ಟಾಲಿವುಡ್ ಸ್ಟಾರ್ ನಟನ ಸಿನಿಮಾದಲ್ಲಿ 'ಪಂಚತಂತ್ರ' ಸುಂದರಿ
ಅಕ್ಷರಾ ಗೌಡ 'ಪಂಚತಂತ್ರ' ಸಿನಿಮಾ ಮೂಲಕ ಕನ್ನಡಕ್ಕೆ ಕಾಲಿಟ್ಟ ಕನ್ನಡದ ಬೆಡಗಿ. ಮೂಲತಃ ಕರ್ನಾಟಕದವರಾದ ಅಕ್ಷರಾ ಹೆಚ್ಚಾಗಿ ಗುರುತಿಸಿಕೊಂಡಿದ್ದು ಬಾಲಿವುಡ್ ಮತ್ತು ಕಾಲಿವುಡ್ ಸಿನಿ ಇಂಡಸ್ಟ್ರಿಯಲ್ಲಿ. ಹಿಂದಿ ಮತ್ತು ತಮಿಳು ಚಿತ್ರರಂದಲ್ಲಿ ಮಿಂಚುತ್ತಿದ್ದ ಅಕ್ಷರಾ 'ಪಂಚತಂತ್ರ' ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿ ಬಂದ 'ಪಂಚತಂತ್ರ' ಉತ್ತಮ ಪ್ರದರ್ಶನ ಕಾಣುತ್ತಿದೆ. ಪ್ರೇಕ್ಷಕರ ಮನ ಗೆದ್ದ 'ಪಂಚತಂತ್ರ' ಸಿನಿಮಾದ ನಾಯಕಿ ಅಕ್ಷರಾ ಈಗ ಟಾಲಿವುಡ್ ನತ್ತ ಪಯಣ ಬೆಳೆಸಿದ್ದಾರೆ. ತಮಿಳು, ಹಿಂದಿ, ಕನ್ನಡ ಚಿತ್ರರಂಗದಲ್ಲಿ ಮಿಂಚಿರುವ ಅಕ್ಷರಾ ಮೊದಲ ಬಾರಿಗೆ ಟಾಲಿವುಡ್ ಮಂದಿಯನ್ನು ರಂಜಿಸಲು ಸಜ್ಜಾಗಿದ್ದಾರೆ.
ಟಾಲಿವುಡ್ ನ ಸ್ಟಾರ್ ನಟ ಅಕ್ಕಿನೇನಿ ನಾಗಾರ್ಜುನ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಾಗಾರ್ಜುನ್ ಅಭಿನಯಿಸುತ್ತಿರುವ 'ಮನ್ಮಥುಡು-2' ಸಿನಿಮಾದಲ್ಲಿ ಅಕ್ಷರಾ ಪ್ರಮುಖ ಪಾತ್ರದಲ್ಲಿ ಮಿಂಚಲಿದ್ದಾರೆ. 2002ರಲ್ಲಿ ರಿಲೀಸ್ ಆಗಿದ್ದ 'ಮನ್ಮಥುಡು' ಚಿತ್ರದ ಸೀಕ್ವೆಲ್ ಇದಾಗಿದ್ದು ಟಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ.

'ಮನ್ಮಥುಡು-2' ಚಿತ್ರದಲ್ಲಿ ನಾಯಕಿಯಾಗಿ ರಾಕುಲ್ ಪ್ರೀತ್ ಸಿಂಗ್ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷ ಪಾತ್ರದಲ್ಲಿ ಅಕ್ಷರ ಗೌಡ ಅಭಿನಯಿಸುತ್ತಿದ್ದಾರೆ. ಸಾಕಷ್ಟು ಚಿತ್ರದಲ್ಲಿ ಬ್ಯುಸಿ ಇರುವ 'ಪಂಚತಂತ್ರ' ಸುಂದರಿ ನಾಗಾರ್ಜುನ್ ಸಿನಿಮಾ ಅಂದಾಕ್ಷಣ ತಟ್ ಅಂತ ಒಪ್ಪಿಕೊಂಡಿದ್ದಾರಂತೆ. ಚಿತ್ರದಲ್ಲಿ ಸಖತ್ ಗ್ಲಾಮರ್ ಆಗಿ ಕಾಣಿಸಿಕೊಳ್ಳಲಿದ್ದಾರಂತೆ. ಸಧ್ಯದಲ್ಲೇ ಅಕ್ಷರಾ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.


Click it and Unblock the Notifications











