'ಕೆಜಿಎಫ್' ಚಿತ್ರದಲ್ಲಿ ಯಶ್ ತಾಯಿ ಪಾತ್ರ ಮಾಡಿದ್ದು ಈಕೆಯೇ

'ಕೆಜಿಎಫ್' ಸಿನಿಮಾ ಬಿಡುಗಡೆಗೆ ಇನ್ನು 24 ಗಂಟೆಗಿಂತ ಕಡಿಮೆ ಅವಧಿ ಇದೆ. ಎಲ್ಲರಿಗೂ ಸಿನಿಮಾದ ಬಗ್ಗೆ ದೊಡ್ಡ ಮಟ್ಟದ ಕುತೂಹಲ, ಖುಷಿ ಇದೆ. ಬಿಡುಗಡೆಗೆ ಒಂದೇ ದಿನ ಬಾಕಿ ಇರುವ ಈ ವೇಳೆ 'ಕೆಜಿಎಫ್'ನ ಒಂದು ಪ್ರಮುಖ ಅಂಶ ತಿಳಿದಿದೆ.

ಎಲ್ಲರಿಗೂ ತಿಳಿದಿರುವ ಹಾಗೆ, ಸಿನಿಮಾದಲ್ಲಿ ಬಹುತೇಕ ಹೊಸ ಕಲಾವಿದರೇ ಕಾಣಿಸಿಕೊಂಡಿದ್ದಾರೆ. ಯಶ್, ಅಚ್ಚುತ್ ಕುಮಾರ್, ಅಯ್ಯಪ್ಪ ಬಿಟ್ಟರೆ ಇಲ್ಲಿ ಅನೇಕರು ಹೊಸಬರೇ ಇದ್ದಾರೆ. ಈ ಪಾತ್ರಗಳಲ್ಲಿ ತಾಯಿಯ ಪಾತ್ರದ ನಟಿ ಕೂಡ ಒಬ್ಬರಾಗಿದ್ದಾರೆ.

'ಕೆಜಿಎಫ್' ಒಂದು ಮಾಸ್ ಸಿನಿಮಾ ಆಗಿದ್ದರು ಇಲ್ಲಿ ತಾಯಿಯ ಸೆಂಟಿಮೆಂಟ್ ಹೆಚ್ಚಿದೆ. ಟ್ರೇಲರ್ ಹಾಗೂ ಹಾಡಿನಲ್ಲಿಯೂ ಅದು ಬಿಂಬಿತವಾಗಿದೆ. ಮತ್ತೊಂದು ಕಡೆ ಈ ಸಿನಿಮಾದಲ್ಲಿ ಯಶ್ ತಾಯಿಯ ಪಾತ್ರ ಮಾಡಿದವರು ಯಾರು ಎನ್ನುವ ಕುತೂಹಲ ಅನೇಕರಿಗೆ ಇದೆ. ಆ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.

ಅಂದಹಾಗೆ, 'ಕೆಜಿಎಫ್' ಸಿನಿಮಾದ ತಾಯಿಯ ಪಾತ್ರದಲ್ಲಿ ನಟಿಸಿರುವ ನಟಿಯ ವಿವರ ಮುಂದಿದೆ ಓದಿ...

ನಟಿ ಅರ್ಚನಾ ಜೋಯಿಸ್

ನಟಿ ಅರ್ಚನಾ ಜೋಯಿಸ್

'ಕೆಜಿಎಫ್' ಸಿನಿಮಾದಲ್ಲಿ ಯಶ್ ತಾಯಿಯ ಪಾತ್ರ ಮಾಡಿರುವ ನಟಿಯ ಹೆಸರು ಅರ್ಚನಾ ಜೋಯಿಸ್. ಭರತ ನಾಟ್ಯದಲ್ಲಿ ಸಾಧನೆ ಮಾಡಬೇಕು ಎಂಬ ಗುರಿ ಇಟ್ಟುಕೊಂಡಿರುವ ಅರ್ಚನಾ ಅವರಿಗೆ ನೃತ್ಯ ಎಂದರೆ ಬಲು ಇಷ್ಟವಂತೆ. ಡ್ಯಾನ್ಸ್ ಗಾಗಿ ಕೆಲ ಧಾರಾವಾಹಿ ಅವಕಾಶವನ್ನು ಕೂಡ ಅರ್ಧದಲ್ಲಿಯೇ ಬಿಟ್ಟಿದ್ದಾರೆ.

