For Quick Alerts
  ALLOW NOTIFICATIONS  
  For Daily Alerts

  ಅತ್ಯಾಚಾರಿಗಳಿಗೆ ಎಚ್ಚರಿಕೆ ನೀಡುವ 'ಅಸುರ ಸಂಹಾರ'

  |

  ಅತ್ಯಾಚಾರದ ನೈಜ ಘಟನೆಯನ್ನಾಧರಿಸಿ ತಯಾರು ಮಾಡಿರುವ ಚಿತ್ರ 'ಅಸುರ ಸಂಹಾರ'. ಇತ್ತೀಚಿಗೆ ಬೆಂಗಳೂರಿನ ವಿಬ್ ಗಯಾರ್ ಶಾಲೆಯಲ್ಲಿ ನಡೆದ ಅತ್ಯಾಚಾರ ಘಟನೆಯೇ ಈ ಚಿತ್ರದ ಕಥಾವಸ್ತು.

  ಕಳೆದ ಹತ್ತು ವರ್ಷಗಳಿಂದ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ಪ್ರದೀಪ್ ಅರಸ್ ಆಕ್ಷನ್ ಕಟ್ ಹೇಳಿರುವ ಚಿತ್ರ ಇದು. ಸ್ನೇಹಿತ ಹರ್ಷ್ ಅರಸು (ಹರಿ ಪ್ರಸಾದ್) ಚಿತ್ರಕ್ಕೆ ಬಂಡವಾಳ ಹಾಕಿ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  ನಾಯಕ ಕಮ್ ನಿರ್ಮಾಪಕ ಹರ್ಷ್ ಗೆ ಸಿನಿಮಾ ಮಾಡಬೇಕೆನ್ನುವ ಕನಸು. ಚಿತ್ರದಲ್ಲಿ ಅಣ್ಣ, ತಂಗಿಯನ್ನು ಹೇಗೆ ಕಾಪಾಡುತ್ತಾನೆ ಎನ್ನುವುದೇ ತಿರುಳು. ಲೋಕಿ ಸಂಗೀತದಲ್ಲಿ ಎರಡು ಹಾಡುಗಳು ಮೂಡಿ ಬಂದಿವೆ. ಅದರಲ್ಲಿ ಒಂದು ಹಾಡನ್ನು ಮೆಹಬೂಬ್ ಹಾಡಿದ್ದಾರೆ.

  ಚಿತ್ರವನ್ನು ಅರಸೀಕೆರೆ, ಬೀರೂರು, ಶ್ರವಣ ಬೆಳಗೊಳ, ಮಂಗಳೂರು ಸೇರಿದಂತೆ ವಿವಿದೆಡೆ ನಲವತ್ತು ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಈ ಚಿತ್ರದಲ್ಲಿ ಬಹಳ ದಿನಗಳ ನಂತರ ಹಿರಿಯ ನಟ ಧರ್ಮ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು,

  ಪ್ರವೀಣ್ ಶೆಟ್ಟಿ ಛಾಯಾಗ್ರಹಣ ಚಿತ್ರಕ್ಕಿದೆ. ಪಾಲಿಕೆಯ ಸದಸ್ಯ ಶಿವಕುಮಾರ್ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿ ಚಿತ್ರಕ್ಕೆ ಮತ್ತು ತಂಡಕ್ಕೆ ಶುಭ ಹಾರೈಸಿದರು. ನಾಯಕಿಯಾಗಿ ಹರ್ಷಲ ಹನಿ ಕಾಣಿಸಿಕೊಂಡಿದ್ದಾರೆ.

  English summary
  Here is the complete details about Kannada Movie Asura Samhara directed by Pradeep Urs.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X