವರ ದೇಹದಲ್ಲಿ ಕ್ಯಾನ್ಸರ್ ಕಣಗಳು ಇರುವುದು ಪತ್ತೆಯಾಗಿದೆ. ಈ ವಿಷಯವನ್ನು ಸ್ವತಃ ಅಕ್ಕಿನೇನಿ ನಾಗೇಶ್ವರ ರಾವ್ ಮಾಧ್ಯಮಗಳಿಗೆ ಕೆಲ ದಿನಗಳ ಹಿಂದೆ ತಿಳಿಸಿದ್ದರು. ಚಿಕಿತ್ಸೆಗಾಗಿ ಅವರು ಈಗ ಹೈದರಾಬಾದಿನ ಕಿಮ್ಸ್ ಆಸ್ಪತ್ರೆಗಾಗಿ ದಾಖಲಾಗಿದ್ದಾರೆ. ಸದ್ಯಕ್ಕೆ ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.

ನಾಗೇಶ್ವರ ರಾವ್ ಅವರಿಗೆ ಕರುಳಿನ ಕ್ಯಾನ್ಸರ್ ಇರುವುದಾಗಿ ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿತ್ತು. ಸದ್ಯಕ್ಕೆ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಕಿಮ್ಸ್ ಆಸ್ಪತ್ರೆಯ ಮ್ಯಾನೇಜಿಂಗ್ ಡೈರೆಕ್ಟರ್, ಸಿಈಓ ಡಾಕ್ಟರ್ ಭಾಸ್ಕರರಾವ್ ಹೇಳಿದ್ದಾರೆ.

ಶೀಘ್ರದಲ್ಲೇ ಸಂಪೂರ್ಣ ವಿವರಗಳು

ಶೀಘ್ರದಲ್ಲೇ ಸಂಪೂರ್ಣ ವಿವರಗಳು

ನಾಗೇಶ್ವರ ರಾವ್ ಜೊತೆ ಅವರ ಪುತ್ರರಾದ ಅಕ್ಕಿನೇನಿ ನಾಗಾರ್ಜುನ, ವೆಂಕಟ್ ಹಾಗೂ ಕುಟುಂಬ ಸದಸ್ಯರು ಆಸ್ಪತ್ರೆಯಲ್ಲೇ ಇದ್ದಾರೆ. ಸೋಮವಾರ (ಅ.21) ಅವರ ಆರೋಗ್ಯದ ಬಗ್ಗೆ ಸಂಪೂರ್ಣ ವಿವರಗಳನ್ನು ನೀಡುವ ಸಾಧ್ಯತೆಗಳಿವೆ.

ಅಪಾರ ಅಭಿಮಾನಿ ಬಳಗಕ್ಕೆ ನೋವಿನ ಸಂಗತಿ

ಅಪಾರ ಅಭಿಮಾನಿ ಬಳಗಕ್ಕೆ ನೋವಿನ ಸಂಗತಿ

ನಾಗೇಶ್ವರ ರಾವ್ ಅವರಿಗೆ 90 ವರ್ಷಗಳಾಗಿದ್ದರೂ ಸಾಧ್ಯವಾದಾಗಲೆಲ್ಲಾ ಬಣ್ಣ ಹಚ್ಚುತ್ತಲೇ ಇದ್ದಾರೆ. ಈಗ ಅವರು ಆಸ್ಪತ್ರೆಗೆ ದಾಖಲಾಗಿರುವುದು ಅವರ ಅಪಾರ ಅಭಿಮಾನಿ ಬಳಗಕ್ಕೆ ನೋವಿನ ಸಂಗತಿಯಾಗಿದೆ. ತಮಗೆ ಈ ರೀತಿಯಾಗಿದೆ ಎಂಬುದನ್ನು ಮೊದಲು ತಿಳಿಸಿದ್ದೇ ನಾಗೇಶ್ವರರಾವ್.

