»   » ಯೋಗರಾಜ್ ಭಟ್ಟರ ಹೊಸ ಚಿತ್ರಕ್ಕೆ ಸಿಕ್ಕ ನಾಯಕಿ ಇವರೇ

ಯೋಗರಾಜ್ ಭಟ್ಟರ ಹೊಸ ಚಿತ್ರಕ್ಕೆ ಸಿಕ್ಕ ನಾಯಕಿ ಇವರೇ

Posted By:
Subscribe to Filmibeat Kannada
ಯೋಗರಾಜ್ ಭಟ್ಟರ ಹೊಸ ಚಿತ್ರಕ್ಕೆ ನಾಯಕಿ ಇವರೇ | Filmibeat Kannada

ನಿರ್ದೇಶಕ ಯೋಗರಾಜ್ ಭಟ್ 'ಮುಗುಳುನಗೆ' ನಂತರ ಹೊಸ ಸಿನಿಮಾ ಶುರು ಮಾಡುತ್ತಿದ್ದಾರೆ. ಈ ಬಾರಿ ಹೊಸ ಪ್ರತಿಭೆಗಳ ಸಿನಿಮಾ ಮಾಡಲು ಹೊರಟಿರುವ ಯೋಗರಾಜ್ ಭಟ್ ತಮ್ಮ ಚಿತ್ರಕ್ಕೆ ಈಗ ನಾಯಕಿಯನ್ನು ಆಯ್ಕೆ ಮಾಡಿದ್ದಾರೆ.

ಭಟ್ಟರ ಚಿತ್ರಕ್ಕೆ ಅಕ್ಷರ ಗೌಡ ನಾಯಕಿ ಆಗಿ ಆಯ್ಕೆ ಆಗಿದ್ದಾರೆ. ಅಕ್ಷರ ಗೌಡಗೆ ಕನ್ನಡದಲ್ಲಿ ಇದು ಮೊದಲ ಸಿನಿಮಾವಾಗಿದೆ. ಅಕ್ಷರ ಮೂಲತಃ ಬೆಂಗಳೂರಿನ ಹುಡುಗಿ ಬೆಂಗಳೂರಿನಲ್ಲಿ ಹುಟ್ಟಿ ಇಲ್ಲೇ ಓದು ಮುಗಿಸಿದ್ದಾರೆ. ಕನ್ನಡದ ಹುಡುಗಿ ಆದರೂ ಈಗಾಗಲೇ ಅಕ್ಷರ ತಮಿಳು, ಹಿಂದಿಯ ಕೆಲ ಸಿನಿಮಾಗಳಲ್ಲಿ ನಟಿಸಿದ್ದರು. ಇನ್ನು ಸಿನಿಮಾದಲ್ಲಿ ಅವರು ಮಾರ್ಡನ್ ಹುಡುಗ ಪಾತ್ರದಲ್ಲಿ ನಟಿಸಲಿದ್ದಾರೆ.

Akshara Gowda selected to play lead role in Yogaraj Bhat's next movie

ಅಕ್ಷರ ಲುಕ್ ಸಖತ್ ಹಾಟ್ ಆಗಿದ ಇದ್ದು ಈ ಪಾತ್ರಕ್ಕೆ ಸೂಕ್ತವಾಗಿ ಕಾಣುತ್ತಾರಂತೆ. ಸಿನಿಮಾದಲ್ಲಿ ಇಬ್ಬರು ನಾಯಕಿಯರು ಇದ್ದಾರೆ. ಒಂದು ಪಾತ್ರಕ್ಕೆ ಅಕ್ಷರ ಗೌಡ ಆಯ್ಕೆ ಆಗಿದ್ದು, ಇನ್ನೊಂದು ಪಾತ್ರದಲ್ಲಿ ನಟಿ ಆಶಿಕಾ ರಂಗನಾಥ್ ನಟಿಸುವ ಸಾದ್ಯತೆ ಇದೆ.

ಈ ಹಿಂದೆ '1/4 ಕೆ.ಜಿ ಪ್ರೀತಿ' ಸಿನಿಮಾದಲ್ಲಿ ನಟಿಸಿದ್ದ ವಿಹಾನ್ ಗೌಡ ಈ ಚಿತ್ರದ ನಾಯಕನಾಗಿದ್ದಾರೆ. ಕನ್ನಡದ ಸಾಕಷ್ಟು ಸ್ಟಾರ್ ನಟರ ಜೊತೆ ಕೆಲಸ ಮಾಡಿದ್ದ ಭಟ್ಟರು ಈಗ ಮತ್ತೆ ಹೊಸಬರ ಜೊತೆ ಸೇರಿದ್ದಾರೆ. ಯೋಗರಾಜ್ ಭಟ್ಟರ ಈ ಹೊಸ ಸಿನಿಮಾ ಸಂಕ್ರಾಂತಿ ಹಬ್ಬದ ಬಳಿಕ ಶುರು ಆಗಲಿದೆ.

English summary
Actress Akshara Gowda selected to play lead role in kannada director Yogaraj Bhat's next movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X