'ಬೆಲ್ ಬಾಟಂ' ಚಿತ್ರದ ಹಿಂದಿ ರಿಮೇಕ್ ನಲ್ಲಿ ಅಕ್ಷಯ್ ಕುಮಾರ್!

ನಟ ಅಕ್ಷಯ್ ಕುಮಾರ್ 'ಮಿಷನ್ ಮಂಗಲ್' ನಂತರ 'ಹೌಸ್ ಫುಲ್ 4' ಚಿತ್ರದಲ್ಲಿ ನಟಿಸಿದರು. ಈ ಸಿನಿಮಾ ಅಕ್ಷಯ್ ಕುಮಾರ್ ಲೆವೆಲ್ ಗೆ ತಕ್ಕ ಹಾಗೆ ಇರಲಿಲ್ಲ. ಇದೀಗ ಈ ಸಿನಿಮಾದ ನಂತರ ಕನ್ನಡ ಸಿನಿಮಾದ ರಿಮೇಕ್ ನಲ್ಲಿ ಅಕ್ಷಯ್ ಕುಮಾರ್ ನಟಿಸುತ್ತಾರೆ ಎನ್ನುವ ಸುದ್ದಿ ಇದೆ.

ಜಯತೀರ್ಥ ನಿರ್ದೇಶನದ 'ಬೆಲ್ ಬಾಟಂ' ಸಿನಿಮಾ ಈ ವರ್ಷದ ದೊಡ್ಡ ಹಿಟ್ ಚಿತ್ರ. ಇಲ್ಲಿ ಗೆದ್ದ ಈ ಸಿನಿಮಾ ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ರಿಮೇಕ್ ಹಕ್ಕು ಮಾರಾಟ ಆಗಿತ್ತು. ಇದೀಗ ಹಿಂದಿ ಭಾಷೆಯ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಕಾಣಿಸಿಲಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ.

ರಿಷಬ್ ಶೆಟ್ಟಿ ಪಾತ್ರದಲ್ಲಿ ಅಕ್ಷಯ್ ಕುಮಾರ್ ಕಾಣಿಸಿಕೊಳ್ಳಲಿದ್ದು, ಸಿನಿಮಾದ ನಿರ್ಮಾಣದಲ್ಲಿ ಸಹ ಕೈ ಜೋಡಿಸಲಿದ್ದಾರಂತೆ. ಅಂದಹಾಗೆ, ಈ ವಿಷಯದ ಬಗ್ಗೆ ನಿರ್ದೇಶಕ ಜಯತೀರ್ಥ 'ಫಿಲ್ಮಿಬೀಟ್ ಕನ್ನಡ'ಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಅಕ್ಷಯ್ ಕುಮಾರ್ ನಾಯಕ?

ಅಕ್ಷಯ್ ಕುಮಾರ್ ನಾಯಕ?

ಹಿಂದಿ ಭಾಷೆಯಲ್ಲಿ 'ಬೆಲ್ ಬಾಟಂ' ಸಿನಿಮಾ ರಿಮೇಕ್ ಆಗುತ್ತಿದೆ ಎನ್ನುವ ಸುದ್ದಿ ಅನೇಕ ದಿನಗಳಿಂದ ಇದೆ. ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ನಾಯಕನಾಗಲಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ. ಬಾಲಿವುಡ್ ಸಿನಿಮಾ ವೆಬ್ ಸೈಟ್ ಗಳು ಈ ಬಗ್ಗೆ ಸುದ್ದಿ ಮಾಡಿವೆ. ರಂಜಿತ್ ತಿವಾರಿ ಸಿನಿಮಾದ ನಿರ್ದೇಶನ ಮಾಡಲಿದ್ದಾರಂತೆ.

