»   » ವಿಕ್ರಮ್ ರವಿಚಂದ್ರನ್ ಬಿಟ್ಟು ಹೇಮಂತ್ ಜೊತೆ ಬರ್ತಾರಾ ಅಕ್ಷರಾ.?

ವಿಕ್ರಮ್ ರವಿಚಂದ್ರನ್ ಬಿಟ್ಟು ಹೇಮಂತ್ ಜೊತೆ ಬರ್ತಾರಾ ಅಕ್ಷರಾ.?

Posted By:
Subscribe to Filmibeat Kannada

ಕಮಲ್ ಹಾಸನ್ ಪುತ್ರಿ ಅಕ್ಷರಾ ಹಾಸನ್ ಕನ್ನಡಕ್ಕೆ ಬರುತ್ತಾರೆ ಎನ್ನುವ ಸುದ್ದಿ ಮತ್ತೆ ಕೇಳಿ ಬಂದಿದೆ. ಇದೀಗ ನಿರ್ದೇಶಕ ಹೇಮಂತ್ ಹೆಗಡೆ ಅಕ್ಷರಾ ಅವರನ್ನು ಕರೆ ತರುವ ತಯಾರಿ ನಡೆಸಿದ್ದಾರೆ.

ರವಿಚಂದ್ರನ್ ಮಗನ ಸಿನಿಮಾ ನಿಂತುಹೋಯ್ತಂತೆ.! ಹೌದಾ.?

ನಿರ್ದೇಶಕ ಹೇಮಂತ್ ಹೆಗಡೆ ತಮ್ಮ ಹೊಸ ಚಿತ್ರಕ್ಕೆ 'ಹಂತ್ರ' ಎಂಬ ವಿಭಿನ್ನ ಟೈಟಲ್ ಇಟ್ಟಿದ್ದಾರೆ. ಸೈಕಲಾಜಿಕಲ್ ಥ್ರಿಲ್ಲರ್ ಕಥೆ ಹೊಂದಿರುವ ಈ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಒಂದು ಪಾತ್ರಕ್ಕೆ ಅಕ್ಷರಾ ಅವರನ್ನು ಸಂಪರ್ಕ ಮಾಡಿದ್ದಾರಂತೆ. ಈಗಾಗಲೇ ಚಿತ್ರದ ಕಥೆಗೆ ಪಾಸಿಟಿವ್ ಆಗಿ ಪ್ರತಿಕ್ರಿಯೆ ನೀಡಿರುವ ಅಕ್ಷರಾ ಸದ್ಯದಲ್ಲಿ ಚಿತ್ರದಲ್ಲಿ ನಟಿಸುತ್ತಾರಾ, ಇಲ್ವಾ ಎನ್ನುವುದು ಅಂತಿಮ ಆಗಲಿದೆಯಂತೆ.

Akshara Haasan to make her Sandalwood debut

ಈ ಹಿಂದೆ ವಿಕ್ರಮ್ ರವಿಚಂದ್ರನ್ ನಟನೆಯ 'ನವೆಂಬರ್ ನಲ್ಲಿ ನಾನು ಅವಳು' ಚಿತ್ರದಲ್ಲಿ ಅಕ್ಷರಾ ಹಾಸನ್ ನಟಿಸುತ್ತಾರೆ ಎನ್ನುವ ಸುದ್ದಿ ಇತ್ತು. ಆದರೆ ಆ ಚಿತ್ರವೇ ಈಗ ನಿಂತು ಹೋಗಿದೆ ಎನ್ನುವ ಮಾತಿದೆ. ಉಳಿದಂತೆ 'ಹಂತ್ರ' ಚಿತ್ರದ ಇನ್ನೊಬ್ಬ ನಾಯಕಿಯಾಗಿ ಹಿಂದಿ 'ಬಿಗ್ ಬಾಸ್' ಖ್ಯಾತಿಯ ಲೋಪಾಮುದ್ರಾ ರಾವತ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

English summary
Will Kamal Haasan's daughter Akshara Haasan make her Sandalwood debut.?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada