»   » ಕನ್ನಡದ ಅಕ್ಷರ ಗೌಡ ಕಾಲಿವುಡ್ ನಲ್ಲಿ ಮಿಂಚಿಂಗ್

ಕನ್ನಡದ ಅಕ್ಷರ ಗೌಡ ಕಾಲಿವುಡ್ ನಲ್ಲಿ ಮಿಂಚಿಂಗ್

Posted By:
Subscribe to Filmibeat Kannada

ನಿಮ್ಗೆ ಗ್ಲಾಮರ್ ಗೊಂಬೆ ಅಕ್ಷರ ಗೌಡ ಗೊತ್ತಿರಬೇಕಲ್ವ. ಅದೇ ಆಲ್ ರೌಂಡರ್ ಯುವರಾಜ್ ಸಿಂಗ್ ಅವರ ಜೊತೆ ಮುಂಬೈನ ಬಾಂದ್ರಾದಲ್ಲಿ ಕಾಣಿಸಿಕೊಂಡಾಕೆ. ಬಾಲಿವುಡ್ ಒಂದಷ್ಟು ಗಾಸಿಪ್ ಕಾಲಂನಲ್ಲಿ ಆಕೆ ಹೆಸರು ಸುತ್ತಾಡಿ ಸುಸ್ತಾದ ಮೇಲೆ ಈಗ ದಕ್ಷಿಣದಲ್ಲಿ ಭರ್ಜರಿ ಆಫರ್ ಪಡೆದಿದ್ದಾಳೆ.

ತಮಿಳು ಚಿತ್ರರಂಗದ ಸ್ಟಾರ್ ವಿಜಯ್ ಅವರ ಬಹುನಿರೀಕ್ಷಿತ ಚಿತ್ರ ತುಪಾಕಿ (Thuppakki)ಯಲ್ಲಿ ಅಕ್ಷರ ಗೌಡಗೆ ಮಹತ್ವದ ಪಾತ್ರ ಇದೆಯಂತೆ. ಇದರ ಜೊತೆಗೆ ತೆಲುಗಿನ 'ಪ್ರಿನ್ಸ್' ಮಹೇಶ್ ಬಾಬು ಚಿತ್ರಕ್ಕೂ ಸಹಿ ಹಾಕಿದ್ದಾಳಂತೆ.

ಬಿಗ್ ಬಜೆಟ್ ಚಿತ್ರಗಳಲ್ಲಿ ಅವಕಾಶ ಸಿಕ್ಕಿದರೂ ಅಕ್ಷರಾಗೆ ಯಾವ ರೀತಿ ಪಾತ್ರ ಸಿಕ್ಕಿದೆ ಎಂಬುದರ ಬಗ್ಗೆ ಇನ್ನೂ ಸ್ಪಷ್ಟತೆಯಿಲ್ಲ.

ತುಪಾಕಿಯಲ್ಲಿ ವಿಜಯ್ ಜೊತೆ ಕಾಜಲ್ ಅಗರವಾಲ್ ನಾಯಕಿಯಾಗಿದ್ದು, ಅಕ್ಷರಾಗೂ ಸರಿಸಮನಾದ ಪಾತ್ರ ಇದೆ ಎನ್ನಲಾಗಿದೆ. ಪ್ರಧಾನ ಪಾತ್ರಗಳಿಗೆ ಕಾಮಿಡಿ ಕಿಕ್ ಕೊಡುವುದು ನನ್ನ ಕೆಲಸ ಎಂದು ಅಕ್ಷರ ಕಣ್ಣು ಮಿಟುಕಿಸುತ್ತಾಳೆ.

'ಘಜನಿ' ಖ್ಯಾತಿ ನಿರ್ದೇಶಕ ಎ.ಆರ್ ಮುರುಗದಾಸ್ ಅವರ ಕೈ ಕೆಳಗೆ ನಟಿಸುವ ಅವಕಾಶ ಸಿಕ್ಕಿರುವುದಕ್ಕೆ ಅಕ್ಷರ ಸಹಜವಾಗೇ ಖುಷಿಯಾಗಿದ್ದಾಳೆ.

