ಮೊದಲ ವಾರವೇ 'ಬಿಗ್ ಬಾಸ್' ಮನೆಯಿಂದ ಹೊರಬಂದ ರಕ್ಷಿತಾ ರೈ ಯಾರು.?
Recommended Video

'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮ ಶುರುವಾಗಿ ಅದಾಗಲೇ ಒಂದು ವಾರ ಕಳೆದಿದೆ. ಹದಿನೆಂಟು ಸ್ಪರ್ಧಿಗಳ ಪೈಕಿ ಒಂದು ವಿಕೆಟ್ ಉರುಳಿದೆ. 'ಕ್ರಿಕೆಟರ್' ಎಂದು ಹೇಳಿಕೊಂಡು 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟ ರಕ್ಷಿತಾ ರೈ ಮೊದಲನೇ ವಾರ ಔಟ್ ಆಗಿದ್ದಾರೆ.
'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಮೊದಲನೇ ವಾರ ಹನ್ನೊಂದು ಮಂದಿ ನಾಮಿನೇಟ್ ಆಗಿದ್ದರು. ಇತರೆ ಸ್ಪರ್ಧಿಗಳಿಗೆ ಹೋಲಿಸಿದರೆ ರಕ್ಷಿತಾ ರೈ ಅತಿ ಕಡಿಮೆ ಮತಗಳನ್ನು ಪಡೆದಿದ್ದರು. ಹೀಗಾಗಿ, ರಕ್ಷಿತಾ ರೈ ಎಲಿಮಿನೇಟ್ ಆಗಿದ್ದಾರೆ.
ಹಾಗ್ನೋಡಿದ್ರೆ, 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಮೊದಲ ವಾರ ರಕ್ಷಿತಾ ರೈ ಅಷ್ಟಾಗಿ ಕಾಣಿಸಿಕೊಳ್ಳಲಿಲ್ಲ. ವೀಕ್ಷಕರ ಗಮನ ಸೆಳೆಯದ ರಕ್ಷಿತಾ ರೈ 'ಬಿಗ್ ಬಾಸ್' ಮನೆಯಿಂದ ಹೊರಬಂದಿದ್ದಾರೆ.
ಅಷ್ಟಕ್ಕೂ, ಯಾರೀ ರಕ್ಷಿತಾ ರೈ.? ಅವರ ಹಿನ್ನಲೆ ಏನು.? ಸಂಪೂರ್ಣ ಮಾಹಿತಿ ಇಲ್ಲಿದೆ, ಓದಿರಿ...

ಮಂಗಳೂರು ಹುಡುಗಿ ರಕ್ಷಿತಾ
ರಕ್ಷಿತಾ ರೈ ಮೂಲತಃ ಮಂಗಳೂರಿನವರು. ಬಿಬಿಎಂ, ಎಂ.ಸಿ.ಎಂ.ಎಂ ಓದಿರುವ ರಕ್ಷಿತಾ ರೈ ಕ್ರಿಕೆಟರ್ ಕೂಡ ಹೌದು. ಮಹೇಂದ್ರ ಸಿಂಗ್ ಧೋನಿ ಅಂದ್ರೆ ರಕ್ಷಿತಾಗೆ ಪಂಚಪ್ರಾಣ. ಹೀಗಾಗಿ, ಅವರ ಟಾಟ್ಯೂವನ್ನ ರಕ್ಷಿತಾ ತಮ್ಮ ಕೈ ಮೇಲೆ ಹಾಕಿಸಿಕೊಂಡಿದ್ದಾರೆ.

ಆರ್.ಜೆ ಆಗಿದ್ದ ರಕ್ಷಿತಾ
ರಕ್ಷಿತಾ ರೈ ಕ್ರಿಕೆಟರ್ ಮಾತ್ರ ಅಲ್ಲ. ಆರ್.ಜೆ ಕೂಡ ಹೌದು. ಕಿರುತೆರೆಯಲ್ಲಿ ನಟಿಯಾಗಿ ನಿರೂಪಕಿ ಆಗಿಯೂ ರಕ್ಷಿತಾ ರೈ ಗುರುತಿಸಿಕೊಂಡಿದ್ದಾರೆ. ಬಹುಮುಖ ಪ್ರತಿಭೆ ರಕ್ಷಿತಾ ರೈ ತಮ್ಮ ಅದೃಷ್ಟ ಪರೀಕ್ಷೆಗಾಗಿ 'ಬಿಗ್ ಬಾಸ್' ಮನೆಗೆ ಕಾಲಿಟ್ಟಿದ್ದರು.

ಒಂಬತ್ತು ವರ್ಷಗಳಿಂದ ಅಪ್ಪ-ಅಮ್ಮನಿಂದ ದೂರ
ಹೆಣ್ಮಕ್ಕಳು ಜಾಸ್ತಿ ಓದಬಾರದು ಅಂತ ಮನೆಯಲ್ಲಿ ಹೇಳಿದ ಕಾರಣ, ಮನೆ ಬಿಟ್ಟು ಮನೆಯವರ ಜೊತೆಗೆ ರಕ್ಷಿತಾ ರೈ ಮಾತುಕತೆ ಬಿಟ್ಟು ಒಂಬತ್ತು ವರ್ಷಗಳು ಉರುಳಿವೆ. 9 ವರ್ಷಗಳಿಂದ ರಕ್ಷಿತಾ ಸ್ವತಂತ್ರವಾಗಿ ಜೀವನ ಸಾಗಿಸುತ್ತಿದ್ದಾರೆ.

ಒಂದೇ ವಾರಕ್ಕೆ ರಕ್ಷಿತಾ ಔಟ್
''ಹುಡುಗಿಯರನ್ನು ನಂಬಲ್ಲ. ನಾನು ಎಮೋಷನಲಿ ಕನೆಕ್ಟ್ ಆಗಲ್ಲ'' ಎಂದು ಹೇಳಿಕೊಂಡು ರಕ್ಷಿತಾ ರೈ 'ಬಿಗ್ ಬಾಸ್' ಮನೆಗೆ ಕಾಲಿಟ್ಟಿದ್ದರು. ಯಾವುದೇ ಸ್ಟಾಟೆಜಿ ಇಲ್ಲದೆ 'ಬಿಗ್ ಬಾಸ್' ಮನೆಗೆ ಬಂದಿದ್ದ ರಕ್ಷಿತಾ ರೈ ಒಂದೇ ವಾರಕ್ಕೆ ಔಟ್ ಆಗಿದ್ದಾರೆ. ಫಿನಾಲೆವರೆಗೂ ಇರಬೇಕು ಎಂದು ಆಸೆ ಪಟ್ಟಿದ್ದ ರಕ್ಷಿತಾ ರೈ ಕನಸು ಭಗ್ನಗೊಂಡಿದೆ.


Click it and Unblock the Notifications