ನಿಖಿಲ್ ಅಡ್ವಾಣಿಗೆ ಸಿನಿಮಾ ಇಷ್ಟ ಆಗಿದೆ

ನಿಖಿಲ್ ಅಡ್ವಾಣಿಗೆ ಸಿನಿಮಾ ಇಷ್ಟ ಆಗಿದೆ

ನಿಖಿಲ್ ಅಡ್ವಾಣಿ 'ಬೆಲ್ ಬಾಟಂ' ಸಿನಿಮಾ ನೋಡಿ ಖುಷಿಯಾಗಿದ್ದು, ರಿಮೇಕ್ ಮಾಡಲು ಮುಂದೆ ಬಂದಿದ್ದಾರೆ. ನಿಖಿಲ್ ಅಡ್ವಾಣಿ ಜೊತೆಗೆ ಅಕ್ಷಯ್ ಕುಮಾರ್ ಕೂಡ ನಿರ್ಮಾಣದಲ್ಲಿ ಸಾಥ್ ನೀಡುತ್ತಿದ್ದಾರೆ. ಕೆಲವು ಟೈಟಲ್ ಗಳು ಚಾಲ್ತಿಯಲ್ಲಿ ಇದ್ದೂ, ಯಾವುದು ಸೂಟ್ ಆಗದೆ ಇದ್ದರೆ, 'ಬೆಲ್ ಬಾಟಂ' ಹೆಸರೇ ಚಿತ್ರಕ್ಕೆ ನಿಗದಿ ಆಗಲಿದೆ.

ಫಿಲ್ಮಿಬೀಟ್ ಗೆ ಜಯತೀರ್ಥ ಪ್ರತಿಕ್ರಿಯೆ

ಫಿಲ್ಮಿಬೀಟ್ ಗೆ ಜಯತೀರ್ಥ ಪ್ರತಿಕ್ರಿಯೆ

ಈ ವಿಷಯದ ಬಗ್ಗೆ 'ಫಿಲ್ಮಿಬೀಟ್ ಕನ್ನಡ'ಕ್ಕೆ ನಿರ್ದೇಶಕ ಜಯತೀರ್ಥ ಪ್ರತಿಕ್ರಿಯೆ ಪ್ರತಿಕ್ರಿಯೆ ನೀಡಿದ್ದಾರೆ. ''ಸಿನಿಮಾದ ರಿಮೇಕ್ ಹಕ್ಕುಗಳು ಹಿಂದಿಗೆ ಮಾರಾಟ ಆಗಿದೆ. ಆದರೆ, ಅದರಲ್ಲಿ ಅಕ್ಷಯ್ ಕುಮಾರ್ ಅವರೇ ನಾಯಕನಾಗಿ ನಟಿಸುತ್ತಾರಾ ಎನ್ನುವ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ರಿಮೇಕ್ ಖರೀದಿ ಮಾಡಿದ ಸಂಸ್ಥೆ ಕಡೆಯಿಂದ ಯಾವುದೇ ಸುದ್ದಿ ಬಂದಿಲ್ಲ'' ಎಂದಿದ್ದಾರೆ.

'ಬೆಲ್ ಬಾಟಂ 2'ಗೆ ತಯಾರಿ

'ಬೆಲ್ ಬಾಟಂ 2'ಗೆ ತಯಾರಿ

ಒಂದು ಕಡೆ ಸಿನಿಮಾ ಹಿಂದಿ, ತಮಿಳು, ತೆಲುಗಿಗೆ ರಿಮೇಕ್ ಆಗುತ್ತಿದೆ. ಮತ್ತೊಂದು ಕಡೆ 'ಬೆಲ್ ಬಾಟಂ 2'ಗೆ ತಯಾರಿಗಳು ನಡೆಯುತ್ತಿದೆ. ಜಯತೀರ್ಥ ಅವರೇ ಈ ಸಿನಿಮಾದ ನಿರ್ದೇಶನ ಮಾಡಲಿದ್ದಾರೆ. ರಿಷಭ್ ಶೆಟ್ಟಿ ಹಾಗೂ ಹರಿಪ್ರಿಯಾ ನಟಿಸಲಿದ್ದಾರೆ. 'ಬೆಲ್ ಬಾಟಂ' ದಯಾನಂದ್ ಟಿ ಕೆ ಅವರ ಕಥೆಯಾಗಿದೆ.

More from Filmibeat

English summary
Actor Akshay Kumar in 'Bell Bottom' movie hindi remake.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X