twitter
    For Quick Alerts
    ALLOW NOTIFICATIONS  
    For Daily Alerts

    'ವೇರ್ ಈಸ್ ಪಿಂಕಿ' ನಟನೆಗಾಗಿ ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದ ಅಕ್ಷತಾ

    |

    ರಂಗಭೂಮಿ ಕಲಾವಿದೆ, ಬಿಗ್ ಬಾಸ್ ಖ್ಯಾತಿಯ ಅಕ್ಷತಾ ಪಾಂಡವಪುರ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 'ವೇರ್ ಈಸ್ ಪಿಂಕಿ' ಚಿತ್ರದ ನಟನೆಗಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.

    ನ್ಯೂಯಾರ್ಕ್‌ನ ಇಂಡಿಯನ್ ಫಿಲಂ ಫೆಸ್ಟಿವಲ್‌ನಲ್ಲಿ 'ವೇರ್ ಈಸ್ ಪಿಂಕಿ' (ಪಿಂಕಿ ಎಲ್ಲಿ) ಚಿತ್ರಕ್ಕೆ ಎರಡು ಪ್ರಶಸ್ತಿ ಸಿಕ್ಕಿದೆ. ಅತ್ಯುತ್ತಮ ಚಿತ್ರಕಥೆ ಮತ್ತು ಅತ್ಯುತ್ತಮ ನಟಿ ವಿಭಾಗದಲ್ಲಿ ವಿಶೇಷ ಗಮನ ಸೆಳೆದಿದೆ.

    ಹೆಣ್ಣು ಮಗುವಿಗೆ ಜನ್ಮ ನೀಡಿದ ಬಿಗ್ ಬಾಸ್ ಅಕ್ಷತಾ ಪಾಂಡವಪುರಹೆಣ್ಣು ಮಗುವಿಗೆ ಜನ್ಮ ನೀಡಿದ ಬಿಗ್ ಬಾಸ್ ಅಕ್ಷತಾ ಪಾಂಡವಪುರ

    ಈ ಕುರಿತು ಅಕ್ಷತಾ ಪಾಂಡವಪುರ ಸಂತಸ ವ್ಯಕ್ತಪಡಿಸಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಈ ಬಗ್ಗೆ ಬರೆದುಕೊಂಡಿರುವ ನಟಿ ''ಇದು ನನ್ನ ಮೊದಲ ಅಂತಾರಾಷ್ಟ್ರೀಯ ಪ್ರಶಸ್ತಿ ಆಗಿದ್ದು, ಇದರ ಸಂಪೂರ್ಣ ಕ್ರೆಡಿಟ್ ಅವಕಾಶ ಕೊಟ್ಟ ನಿರ್ದೇಶಕರಿಗೆ'' ಎಂದಿದ್ದಾರೆ.

    Akshatha Pandavapura Won Best Actress Award at New York Indian Film Festival

    'ನ್ಯೂಯಾರ್ಕ್ ಇಂಡಿಯನ್ ಫಿಲಂ ಫೆಸ್ಟಿವಲ್ 2021, ಇಂತಹ ಚಿತ್ರೋತ್ಸವಕ್ಕೆ ನಮ್ಮ ಕನ್ನಡ ಚಿತ್ರ ಆಯ್ಕೆ ಆಗೋದೇ ಒಂದು ಖುಷಿ, ಇನ್ನೂ ಅತ್ಯುತ್ತಮ ಚಿತ್ರ, ಅತ್ಯುತ್ತಮ ಚಿತ್ರಕಥೆ, ಅತ್ಯುತ್ತಮ ನಟಿ ಈ 3 ವರ್ಗದಲ್ಲಿ ನಾಮಿನೇಟ್ ಆಗಿದ್ದು ಡಬಲ್ ಖುಷಿ. ಈ ಪೈಕಿ ಅತ್ಯುತ್ತಮ ಚಿತ್ರಕಥೆ ಮತ್ತು ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದ್ದು ನಿಜಕ್ಕೂ ಹೆಮ್ಮೆಯ ವಿಚಾರ...' ಎಂದು ಅಕ್ಷತಾ ಖುಷಿ ಹಂಚಿಕೊಂಡರು.

