ಬಾಲ್ಯದ ಕನಸನ್ನು ಬೆನ್ನತ್ತಿ ನಿರ್ದೇಶಕನಾದ ಮೋಹನ್
ದಿನ ಪತ್ರಿಕೆಗಳಲ್ಲಿ ಬರುವ ಸಿನಿಮಾ ಕಾಲಂ ಎಲ್ಲರ ಆಕರ್ಷಣೆ ಆಗಿರುತ್ತದೆ. ಅನೇಕರಿಗೆ ಪೇಪರ್ ನೋಡಿದ ತಕ್ಷಣ ಅವರ ಕಣ್ಣು ಸಿನಿಮಾ ವಿಭಾಗದ ಕಡೆಗೆ ಹೋಗುತ್ತದೆ. ಈ ರೀತಿ ಚಿಕ್ಕವಯಸ್ಸಿನಲ್ಲಿ ಸಿನಿಮಾ ಸುದ್ದಿಯನ್ನು ಬಿಡದೇ ಓದುತ್ತಿದ್ದ ಹುಡುಗ ಈಗ ತನ್ನ ಸುದ್ದಿಯನ್ನೇ ಅದೇ ಪತ್ರಿಕೆಗಳಲ್ಲಿ ಓದುತ್ತಿದ್ದಾನೆ.
ಹೌದು, ಜೀವನದಲ್ಲಿ ಏನಾದರೂ ಮಾಡಬೇಕು ಎಂಬ ಆಸೆ ಎಲ್ಲರಿಗೆ ಇರುತ್ತದೆ. ಆದರೆ, ಅಂತಹ ಕನಸನ್ನು ಬಿಡದೆ ಕೆಲವರು ಮಾತ್ರ ಬೆನ್ನತ್ತುತ್ತಾರೆ. ಆ ಸಾಲಿಗೆ ನಿರ್ದೇಶಕ ಮೋಹನ್ ಕಾಮಾಕ್ಷಿ ಕೂಡ ಸೇರಿಕೊಂಡಿದ್ದಾರೆ.
ನಿರ್ದೇಶಕನಾಗ ಬೇಕು ಎಂಬ ಆಸೆ ಹೊಂದಿದ್ದ ಇವರು ದಶಕಗಳ ಕಾಲ ಅದಕ್ಕಾಗಿ ಕಷ್ಟ ಪಟ್ಟಿದ್ದಾರೆ. ಎರಡು ವಾರಗಳ ಹಿಂದೆ ಬಿಡಗಡೆಯಾದ 'ಆದಿ ಪುರಾಣ' ಸಿನಿಮಾ ಮೂಲಕ ನಿರ್ದೇಶಕನಾಗಿದ್ದಾರೆ. ಮುಂದೆ ಓದಿ...

ನಾಗತಿಹಳ್ಳಿ ಚಂದ್ರಶೇಖರ್ ರಿಂದ ಪ್ರಭಾವ
ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ಮೋಹನ್ ಕಾಮಾಕ್ಷಿ ಅವರ ಮೇಲೆ ಪ್ರಭಾವ ಬೀರಿದ ಮೊದಲ ವ್ಯಕ್ತಿಯಾಗಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ್ ಅವರು ಮೋಹನ್ ಓದುತ್ತಿದ್ದ ಕಾಲೇಜಿನ ಶಿಕ್ಷಕರಾಗಿದ್ದರು. ಅವರ ಸಿನಿಮಾ ಪ್ರೀತಿ ಮೋಹನ್ ಅವರ ಸಿನಿಮಾ ಸೆಳೆತಕ್ಕೆ ಕಾರಣವಾಯ್ತು. ಇನ್ನೊಂದು ಕಡೆ ಚಿತ್ರರಂಗಕ್ಕೆ ಬರಲು ಕಷ್ಟ ಇದ್ದರೂ ಅವರ ಛಲ ಮಾತ್ರ ಕುಗ್ಗಲಿಲ್ಲ.

