'ಮಾಯಾ ಕನ್ನಡಿ'ಯಲ್ಲಿ ಕಂಡಿದೆ ಚೆಂದದ ಅನ್ವಿತಾ ಬಿಂಬ
'ಮಾಯಾ ಕನ್ನಡಿ' ಸಿನಿಮಾ ಈಗಾಗಲೇ ಟೀಸರ್ ಮೂಲಕ ಗಮನ ಸೆಳೆದಿದೆ. ಈ ಸಿನಿಮಾದಲ್ಲಿ ನಾಯಕನಾಗಿ ಪ್ರಭು ಕಾಣಿಸಿಕೊಂಡರೆ, ನಾಯಕಿಯಾಗಿ ಅನ್ವಿತಾ ನಟಿಸಿದ್ದಾರೆ.
ಅನ್ವಿತಾಗೆ ಇದು ಕನ್ನಡದಲ್ಲಿ ಎರಡನೇ ಸಿನಿಮಾವಾಗಿದೆ. ಈ ಹಿಂದೆ ತುಳುವಿನಲ್ಲಿ ಅನೇಕ ಸಿನಿಮಾ ಮಾಡಿದ್ದಾರೆ. ಅಲ್ಲದೆ 'ಗಟ್ಟಿಮೇಳ' ಧಾರಾವಾಹಿಯ ಮೂಲಕ ಕಿರುತೆರೆ ವೀಕ್ಷಕರ ಗಮನ ಸೆಳೆದಿದ್ದಾರೆ.
ಅನ್ವಿತಾ ಇಲ್ಲಿ ಕಾಲೇಜ್ ಕೌನ್ಸಲರ್ ಪಾತ್ರ ಮಾಡುತ್ತಿದ್ದಾರೆ. ಅವರ ಪಾತ್ರದ ಹೆಸರು ಮಧು ಆಗಿದ್ದು, ಎರಡು ರೀತಿಯಲ್ಲಿ ಈ ಪಾತ್ರ ಇರಲಿದೆ. ಕೆಲಸ ಅಂತ ಬಂದರೆ ತುಂಬ ಗಂಭೀರವಾಗಿ, ಲವ್ ಸ್ಟೋರಿಯಲ್ಲಿ ಬಬ್ಲಿ, ಫನ್ ಆಗಿ ಈ ಪಾತ್ರ ಇರಲಿದೆ.

ಈ ಸಿನಿಮಾದ ಅವರ ಅನುಭವ ತುಂಬ ಚೆನ್ನಾಗಿ ಇತಂತೆ. ನಟನೆಯ ಜೊತೆಗೆ ಕಾಸ್ಟೂಮ್ ಡಿಸೈನ್ ಕೂಡ ಅನ್ವಿತಾ ಅವರೇ ಮಾಡಿದ್ದಾರೆ. ಹೀಗಾಗಿ ಎಲ್ಲ ಪಾತ್ರಗಳು ಹತ್ತಿರ ನನಗೆ ತುಂಬ ಹತ್ತಿರ ಆಗಿವೆ ಅಂತ್ತಾರೆ ಅನ್ವಿತಾ.
ಚಿತ್ರರಂಗಕ್ಕೆ ಬಂದು ಆರು ವರ್ಷ ಕಳೆದಿದ್ದು, ಸಿನಿಮಾ ನನ್ನ ಮೊದಲ ಆಯ್ಕೆ ಎಂದು ಅನ್ವಿತಾ ಹೇಳಿದ್ದಾರೆ. 'ಮಾಯಾ ಕನ್ನಡಿ' ಸಿನಿಮಾದಲ್ಲಿ ಒಂದು ಸಂದೇಶ ಇದೆ. ಸರಿ ತಪ್ಪುಗಳ ನಡುವೆ ನಡೆಯುವ ಕಥೆ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಇದಾಗಿದೆ.

'ಮಾಯಾ ಕನ್ನಡಿ' ಸಿನಿಮಾವನ್ನು ವಿನೋದ್ ಪೂಜಾರಿ ನಿರ್ದೇಶನ ಮಾಡಿದ್ದಾರೆ. ಸ್ವಪ್ನ ಪಾಟೀಲ್ ನಿರ್ಮಿಸಿದ್ದಾರೆ.


Click it and Unblock the Notifications