    ಅಕ್ಷತಾ ಪಾಂಡವಪುರ ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದ ಬಗ್ಗೆ ಚಿತ್ರ ಸಾಹಿತಿ ಕವಿರಾಜ್ ಶುಭಕೋರಿದರು. 'ಆಪ್ತರು, ನಮ್ಮ ಉಸಿರು ಬಳಗದ ಸದಸ್ಯರು ಆದ 'ಅಕ್ಷತಾ ಪಾಂಡವಪುರ' ಅವರಿಗೆ ನ್ಯೂಯಾರ್ಕ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅಲ್ಲಿ 'ಪಿಂಕಿ ಎಲ್ಲಿ' ಸಿನಿಮಾದ ಅಭಿನಯಕ್ಕಾಗಿ 'ಅತ್ಯುತ್ತಮ ನಟಿ' ಪ್ರಶಸ್ತಿ ದೊರೆತಿರುವುದು ಖುಷಿ ಮತ್ತು ಹೆಮ್ಮೆಯ ವಿಷಯ. ಇಂತಹಾ ಇನ್ನಷ್ಟು ಸಾಧನೆಯ ಗರಿಗಳು ಅವರ ಮುಡಿಗೇರಲಿ , ಭವಿಷ್ಯ ಉಜ್ವಲವಾಗಲಿ ಎಂದು ಹೃತ್ಪೂರ್ವಕ ಹಾರೈಕೆ' ಎಂದು ಫೇಸ್‌ಬುಕ್‌ನಲ್ಲಿ ತಿಳಿಸಿದ್ದಾರೆ.

    ಅಂದ್ಹಾಗೆ, 'ವೇರ್ ಈಸ್ ಪಿಂಕಿ' ಚಿತ್ರವನ್ನು ಪೃಥ್ವಿ ಕೋಣನೂರು ನಿರ್ದೇಶಿಸಿದ್ದು ಅಕ್ಷತಾ ಪಾಂಡವಪುರ ಮತ್ತು ದೀಪಕ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಈ ಹಿಂದೆ ಪೃಥ್ವಿ ಕೋಣನೂರು ರೈಲ್ವೆ ಚಿಲ್ಡ್ರನ್ ಮತ್ತು ಅಲೆಗಳು ಎಂಬ ಸಿನಿಮಾ ಮಾಡಿದ್ದರು.

    Akshatha Pandavapura Won Best Actress Award at New York Indian Film Festival

    ಇದು ನೈಜ ಘಟನೆಯನ್ನು ಆಧರಿಸಿ ಮಾಡಿರುವ ಚಿತ್ರವಾಗಿದ್ದು, 8 ತಿಂಗಳ ಮಗುವೊಂದು ಕಳೆದು ಹೋದಾಗ ಆ ಮಗುವಿನ ಸುತ್ತ ಬರುವ ಪಾತ್ರಗಳ ತಲ್ಲಣವನ್ನು ಸಿನಿಮಾ ಮಾಡಲಾಗಿದೆ.

    Recommended Video

    ಚೆಸ್ ಆಡಿ 10 ಲಕ್ಷ ದೇಣಿಗೆ ಸಂಗ್ರಹ ಮಾಡಿದ Kiccha Sudeep | Filmibeat Kannada

    ಇದಕ್ಕೂ ಮುಂಚೆ 'ಪಿಂಕಿ ಎಲ್ಲಿ' ಸಿನಿಮಾ ಭಾರತದ ಕೋಲ್ಕತಾ, ಮುಂಬೈ (ಮಾಮಿ), ಕೇರಳ, ಜೈಪುರ್, ಪನೋರಮ ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್‌ಗೆ ಆಯ್ಕೆಯಾಗಿತ್ತು.

    English summary
    Kannada Actor Akshatha Pandavapura Won Best Actress Award at New York Indian Film Festival.
    Tuesday, June 15, 2021, 12:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X