ವೃದ್ಧಾಪ್ಯದಲ್ಲಿ ಕ್ಯಾನ್ಸರ್ ಕಣಗಳು ಚುರುಕಾಗಿ ಇರುವುದಿಲ್ಲವಂತೆ

ವೃದ್ಧಾಪ್ಯದಲ್ಲಿ ಕ್ಯಾನ್ಸರ್ ಕಣಗಳು ಚುರುಕಾಗಿ ಇರುವುದಿಲ್ಲವಂತೆ

ಅವರು ಅನ್ನಪೂರ್ಣ ಸ್ಟುಡಿಯೋದಲ್ಲಿ ಮಾತನಾಡುತ್ತಾ, "ನನಗೆ ಅ.8ರಂದು ಹೊಟ್ಟೆನೋವು ಕಾಣಿಸಿಕೊಳ್ತು. ವೈದ್ಯರು ನಾನಾ ಪರೀಕ್ಷೆಗಳನ್ನು ಮಾಡಿದರು. ಕ್ಯಾನ್ಸರ್ ಕಣಗಳಿರುವುದು ಪತ್ತೆಯಾಯಿತು. ಆದರೆ ವೃದ್ಧಾಪ್ಯದಲ್ಲಿ ಕ್ಯಾನ್ಸರ್ ಕಣಗಳು ಚುರುಕಾಗಿ ಇರುವುದಿಲ್ಲ ಎಂದು ವೈದ್ಯರು ಹೇಳಿದರು..."

ಇದೇನು ಭಯಂಕರ ವ್ಯಾಧಿಯಲ್ಲ

ಇದೇನು ಭಯಂಕರ ವ್ಯಾಧಿಯಲ್ಲ

ಈ ವಯಸ್ಸಿನಲ್ಲಿ ಕ್ಯಾನ್ಸರ್ ಬಂದಿರುವುದು ನಿಜಕ್ಕೂ ಸಂತಸದ ಸಂಗತಿ. ನನಗೆ ಕ್ಯಾನ್ಸರ್ ಇದೆ ಎಂಬುದನ್ನು ತಿಳಿಸುವ ಸಲುವಾಗಿಯೇ ಈ ಪತ್ರಿಕಾಗೋಷ್ಠಿ. ನಾನು ಅಭಿನಯಿಸಿದ ಸಿನಿಮಾಗಳಲ್ಲಿ ತೋರಿಸಿದಂತೆ ಇದೇನು ಭಯಂಕರ ವ್ಯಾಧಿಯಲ್ಲ. ಕ್ಯಾನ್ಸರನ್ನು ಜಯಿಸಿದ ಬಹಳಷ್ಟು ಮಂದಿ ನಮ್ಮ ಕಣ್ಮುಂದೆ ಇದ್ದಾರೆ.

ಪದೇಪದೇ ಕೇಳಬೇಡಿ ನಗುನಗುತ್ತಾ ಮಾತನಾಡಿ

ಪದೇಪದೇ ಕೇಳಬೇಡಿ ನಗುನಗುತ್ತಾ ಮಾತನಾಡಿ

ಅವರೆಲ್ಲಾ ಸಂತೋಷವಾಗಿ ಜೀವನ ಸಾಗಿಸುತ್ತಿದ್ದಾರೆ. ಅಂತಹವರಲ್ಲಿ ನಾನೂ ಒಬ್ಬನಾಗಬಹುದೇನೋ. ನಾನು ಹೆಚ್ಚು ಕಾಲ ಜೀವಿಸಬೇಕಾದರೆ ನನ್ನ ಮಿತ್ರರು, ಅಭಿಮಾನಿಗಳು, ಶ್ರೇಯೋಭಿಲಾಷಿಗಳು ಹೆಚ್ಚು ಆತಂಕಪಡಬಾರದು. ಈ ಬಗ್ಗೆ ನನ್ನನ್ನು ಪದೇಪದೇ ಕೇಳುತ್ತಾ ಮುಜುಗರಕ್ಕೆ ಗುರಿಮಾಡಬೇಡಿ. ನನ್ನೊಂದಿಗೆ ಎಲ್ಲರೂ ನಗುನಗುತ್ತಾ ಮಾತನಾಡಿ" ಎಂದು ವಿನಂತಿಸಿಕೊಂಡಿದ್ದಾರೆ.

More from Filmibeat

English summary
Akkineni Nageswara Rao revealed that doctors found cancer in his body at an early stage. Talking in a press meet, he said that he do not want press to start rumours about his health and revealed it himself.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X