For Quick Alerts
  ALLOW NOTIFICATIONS  
  For Daily Alerts

  ಹರೆಯದ ತುಡಿತದ ನವಿರಾದ ಪ್ರೀತಿಯ ಸಿನಿಮಾ '18 ಟು 25'

  |

  'ತೂಫಾನ್' ಮತ್ತು 'ಬಳ್ಳಾರಿ ದರ್ಬಾರು' ಚಿತ್ರಗಳನ್ನು ನಿರ್ದೇಶಿಸಿದ್ದ ಶ್ರೀನು ಇದೀಗ ಕನ್ನಡ ಮತ್ತು ತೆಲುಗಿನಲ್ಲಿ "18 ಟು 25" ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಎರಡು ಭಾಷೆಯಲ್ಲಿ ತಯಾರಾಗಿರುವ ಈ ಚಿತ್ರ ಈಗ ರಿಲೀಸ್ ಗೆ ರೆಡಿ ಆಗಿದೆ.

  18 ರಿಂದ 25 ವರ್ಷದ ಹರೆಯದ ಹುಡುಗ ಹುಡುಗಿಯರ ಹೃದಯದ ಮಿಡಿತವನ್ನು ಚಿತ್ರದ ಮೂಲಕ ಹೇಳಲು ಹೊರಟಿದ್ದಾರೆ ನಿರ್ದೇಶಕ ಸ್ಮೈಲ್ ಶ್ರೀನು. ಬಳ್ಳಾರಿ, ಜಿಂದಾಲ್ ಸೇರಿದಂತೆ ಹಲವೆಡೆ 35 ದಿನಗಳ ಕಾಲ ಚಿತ್ರದ ಚಿತ್ರೀಕರಣ ಮಾಡಲಾಗಿದೆ.

  ಅತ್ಯಾಚಾರಿಗಳಿಗೆ ಎಚ್ಚರಿಕೆ ನೀಡುವ 'ಅಸುರ ಸಂಹಾರ'

  ಚರಣ್ ಅರ್ಜುನ್ ಐದು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದು, ಸ್ಮಾರ್ಟ್ ಫೋನ್ ಮತ್ತು ಸ್ಮಾರ್ಟ್ ಲವ್ ಸ್ಟೋರಿ ಚಿತ್ರದಲ್ಲಿದೆ. ಮೂರು ಜಾನರ್ ನಲ್ಲಿ ಸಿನಿಮಾದ ಕಥೆ ಹೇಳಲಾಗಿದೆ. ಚಿತ್ರದಲ್ಲಿ ನವಿರಾದ ಪ್ರೀತಿ ಇದೆ. ಕಾಮಿಡಿಯೊಂದಿಗಿನ ಪ್ರೀತಿ ಮತ್ತು ಸಾಧಾರಣ ಪ್ರೀತಿಯೂ ಸಿನಿಮಾದಲ್ಲಿದೆ.

  ಇದೇ ವಾರ ಬಿಡುಗಡೆ ಆಗಲಿದೆ 'ಕೆಮಿಸ್ಟ್ರಿ ಆಫ್ ಕರಿಯಪ್ಪ' ಸಿನಿಮಾ

  ಚಿತ್ರ ಬರೀ 18 ಟು 25 ವಯಸ್ಸಿನವರಿಗಷ್ಟೇ ಅಲ್ಲ. ಎಲ್ಲಾ ವಯಸ್ಸಿನವರಿಗೂ ಚಿತ್ರ ಇಷ್ಟವಾಗಲಿದೆ. ಸಿನಿಮಾದಲ್ಲಿ ಅಭಿರಾಮ್, ರಿಷಿ ತೇಜ್, ಅಖಿಲ ಪ್ರಕಾಶ್, ವಿದ್ಯಾಶ್ರೀ ಕಾಣಿಸಿಕೊಂಡಿದ್ದಾರೆ. ನಾಲ್ವರು ವೈದ್ಯಕೀಯ ವಿದ್ಯಾರ್ಥಿಗಳ ಸುತ್ತಾ ಸಾಗುವ ಕಥೆಯನ್ನು ಚಿತ್ರದ ಮೂಲಕ ಹೇಳಲಾಗಿದೆ. ನಾಲ್ವರು ಹುಡುಗರು ರಜೆಯ ಮೇಲೆ ಟ್ರಿಪ್ ಗೆ ಹೋದಾಗ ಅಲ್ಲಿ ನಡೆಯುವ ಘಟನೆಯನ್ನಾಧರಿಸಿ ಚಿತ್ರ ಮಾಡಲಾಗಿದೆ.

  English summary
  Here is the complete details about Kannada Movie 18 to 25 directed by Sreenu.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X