»   » ಚಿರಸ್ಮರಣೀಯವಾಗಿ ಉಳಿಯಲಿರುವ ಅನಿಲ್-ಉದಯ್ ನೆನಪು

ಚಿರಸ್ಮರಣೀಯವಾಗಿ ಉಳಿಯಲಿರುವ ಅನಿಲ್-ಉದಯ್ ನೆನಪು

Posted By: Pavithra
Subscribe to Filmibeat Kannada

ಅನಿಲ್ ಮತ್ತು ಉದಯ್ ಚಿತ್ರರಂಗದಲ್ಲಿ ದುರಂತ ಅಂತ್ಯವನ್ನ ಕಂಡ ಅದ್ಭುತ ಕಲಾವಿದರು. ಇನ್ನೇನು ಪರಭಾಷೆಗಳಲ್ಲಿ ಖಳನಟರಾಗಿ ಮಿಂಚ್ತಾರೆ ಅನ್ನೋಷ್ಟರಲ್ಲಿ ಸಾವಿನ ಮನೆ ಬಾಗಿಲು ತಟ್ಟಿದರು. ಚಿತ್ರೀಕರಣದ ವೇಳೆ ನಡೆದ ದುರಂತದಲ್ಲಿ ಅಂತ್ಯ ಕಂಡ ಈ ಇಬ್ಬರು ಸ್ನೇಹಿತರು ಒಟ್ಟಿಗೆ ಪ್ರಾಣ ಬಿಟ್ಟಿದ್ರು.

ಇಷ್ಟು ದಿನಗಳ ನಂತ್ರ ಈಗ್ಯಾಕೆ ಅವ್ರ ನೆನಪು ಅಂದ್ರಾ... ಅವರನ್ನ ನೆನಪು ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ಇದೇ ತಿಂಗಳ 7ಕ್ಕೆ ಅನಿಲ್-ಉದಯ್, ತಮ್ಮ ಅಪಾರ ಅಭಿಮಾನಿಗಳನ್ನ ಬಿಟ್ಟು ಹೋಗಿ ಒಂದು ವರ್ಷ.

ಅನಿಲ್ ಹಾಗೂ ಉದಯ್ ಸವಿನೆನಪಿನಲ್ಲಿ ನಿರ್ಮಾಪಕ ಸುಂದರ್.ಪಿ.ಗೌಡ ಒಂದನೇ ವರ್ಷದ ಪುಣ್ಯ ಸ್ಮರಣೆಗಾಗಿ ಟ್ರಸ್ಟ್‌ ಪ್ರಾರಂಭ ಮಾಡ್ತಿದ್ದಾರೆ. ಮುಂದೆ ಓದಿರಿ....

ಅನಿಲ್-ಉದಯ್ ರ ಮೊದಲ ಪುಣ್ಯಸ್ಮರಣೆಯಲ್ಲಿ

ಅನಿಲ್ ಉದಯ್ ಎಲ್ಲರನ್ನು ಬಿಟ್ಟು ಹೋಗಿ ಒಂದು ವರ್ಷ ಕಳೆಯುತ್ತಿದೆ. ಅವರಿಬ್ಬರ ಹೆಸರು ಹಸಿರಾಗಿ ಉಳಿಯಲಿ ಅನ್ನೋ ನಿರ್ಧಾರ ಮಾಡಿ ಅನಿಲ್ ಉದಯ್ ಚಾರಿಟಬಲ್ ಟ್ರಸ್ಟ್ ಪ್ರಾರಂಭ ಆಗ್ತಿದೆ. ಟ್ರಸ್ಟ್ ಅಡಿಯಲ್ಲಿ ಬಡ ಮಕ್ಕಳಿಗೆ ಶಿಕ್ಷಣ ಹಾಗೂ ಬಡ ಜನರಿಗೆ ಉಚಿತವಾಗಿ ಚಿಕಿತ್ಸೆ ಕೊಡಿಸಲು ಸುಂದರ್ ನಿರ್ಧಾರ ಮಾಡಿದ್ದಾರೆ.

ಪುಣ್ಯ ಸ್ಮರಣೆಯಲ್ಲಿ ಅನಿಲ್-ಉದಯ್ ಕುಟುಂಬಸ್ಥರು

ಅನಿಲ್-ಉದಯ್-ಸುಂದರ್ ಸಾಕಷ್ಟು ವರ್ಷಗಳಿಂದ ಜೊತೆಗೆ ಬೆಳೆದು ಬಂದ ಸ್ನೇಹಿತರು. ಅದಷ್ಟೇ ಅಲ್ಲದೆ ಅನಿಲ್ ಉದಯ್ ರನ್ನ ಸಿನಿಮಾರಂಗಕ್ಕೆ ಕರೆತಂದಿದ್ದೇ ದುನಿಯಾ ವಿಜಿ. ಇದೇ ನಿಟ್ಟಿನಲ್ಲಿ ಸುಂದರ್ ಮತ್ತು ವಿಜಿ ಹಾಗೂ ಸ್ನೇಹಿತರೆಲ್ಲಾ ಯೋಚನೆ ಮಾಡಿ ಇಬ್ಬರ ನೆನಪು ಹಸಿರಾಗಿ ಉಳಿಯುವಂತೆ ಮಾಡಿದ್ದಾರೆ....

ಕದಿರೇನಹಳ್ಳಿಯಲ್ಲಿ ಅನಿಲ್-ಉದಯ್ ನೆನಪು ಶಾಶ್ವತ

ಟ್ರಸ್ಟ್ ಪ್ರಾರಂಭ ಮಾಡೋದರ ಜೊತೆಯಲ್ಲಿ ಅನಿಲ್ ಮತ್ತು ಉದಯ್ ಅವರ ಪುತ್ತಳಿ ಸ್ಥಾಪನೆ ಮಾಡಲು ಸುಂದರ್ ತಯಾರಿ ನಡೆಸಿದ್ದಾರೆ. ಕತ್ತರಿಗುಪ್ಪೆಯ ಬಳಿ ಇರುವ ಕದಿರೇನಹಳ್ಳಿ ಕ್ರಾಸ್ ನಲ್ಲಿ ಅನಿಲ್ ಮತ್ತು ಉದಯ್ ಜೊತೆಗಿರುವ ಪುತ್ತಳಿ ಮಾಡಿಸಲು ಚಿಂತಿಸಲಾಗಿದೆ. ಈ ಪುಣ್ಯಸ್ಮರಣೆಯಲ್ಲಿ ಎರಡು ಕುಟುಂಬಸ್ಥರು ಭಾಗಿಯಾಗಲಿದ್ದಾರೆ

ಸಮಾಧಿಗೆ ಹೊಸ ರೂಪ ಕೊಟ್ಟ ಸ್ನೇಹಿತರು

ಜೊತೆಗಿದ್ದ ಸ್ನೇಹಿತ ಕಣ್ಮರೆಯಾದ ನಂತ್ರ ಸುಂದರ್ ಅವ್ರಿಬ್ಬರ ಸಮಾಧಿಯನ್ನ ವಿಭಿನ್ನ ರೀತಿಯಲ್ಲಿ ಮಾಡಿಸಿದ್ದಾರೆ. ಈಗಾಗ್ಲೆ ಗೊತ್ತಿರುವಂತೆ ಅನಿಲ್ ಮತ್ತು ಉದಯ್ ಇಬ್ಬರೂ ಖಳನಟರಾಗಿದ್ದರು. ಅವರ ಫೋಟೋ ಗಳನ್ನ ಸಮಾಧಿಯ ಮೇಲೆ ಹಾಕಿಸಿ ಮುಂದಿನ ದಿನಗಳಲ್ಲಿ ಸಮಾಧಿಗೆ ಯಾವುದೇ ರೀತಿ ಹಾನಿಯಾಗದಂತೆ ತಡೆ ಹಿಡಿಯಲಾಗಿದೆ. ಅನೇಕ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುವಲ್ಲಿ ಬಡ ರೋಗಿಗಳ ಆರೋಗ್ಯದ ಚೇತರಿಕೆಯಲ್ಲಿ ಅನಿಲ್ ಉದಯ್ ನೆನಪು ಶಾಶ್ವತವಾಗಲಿ ಅನ್ನೋದು ಅವ್ರ ಸ್ನೇಹಿತರ ಆಶಯ.

English summary
'Mastigudi' Movie Producer Sundar.P.Gowda has made preparations for Anil and Uday death anniversary. ಅನಿಲ್ ಮತ್ತು ಉದಯ್ ಪುಣ್ಯಸ್ಮರಣೆಗೆ ಸುಂದರ್.ಪಿ.ಗೌಡ ತಯಾರಿ ನಡೆಸಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X