ತುಪಾಕಿ ಇನ್ನೇನು ಬಿಡುಗಡೆಗೆ ಸಿದ್ಧವಾಗಿದೆ. ದೀಪಾವಳಿ ಸಮಯದಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರ ಧಮಾಕ ಮಾಡಲಿದೆ ಎಂದು ಎಲ್ಲರೂ ನಂಬಿದ್ದಾರೆ. ತುಪಾಕಿ ನಂತರ ಅಕ್ಷರ ಸೀದಾ ಟಾಲಿವುಡ್ ಅಂಗಳಕ್ಕೆ ಇಳಿಯಲಿದ್ದಾಳೆ.

ಸುಕುಮಾರ್ ನಿರ್ದೇಶನದ ಮಹೇಶ್ ಬಾಬು ಅವರ ಹೊಸ ಚಿತ್ರದಲ್ಲಿ ತಮನ್ನಾ ಜೊತೆ ಅಕ್ಷರಾ ಕೂಡಾ ಕಾಣಿಸಿಕೊಳ್ಳಲಿದ್ದಾಳೆ ಎಂಬ ಸುದ್ದಿಯಿದೆ. ಆದರೆ, ತಮನ್ನಾ ಚಿತ್ರದಿಂದ ಹೊರ ನಡೆದಿದ್ದಾಳೆ. ಅಕ್ಷರಾ ಮಾತ್ರ ನಾಯಕಿ ಎಂಬ ಸುದ್ದಿಯೂ ಇದೆ.

ಇದಲ್ಲದೆ ಅಕ್ಷರಾ ಹಿಂದಿಯಲ್ಲಿ ಜಾನ್ ಅಬ್ರಹಾಂ ಜೊತೆ ನಾಯಕಿಯಾಗಿ ನಟಿಸುತ್ತಿದ್ದಾಳೆ. ತೆಲುಗು, ತಮಿಳು ಅವಕಾಶ ಸಿಕ್ಕಿ ಮಿಂಚುತ್ತಿರುವ ಅಕ್ಷರ ಕನ್ನಡಕ್ಕೆ ಎಂದು ಬರುವಳೋ ಕಾದು ನೋಡಬೇಕಿದೆ.

ಅಕ್ಷರಾ ಗೌಡ ಮೂಲ ಹೆಸರು ಹರಿಣಿ ಗೌಡಾ ಆಗಿದ್ದು, ಬಾಲಿವುಡ್ ಗೆ ಎಂಟ್ರಿ ಕೊಟ್ಟ ಮೇಲೆ ಹೀನಾ ಖಾನ್ ಎಂದು ಹೆಸರನ್ನು ಬದಲಿಸಿಕೊಂಡಿದ್ದಾರೆ ಎಂಬ ಸುದ್ದಿಯಿತ್ತು. ಅದರೆ, ಅದೆಲ್ಲವೂ ಸುಳ್ಳು ಸುದ್ದಿಯಾಗಿದ್ದು, ನಾನು ಅಕ್ಷರ ಗೌಡ ಎಂಬ ಹೆಸರೇ ಎಲ್ಲೆಡೆ ಬಳಸುತ್ತಿದ್ದೇನೆ ಎಂದು ಅಕ್ಷರ ಗೌಡ ಹೇಳಿದ್ದಳು.

ಮುಂಬೈನ ಬಾಂದ್ರಾದಲ್ಲಿ ವಾಸವಾಗಿದ್ದ ಅಕ್ಷರಾ, ಐಪಿಎಲ್ ಪಾರ್ಟಿಯಲ್ಲಿ ಯುವರಾಜ್ ಸಿಂಗ್ ಜೊತೆ ಕುಣಿದಾಡಿದ್ದು ಗಾಸಿಪ್ ಕಾಲಂ ಸೇರುವಂತೆ ಮಾಡಿತ್ತು.

English summary
Bangalore lass Akshara Gowda, who made her Bollywood debut with Chitkabrey, has bagged a biggies Akshara Gowda will be seen along with Kajal Kajal Agarwal in Vijay's Thuppakki and Akshara also shares screen presence with Tamanna and Mahesh in a Telugu flick
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada