For Quick Alerts
  ALLOW NOTIFICATIONS  
  For Daily Alerts

  ಮುದ್ದು ಮಗಳಿಗೆ ಸುಂದರ ಹೆಸರಿಟ್ಟ 'ಬಿಗ್ ಬಾಸ್' ಖ್ಯಾತಿಯ ಅಕ್ಷತಾ ಪಾಂಡವಪುರ

  |

  ಬಿಗ್ ಬಾಸ್ ಕನ್ನಡ 6ನೇ ಆವೃತ್ತಿಯ ಸ್ಪರ್ಧಿ,ರಂಗಭೂಮಿ ಕಲಾವಿದೆ, ನಟಿ ಅಕ್ಷತಾ ಪಾಂಡವಪುರ ದಂಪತಿ ತಮ್ಮ ಮುದ್ದಾದ ಮಗಳ ನಾಮಕರಣವನ್ನು ಇತ್ತೀಚಿಗಷ್ಟೆ ಮಾಡಿದ್ದಾರೆ. ಸರಳವಾಗಿ ನಾಮಕರಣ ಶಾಸ್ತ್ರ ಮಾಡಿದ ಅಕ್ಷತಾ ಮತ್ತು ಪ್ರಸನ್ನ ದಂಪತಿ ಮಗಳಿಗೆ ಸುಂದರವಾದ ಹೆಸರಿಟ್ಟಿದ್ದಾರೆ.

  ಅಂದಹಾಗೆ ಅಕ್ಷತಾ ತನ್ನ ಮಗಳ ನಾಮಕರಣವನ್ನು ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಹುಟ್ಟಿದ ದಿನವೇ ಇಟ್ಟುಕೊಂಡಿದ್ದರು. ಸಂಚಾರಿ ವಿಜಯ್ ಸವಿ ನೆನಪಿನ ದಿನ ಮಗಳ ನಾಮಕರಣ ಶಾಸ್ತ್ರ ಮಾಡಿದ್ದಾರೆ. ಕೋವಿಡ್ 19 ಸೋಂಕಿತರ ಸಹಾಯಕ್ಕಾಗಿ ಕವಿರಾಜ್ ಮತ್ತು ಚಿತ್ರರಂಗದ ಕೆಲವು ಗಣ್ಯರು ಸೇರಿ ಸ್ಥಾಪಿಸಿರುವ 'ಉಸಿರು' ತಂಡದ ಸದಸ್ಯರು ನಾಮಕರಣದಲ್ಲಿ ಭಾಗಿಯಾಗಿದ್ದರು. ಮುಂದೆ ಓದಿ..

  ಅಕ್ಷತಾ ಮಗಳ ನಾಮಕರಣದಲ್ಲಿ 'ಉಸಿರು' ತಂಡ

  ಅಕ್ಷತಾ ಮಗಳ ನಾಮಕರಣದಲ್ಲಿ 'ಉಸಿರು' ತಂಡ

  ಉಸಿರು ತಂಡದ ಸಾರಥಿ ಸಾಹಿತಿ, ನಿರ್ದೇಶಕ ಕವಿರಾಜ್, ನಟಿ ವೀಣಾ ಸುಂದರ್ ದಂಪತಿ ಸೇರಿದಂತೆ ಕೆಲವರು ಭಾಗಿಯಾಗಿ ನಾಮಕರಣ ಸಂಭ್ರಮ ಹೆಚ್ಚಿಸಿದ್ದರು. ಅಂದಹಾಗೆ ಮಗಳಿಗೆ ಅಕ್ಷತಾ 'ಗಿಯ' ಎಂದು ನಾಮಕರಣ ಮಾಡಿದ್ದಾರೆ. ಸಾಹಿತಿ ಕವಿರಾಜ್ ಸ್ಲೇಟ್ ಮೇಲೆ ಹೆಸರು ಬರೆಯುವ ಮೂಲಕ ಗಿಯ ಹೆಸರನ್ನು ಘೋಷಣೆ ಮಾಡಿದರು.

  'ಗಿಯ' ಎಂದರೇನು?

  'ಗಿಯ' ಎಂದರೇನು?

  ಗಿಯ ಜಾನಪದ ಪದ. ಗಿಯಾ ಪದಕ್ಕೆ ಸಾಕಷ್ಟು ಅರ್ಥಗಳಿವೆ. ದೇವರ ಉಡುಗೊರೆ ಅಂತ ಇದ್ರೆ, ಗ್ರೀಕ್ ನಲ್ಲಿ, ಭೂಮಿತಾಯಿ, ಪ್ರಕೃತಿ ಮಾತೆ ಎನ್ನುತ್ತಾರಂತೆ. ಹೀಗಂತ ಸ್ವತಃ ಅಕ್ಷತಾ ಅವರೇ ಹೇಳಿದ್ದಾರೆ.

  ಸಂಭ್ರದ ಫೋಟೋ ಹಂಚಿಕೊಂಡ ಅಕ್ಷತಾ

  ಸಂಭ್ರದ ಫೋಟೋ ಹಂಚಿಕೊಂಡ ಅಕ್ಷತಾ

  ಮಗಳ ನಾಮಕರಣದ ಒಂದಿಷ್ಟು ಫೋಟೋಗಳನ್ನು ಅಕ್ಷತಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಫೋಟೋ ಜೊತೆಗೆ ಸಂಭ್ರಮದಲ್ಲಿ ಭಾಗಿಯಾಗಿದ್ದ ಗಣ್ಯರಿಗೆ ಧನ್ಯವಾದ ತಿಳಿಸಿದ್ದಾರೆ. ಇನ್ನು ಗಿಯ ಹೆಸರಿನ ಬಗ್ಗೆಯೂ ದೀರ್ಘವಾದ ವಿವರಣೆ ನೀಡಿ, ಮಕ್ಕಳಿಗೆ ಹೆಸರಿಡುವುದು ಎಷ್ಟು ಕಷ್ಟ ಎನ್ನುವುದನ್ನು ವಿವರಸಿದ್ದಾರೆ.

  ಮಕ್ಕಳಿಗೆ ಹೆಸರಿಡುವ ಬಗ್ಗೆ ಅಕ್ಷತಾ ಹೇಳಿದ್ದೇನು?

  ಮಕ್ಕಳಿಗೆ ಹೆಸರಿಡುವ ಬಗ್ಗೆ ಅಕ್ಷತಾ ಹೇಳಿದ್ದೇನು?

  "ಎಲ್ಲರ ಭವನೆಗಳಿಗೂ ಬೆಲೆ ಕೊಡ್ತಾ ಕೊನೆಯದಾಗಿ 'ಗಿಯ' ಅಂತ ಇಟ್ಟಾಯಿತು ಅಜ್ಜಿ 'ಗಿ' ಅಕ್ಷರ ಬಂದಿದೆ ಅದರಲ್ಲೇ ಇರ್ಲಿ ಅಂದ್ರು. ಪ್ರಸನ್ನ ಕಲೆ/ಸಂಗೀತಕ್ಕೆ ಸಂಬಂಧಪಟ್ಟಿದ್ದು ಇರ್ಲಿ ಅಂದ್ರು. ನಾನು ಪ್ರಕೃತಿಗೆ ಸಂಭಂದಿಸಿದ್ದು & ಕರೆಯಲು ಈಸಿ ಆಗ್ಲಿ ಅಂದ್ರೆ ಮುತ್ತಜ್ಜಿ ಶುಕ್ರವಾರ ಹುಟ್ಟಿದ್ದಾಳೆ ದೇವರ ಹೆಸರು ಇರ್ಲಿ ಅಂದ್ರು. ಒಟ್ನಲ್ಲಿ ಎಲ್ಲರ ಆಸೆಯಂತೆ ಹುಡುಕಾಡಿ, ತಡಕಾಡಿ ನಮ್ಮ ಜಾನಪದ ಸಾಲು 'ಗಿಯ' ಅಂತ ಇಟ್ವಿ" ಎಂದಿದ್ದಾರೆ.

  ಇಂದ್ರಜಿತ್ ಮೀಟರ್ ನ ಮೆಚ್ಚಲೇ ಬೇಕು
  'ಗಿಯ' ಹೆಸರಿನ ಬಗ್ಗೆ ಅಕ್ಷತಾ ವಿವರಣೆ

  'ಗಿಯ' ಹೆಸರಿನ ಬಗ್ಗೆ ಅಕ್ಷತಾ ವಿವರಣೆ

  "ಇನ್ನೂ 'Gia' ಅಂದ್ರೆ God's Gracious Gift, ಮತ್ತೆ ಇದು ಗ್ರೀಕ್ ನ Gaia ಅಂದರೆ ಬಹುತೇಕ ಭೂಮಿ ತಾಯಿ, ಅತಿ ಪುರಾತನ ಪ್ರಕೃತಿ ಮಾತೇ ಎನ್ನುವ ಪದಕ್ಕೆ ಹತ್ತಿರ ಇದೆ. ಚೆನ್ನಾಗಿದೆ. ಒಟ್ನಲ್ಲಿ 'ಗಿಯ' ನಾವಿಟ್ಟಿದ್ದೆ ಹೆಸರು 'Gia' ಕೊಟ್ಟಿದ್ದೆ ಅಕ್ಷರ" ಎಂದು ಬರೆದುಕೊಂಡಿದ್ದಾರೆ.

  English summary
  Actress and Bigg Boss fame Akshatha Pandavapura Named Her daughter Gia in the memory of Sanchari Vijay Birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X