For Quick Alerts
  ALLOW NOTIFICATIONS  
  For Daily Alerts

  ಬಂಡೀಪುರ ಅಭಯಾರಣ್ಯದಲ್ಲಿ ರಜನಿಕಾಂತ್ -ಅಕ್ಷಯ್: ಮ್ಯಾನ್ v/s ವೈಲ್ಡ್ ಚಿತ್ರೀಕರಣ

  |

  ಸೂಪರ ಸ್ಟಾರ್ ರಜಿನಿಕಾಂತ್ ಮತ್ತು ಅಕ್ಷಯ್ ಕುಮಾರ್ ಇಬ್ಬರು ಸದ್ಯ ಬಂಡೀಪುರ ಅಭಯಾರಣ್ಯದಲ್ಲಿ ವಾಸ್ತವ್ಯ ಹೂಡಿದ್ದಾರೆ. ಶೂಟಿಂಗ್ ಗಾಗಿ ಇಬ್ಬರು ಸ್ಟಾರ್ ಬಂಡೀಪುರಕ್ಕೆ ಆಗಮಿಸಿದ್ದಾರೆ. ಅಂದ್ಹಾಗೆ ಈ ಇಬ್ಬರು ಸ್ಟಾರ್ ಮ್ಯಾನ್ v/s ವೈಲ್ಡ್ ಸಿರೀಸ್ ಚಿತ್ರೀಕರಣಕ್ಕಾಗಿ ಬಂಡೀಪುರಕ್ಕೆ ಆಗಮಿಸಿದ್ದಾರೆ.

  ಈಗಾಗಲೆ ಸೂಪರ್ ಸ್ಟಾರ್ ರಜನಿಕಾಂತ್ ಬಂಡೀಪುರಕ್ಕೆ ಆಗಮಿಸಿದ್ದು ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಇನ್ನು ಅಕ್ಷಯ್ ಕುಮಾರ್ ಇಂದು ಮಧ್ಯಾಹ್ನ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಮ್ಯಾನ್ v/s ವೈಲ್ಡ್ ಸಿರೀಸ್ ನ ಹೋಸ್ಟ್ ಬೇರ್ ಗ್ರಿಲ್ ಜೊತೆ ಅಕ್ಷಯ್ ಮತ್ತು ರಜನಿಕಾಂತ್ ಇಬ್ಬರು ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.

  ರಜನಿಕಾಂತ್ 168ನೇ ಚಿತ್ರದ ಟೈಟಲ್ ಬಹಿರಂಗರಜನಿಕಾಂತ್ 168ನೇ ಚಿತ್ರದ ಟೈಟಲ್ ಬಹಿರಂಗ

  ಅಂದ್ಹಾಗೆ ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಕೂಡ ಮ್ಯಾನ್ v/s ವೈಲ್ಡ್ ಸಿರೀಸ್ ನಲ್ಲಿ ಭಾಗಿಯಾಗಿದ್ದರು. ಈಗ ಸೂಪರ್ ಸ್ಟಾರ್ ಮತ್ತು ಅಕ್ಷಯ್ ಸರದಿ. ಬಂಡೀಪುರದ ಚುಮ್ಮನಹಳ್ಳ, ಮೂಲ್ಲೆಹೊಳೆ, ಕಲ್ಕೆರೆ ಅರಣ್ಯದಲ್ಲಿ ಹಾಗೂ ಟೈಗರ್ ರಸ್ತೆಯಲ್ಲಿ ಚಿತ್ರೀಕರಣ ಮಾಡಲಾಗುತ್ತೆ.

  ಬಂಡೀಪುರದಲ್ಲಿ ಮ್ಯಾನ್ v/s ವೈಲ್ಡ್ ಚಿತ್ರೀಕರಣಕ್ಕಾಗಿ ಎರಡು ದಿನಗಳ ಕಾಲ ಅನುಮತಿ ಪಡೆಯಲಾಗಿದೆಯಂತೆ. ಬನಿಜಯ್ ಗ್ರೂಪ್ ನಿರ್ಮಾಣ ಸಂಸ್ಥೆ ಎರಡು ದಿನಗಳ ಕಾಲ ಚಿತ್ರೀಕರಣಕ್ಕೆ ಅನುಮತಿ ಪಡೆದಿದ್ದು, ಅರಣ್ಯದಲ್ಲಿ ಯಾವುದೆ ರೀತಿಯ ಅನಾವುತ, ವಾಯುಮಾಲಿನ್ಯ, ಶಬ್ದಮಾಲಿನ್ಯವಾಗದಂತೆ ಅರಣ್ಯ ಇಲಾಕೆ ನಿರ್ಬಂಧ ಹಾಕಿದೆಯಂತೆ. ಜೊತೆಗೆ ಅರಣ್ಯ ಅಧಿಕಾರಿಗಳ ಸಮ್ಮುಖದಲ್ಲಿಯೆ ಚಿತ್ರೀಕರಣ ಮಾಡಬೇಕೆಂದು ಸೂಚನೆ ನೀಡಿದೆಯಂತೆ.

  ಸೂಪರ್ ಸ್ಟಾರ್ ರಜನಿಕಾಂತ್ ನಿನ್ನೆ ಮಧ್ಯಾಹ್ನವೆ ಮೈಸೂರಿಗೆ ಆಗಮಿಸಿದ್ದಾರೆ. ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಅಭಯಾರಣ್ಯದಿಂದ ಅನೇಕ ಕಿಲೋಮೀಟರ್ ದೂರದಲ್ಲಿ ಅಂದರೆ ಗುಂಡ್ಲುಪೇಟೆ ಸಮೀಪ ಸೂಪರ್ ಸ್ಟಾರ್ ಆಗಮಿಸಿದ್ದ ಹೆಲಿಕಾಪ್ಟರ್ ಅನ್ನು ಇಳಿಸಿ ಅಲ್ಲಿಂದ ವಿಶೇಷ ವಾಹನದ ಮೂಲಕ ಅರಣ್ಯ ಪ್ರದೇಶಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸುತ್ತಮುತ್ತ ಹೆಚ್ಚಿನ ಭದ್ರತೆ ಕೂಡ ಆಯೋಜಿಸಲಾಗಿದೆ.

  English summary
  Bollywood Actor Akshay Kumar And Super star Rajinikanth in Bandipur for Man vs wild shooting.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X