ಧಾರಾವಾಹಿಗಳಲ್ಲಿ ನಟನೆ

ಧಾರಾವಾಹಿಗಳಲ್ಲಿ ನಟನೆ

ಅರ್ಚನಾ ಈ ಹಿಂದೆ ಜೀ ಕನ್ನಡ ವಾಹಿನಿಯ 'ಮಹಾದೇವಿ' ಧಾರಾವಾಹಿ ತ್ರಿಪುರ ಸುಂದರಿ ಪಾತ್ರ ಮಾಡುತ್ತಿದ್ದರು. ಈ ಪಾತ್ರ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ಬಳಿಕ ಸುವರ್ಣ ವಾಹಿನಿಯಲ್ಲಿ 'ದುರ್ಗಾ ಧಾರಾವಾಹಿ ಹಾಗೂ 'ನೀಲಿ' ಧಾರಾವಾಹಿಯಲ್ಲಿ ಪ್ರಮುಖ ಪಾತ್ರವನ್ನ ನಿರ್ವಹಿಸಿದ್ದರು.

11ನೇ ವಯಸ್ಸಿನಿಂದ ನೃತ್ಯ

11ನೇ ವಯಸ್ಸಿನಿಂದ ನೃತ್ಯ

ತಮ್ಮ 11ನೇ ವಯಸ್ಸಿನಿಂದ ನೃತ್ಯದಲ್ಲಿ ಆಸಕ್ತಿ ಇದ್ದ ಇವರು `ಮಾಯಾರಾವ್ ನಾಟ್ಯ ಇನ್ಸ್ಟಿಟ್ಯೂಟ್ ಆಫ್ ಕಥಕ್ ಆಂಡ್ ಕೋರಿಯೋಗ್ರಾಫಿ' ಯಿಂದ ನೃತ್ಯದಲ್ಲಿ ಪದವಿ ಪಡೆದರು. ಇವರ ನೃತ್ಯ ಗುರು ಅನುರಾಧಾ ವಿಕ್ರಾಂತ್. ಕಥಕ್ ಮಾತ್ರವಲ್ಲದೇ ಭರತನಾಟ್ಯ, ಇಂಡಿಯನ್ ಮಾರ್ಷಲ್ ಆರ್ಟ್ಸ್ ಮತ್ತು ಇಂಡಿಯನ್ ಕಾಂಟೆಪರರಿಯನ್ನು ಕಲಿತಿದ್ದಾರೆ.

ಲವ್ ಮ್ಯಾರೇಜ್

ಲವ್ ಮ್ಯಾರೇಜ್

ಗೃಹಿಣಿಯಾಗಿರುವ ಅರ್ಚನಾ ಜೋಯಿಸ್ ಅವರದ್ದು ಲವ್ ಮ್ಯಾರೇಜ್. ಶ್ರೇಯಸ್ ಉಡುಪ ಅವರ ಪತಿ. ಸಂಬಂಧಿಗಳ ಮದುವೆಗೆ ಹೋದ ಸಮಯದಲ್ಲಿ ಮೊದಲ ಬಾರಿಗೆ ಅರ್ಚನಾರನ್ನು ನೋಡಿದ ಶ್ರೇಯಸ್ ಪ್ರೀತಿಯಲ್ಲಿ ಬಿದ್ದಿದ್ದಾರೆ. ಒಂದು ವರ್ಷದ ನಂತರ ಈ ಜೋಡಿ ವಿವಾಹ ಆಗಿದ್ದಾರೆ.

ಅಮೀರ್ ಖಾನ್, ಯಶ್ ಅಂದರೆ ಇಷ್ಟ

ಅಮೀರ್ ಖಾನ್, ಯಶ್ ಅಂದರೆ ಇಷ್ಟ

ಅರ್ಚನಾ ಅವರಿಗೆ ಅಮೀರ್ ಖಾನ್, ಯಶ್ ಹಾಗೂ ಪ್ರಭಾಸ್ ಅಂದರೆ ಬಹಳ ಇಷ್ಟವಂತೆ. ವಿಶೇಷ ಅಂದರೆ, ತಮ್ಮ ಮೆಚ್ಚಿನ ನಟರಾದ ಯಶ್ ಜೊತೆಗೆ ಈಗ ಅರ್ಚನಾ ನಟಿಸುತ್ತಿದ್ದಾರೆ. ಅವರ ''ಗರ್ಭದಿ ನನ್ನುಸಿರು..'' ಹಾಡು ಹಿಟ್ ಆಗಿದೆ.

More from Filmibeat

English summary
All about 'KGF' movie actress Archana Jois. Kannada actor Yash 'KGF' movie is releasing tomorrow December 21st.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X