'ಮುಸ್ಸಂಜೆ ಮಾತು' ಚಿತ್ರದಿಂದ
ಮೋಹನ್ ಅವರ ಸಿನಿ ಕೆರಿಯರ್ ಶುರುವಾಗಿದ್ದು, ಸುದೀಪ್ ಅವರ 'ಮುಸ್ಸಂಜೆ ಮಾತು' ಸಿನಿಮಾದಿಂದ. ಈ ಚಿತ್ರದಲ್ಲಿ ಸಹ ಸಂಕಲನಕಾರನಾಗಿ ಕೆಲಸ ಮಾಡಿದ್ದ ಇವರು ಬಳಿಕ 'ಇನಿಯ' ಚಿತ್ರದಲ್ಲಿ ಪೂರ್ಣ ಪ್ರಮಾಣದ ಜವಾಬ್ದಾರಿ ವಹಿಸಿಕೊಂಡರು. ಗಿರೀಶ್ ಕಾಸರವಳ್ಳಿ, ಅಪೂರ್ವ ಕಾಸರವಳ್ಳಿ, ಗುರುಪ್ರಸಾದ್ ಅವರ ಸಿನಿಮಾಗಳಿಗೆ ಎಡಿಟಿಂಗ್ ಮಾಡಿ ಸಿನಿಮಾ ಭಾಷೆಯನ್ನು ಕಲಿತುಕೊಂಡರು.

'ಆದಿ ಪುರಾಣ' ಕಥೆ ಸಿದ್ಧವಾಯ್ತು
ಒಳ್ಳೆಯ ಎಡಿಟರ್ ಆಗಿದ್ದ ಮೋಹನ್ ಅವರಿಗೆ ಸಹ ನಿರ್ದೇಶಕ ಅಥವಾ ಸಹಾಯಕ ನಿರ್ದೇಶಕನಾಗುವ ಅಗತ್ಯ ಬರಲಿಲ್ಲ. 'ಆದಿ ಪುರಾಣ' ಕಥೆ ಬರೆಯುತ್ತಿದ್ದ ವೇಳೆ ನಟ ಶಶಾಂಕ್ ಪರಿಚಯ ಆಯ್ತು. ಪಾತ್ರಕ್ಕೆ ಅವರೇ ಸೂಕ್ತ ಎನಿಸಿ ಆಯ್ಕೆ ಮಾಡಿದರು. ಹೊಸ ನಟರ ಜೊತೆಗೆ ಕೆಲಸ ಮಾಡುವಾಗ ಪ್ರಯೋಗಕ್ಕೆ ಅವಕಾಶ ಇರುತ್ತದೆ ಎನ್ನುವುದು ಮೋಹನ್ ಅವರ ಅಭಿಪ್ರಾಯವಾಗಿದೆ.

ಹೊಸ ಸಿನಿಮಾ ಪ್ಲಾನಿಂಗ್
'ಆದಿ ಪುರಾಣ' ಸಿನಿಮಾದ ನಂತರ ಮೋಹನ್ ಕಾಮಾಕ್ಷಿ ಅವರು ಹೊಸ ಸಿನಿಮಾದ ತಯಾರಿಯಲ್ಲಿ ಇದ್ದಾರೆ. ಒಬ್ಬ ನಿರ್ಮಾಪಕರು 'ಆದಿ ಪುರಾಣ'ದ ರೀತಿಯ ಮತ್ತೊಂದು ಕಾಮಿಡಿ ಸಿನಿಮಾ ಮಾಡಿ ಎಂದು ಆಫರ್ ನೀಡಿದ್ದರಂತೆ. ಒಂದೇ ರೀತಿಯ ಜಾನರ್ ನಲ್ಲಿ ಗುರುತಿಸಿಕೊಳ್ಳಲು ಇಷ್ಟವಿಲ್ಲದ ಮೋಹನ್ ಬೇರೆ ರೀತಿಯ ಸಿನಿಮಾ ಮಾಡಲು ಹೊರಟಿದ್ದಾರಂತೆ.


Click it and Unblock the Notifications











