»   » ಅಬ್ಬಾ.. ಒಂದು ವರ್ಷಕ್ಕೆ ಶಿವಣ್ಣ ಮಾಡುವ ಸಿನಿಮಾಗಳ ಸಂಖ್ಯೆ ಎಷ್ಟಿದೆ ನೋಡಿ!

ಅಬ್ಬಾ.. ಒಂದು ವರ್ಷಕ್ಕೆ ಶಿವಣ್ಣ ಮಾಡುವ ಸಿನಿಮಾಗಳ ಸಂಖ್ಯೆ ಎಷ್ಟಿದೆ ನೋಡಿ!

Posted By:
Subscribe to Filmibeat Kannada

ಶಿವರಾಜ್ ಕುಮಾರ್ ಎನ್ನುವ ಹೆಸರಿನಲ್ಲೇ ಒಂದು ಎನರ್ಜಿ ಇದೆ. ಯಾವಾಗಲೂ ಸಿನಿಮಾ..ಸಿನಿಮಾ..ಎಂದು ಕನವರಿಸುವ ಶಿವಣ್ಣ ಸತತ ಮೂರು ದಶಕಗಳಿಂದ ಸಿನಿಮಾರಂಗದಲ್ಲಿ ಇದ್ದಾರೆ. ಹ್ಯಾಟ್ರಿಕ್ ಹೀರೋ ಆಗಿದ್ದ ಶಿವರಾಜ್ ಕುಮಾರ್ ಈಗ ಸೆಂಚುರಿ ಸ್ಟಾರ್ ಆಗಿದ್ದಾರೆ.

ಶಿವಣ್ಣ ಯಾವಾಗ ನೋಡಿದರೂ ಒಂದಲ್ಲ ಒಂದು ಸಿನಿಮಾದಲ್ಲಿ ಬಿಜಿ ಇರುತ್ತಾರೆ. ಜೊತೆಗೆ ಶಿವಣ್ಣ ಮುಂದಿನ ಸಿನಿಮಾಗಳ ಲಿಸ್ಟ್ ಯಾವಾಗಲೂ ತುಂಬ ದೊಡ್ಡದಾಗಿ ಇರುತ್ತೆ. ಹೀಗಿರುವಾಗ ವರ್ಷಕ್ಕೆ ಶಿವಣ್ಣ ಎಷ್ಟು ಸಿನಿಮಾ ಮಾಡುತ್ತಾರೆ ಎಂಬ ಕುತೂಹಲ ಎಲ್ಲರಲ್ಲಿಯೂ ಇರುತ್ತದೆ. ಆ ಕುತೂಹಲಕ್ಕೆ ಉತ್ತರ ಇಲ್ಲಿದೆ ಓದಿ...

ವರ್ಷಕ್ಕೆ 3 ರಿಂದ 4 ಚಿತ್ರಗಳು

ನಟ ಶಿವರಾಜ್ ಕುಮಾರ್ ವರ್ಷಕ್ಕೆ ಏನಿಲ್ಲ ಅಂದ್ರೂ 3 ರಿಂದ 4 ಸಿನಿಮಾಗಳನ್ನು ಮಾಡಿಯೇ ಮಾಡುತ್ತಾರೆ. ಸಾಕಷ್ಟು ವರ್ಷಗಳ ಹಿಂದಿನಿಂದಲೂ ಶಿವಣ್ಣ ಈ ರೀತಿ ರೂಢಿಸಿಕೊಂಡು ಬಂದಿದ್ದಾರೆ.

ವರ್ಷಕ್ಕೆ 7 ಸಿನಿಮಾ ಮಾಡಿದ್ರು

1996 ರಲ್ಲಿ ಶಿವಣ್ಣ ಸಿಕ್ಕಾಪಟ್ಟೆ ಬ್ಯುಸಿ ಇದ್ದು, ಬರೋಬ್ಬರಿ ಏಳು ಸಿನಿಮಾ ಮಾಡಿದ್ದರು.

ನಾಲ್ಕು ಬಾರಿ

ಶಿವರಾಜ್ ಕುಮಾರ್ ತಮ್ಮ ಕೆರಿಯರ್ ನಲ್ಲಿಯೇ ನಾಲ್ಕು ಬಾರಿ ವರ್ಷಕ್ಕೆ ಏಳು ಚಿತ್ರಗಳಲ್ಲಿ ನಟಿಸಿದ್ದಾರೆ. 1996, 1997, 2000, 2001 ರಲ್ಲಿ ಬಿಡುವಿಲ್ಲದೆ 12 ತಿಂಗಳಿಗೆ 7 ಚಿತ್ರಗಳನ್ನು ಶಿವಣ್ಣ ಮಾಡಿದ್ದರು.

118 ಸಿನಿಮಾ

ಸದ್ಯ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ 118 ಸಿನಿಮಾಗಳಲ್ಲಿ ನಟಿಸಿದ್ದು, ಇವತ್ತಿಗೂ ಅವರ ಡಿಮ್ಯಾಂಡ್ ಕಡಿಮೆ ಆಗಿಲ್ಲ.

ಮುಂದಿನ ಸಿನಿಮಾಗಳು

ಶಿವಣ್ಣ ಮುಂದಿನ ಸಿನಿಮಾಗಳ ಲಿಸ್ಟ್ ನಲ್ಲಿ ರಣರಂಗ, ಶಿವಲಿಂಗ 2, ಬಾದ್ ‍ಷಾ, ಖದರ್, ಈಸೂರು ದಂಗೆ ಸೇರಿದಂತೆ ಅನೇಕ ಚಿತ್ರಗಳಿವೆ.

ಮತ್ತೆ ಇತಿಹಾಸ

ಶಿವರಾಜ್ ಕುಮಾರ್ ಈವರೆಗೆ ನಾಲ್ಕು ಬಾರಿ ವರ್ಷಕ್ಕೆ ಏಳು ಚಿತ್ರ ಮಾಡಿದ್ದಾರೆ. ಆದರೆ ವಿಶೇಷ ಅಂದರೆ ಈ ವರ್ಷ ಕೂಡ ಈಗಾಗಲೇ ಶಿವಣ್ಣ 4 ಚಿತ್ರದಲ್ಲಿ ನಟಿಸಿದ್ದು, 3 ಚಿತ್ರಗಳ ಶೂಟಿಂಗ್ ನಡೆಯುತ್ತಿದೆ. ಆ ಚಿತ್ರಗಳು ಇದೇ ವರ್ಷ ರಿಲೀಸ್ ಆದರೆ ಈ ವರ್ಷ ಕೂಡ ಶಿವಣ್ಣನ ಏಳು ಚಿತ್ರಗಳು ರಿಲೀಸ್ ಆಗಲಿದೆ.

English summary
In How many movies Does Shiva Rajkumar Act in a year.? Read the article to know the answer

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada