ಯಾರೀಕೆ...? 'ಪೈಲ್ವಾನ್'ಗೆ ಕಣ್ಣು ಹೊಡೆದ ಕಣ್ಮಣಿ

Recommended Video

Pailwaan Movie: ಪೈಲ್ವಾನ್ ನಲ್ಲಿ ಹೀರೊಯಿನ್ ಆಗಿರುವ ಆಕಾಂಕ್ಷ ಸಿಂಗ್ ಬಗ್ಗೆ ನಿಮಗೆಷ್ಟು ಗೊತ್ತು

'ಕಣ್ಣು ಮಣಿಯೇ.. ಕಣ್ಣು ಹೊಡೆಯೇ..' ಎಂಬ 'ಪೈಲ್ವಾನ್' ಸಿನಿಮಾದ ಹಾಡು ನಿನ್ನೆ ಬಿಡುಗಡೆಯಾಗಿದೆ. ಈ ಹಾಡಿನ ಮೂಲಕ ನಟಿ ಆಕಾಂಕ್ಷ ಸಿಂಗ್ ಕನ್ನಡಿಗರ ಮುಂದೆ ಬಂದಿದ್ದಾರೆ.

ಹಾಡಿನ ಸಾಹಿತ್ಯ, ಸಂಗೀತ, ಗಾಯನ ಎಲ್ಲವೂ ಚೆನ್ನಾಗಿದೆ. ಅದರ ಜೊತೆಗೆ ಸುದೀಪ್ ಹಾಗೂ ಆಕಾಂಕ್ಷ ಜೋಡಿ ತುಂಬ ಮುದ್ದಾಗಿ ಕಾಣುತ್ತಿದೆ. ಮೊದಲ ಸಿನಿಮಾದ ಮೊದಲ ಹಾಡಿನ ಮೂಲಕವೇ ಆಕಾಂಕ್ಷ ನಿರೀಕ್ಷೆ ಹುಟ್ಟು ಹಾಕಿದ್ದಾರೆ.

ಹಾಡಿನಲ್ಲಿ ಆಕಾಂಕ್ಷ ಎಕ್ಸ್ ಪ್ರೆಶನ್ ಕಿಲ್ಲಿಂಗ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಬರುತ್ತಿರುವ ಕಾಮೆಂಟ್ಸ್ ಗಳನ್ನು ನೋಡುತ್ತಿದ್ದರೆ, ಸ್ಯಾಂಡಲ್ ವುಡ್ ನ ಹೊಸ ಕ್ರಶ್ ಆಗುವ ಸೂಚನೆ ನೀಡಿದ್ದಾರೆ.

ಅಂದಹಾಗೆ, 'ಪೈಲ್ವಾನ್' ಸಿನಿಮಾದ ನಾಯಕಿ ಆಕಾಂಕ್ಷ ಸಿಂಗ್ ಬಗ್ಗೆ ಕೆಲವು ವಿವರ ಇಲ್ಲಿದೆ.

ಆಕಾಂಕ್ಷ ಸಿಂಗ್ from ರಾಜಸ್ತಾನ

ಆಕಾಂಕ್ಷ ಸಿಂಗ್ from ರಾಜಸ್ತಾನ

ಆಕಾಂಕ್ಷ ಸಿಂಗ್ ಮೂಲತಃ ರಾಜಸ್ತಾನದ ಹುಡುಗಿ. ಈ ಹಿಂದೆ ಹಿಂದಿ ಕಿರುತೆರೆಯಲ್ಲಿ ಹೆಚ್ಚು ಗುರುತಿಸಿಕೊಂಡಿದ್ದರು. 'ನಾ ಬೋಲೇ ತುಮ್ ನ ಮೈನೇ ಕುಚ್ ಕಹಾ'' ಟಿವಿ ಸರಣಿಯ ಎರಡು ಭಾಗದಲ್ಲಿ ನಟಿಸಿದ್ದಾರೆ. ಅದಲ್ಲದೇ, ಬಾಲಿವುಡ್ ನ 'ಬದ್ರಿನಾಥ್ ಕಿ ದುಲ್ಹಾನಿಯಾ' ಚಿತ್ರದಲ್ಲೂ ಅಭಿನಯಿಸಿದ್ದಾರೆ.

ತೆಲುಗು ಸಿನಿಮಾದಲ್ಲಿ ನಟನೆ

ತೆಲುಗು ಸಿನಿಮಾದಲ್ಲಿ ನಟನೆ

ಹಿಂದಿ ಸಿನಿಮಾ ಹಾಗೂ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದ ಆಕಾಂಕ್ಷ ಸಿಂಗ್ ತೆಲುಗಿನ 'ಮಳ್ಳಿ ರಾವ' ಚಿತ್ರದಲ್ಲಿ ನಾಯಕಿಯಾಗಿದ್ದರು. ನಾಗಾರ್ಜುನ ಮತ್ತು ನಾನಿ ಅಭಿನಯಿಸುತ್ತಿರುವ ಮಲ್ಟಿಸ್ಟಾರ್ ಚಿತ್ರದಲ್ಲೂ ಆಕಾಂಕ್ಷ ನಟಿಸುತ್ತಿದ್ದಾರೆ. ವಿಶೇಷ ಅಂದ್ರೆ, ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಕೂಡ ಅಭಿನಯಿಸುತ್ತಿದ್ದಾರೆ.

ಕನ್ನಡದಲ್ಲಿ ಮೊದಲ ಸಿನಿಮಾ

ಕನ್ನಡದಲ್ಲಿ ಮೊದಲ ಸಿನಿಮಾ

ಸದ್ಯ, ಹಿಂದಿ ಮತ್ತು ತೆಲುಗು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಆಕಾಂಕ್ಷ ಸಿಂಗ್ ಗೆ 'ಪೈಲ್ವಾನ್' ಕನ್ನಡದಲ್ಲಿ ಮೊದಲ ಸಿನಿಮಾ. ಮೊದಲ ಚಿತ್ರದಲ್ಲಿಯೇ ನಟ ಸುದೀಪ್ ಜೊತೆಗೆ ತೆರೆ ಹಂಚಿಕೊಳ್ಳುವ ಅವಕಾಶ ಅವರಿಗೆ ಸಿಕ್ಕಿದೆ. ಈ ಸಿನಿಮಾ ಐದೂ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದ್ದು, ಆಕಾಂಕ್ಷಗೆ ಇನ್ನಷ್ಟು ಜನಪ್ರಿಯತೆ ಸಿಕ್ಕಿದೆ.

ಆಗಸ್ಟ್ ನಲ್ಲಿ 'ಪೈಲ್ವಾನ್' ಬಿಡುಗಡೆ

ಆಗಸ್ಟ್ ನಲ್ಲಿ 'ಪೈಲ್ವಾನ್' ಬಿಡುಗಡೆ

'ಪೈಲ್ವಾನ್' ಸಿನಿಮಾವನ್ನು ಆಗಸ್ಟ್ 29 ರಂದು ಬಿಡುಗಡೆ ಮಾಡಲು ತಯಾರಿ ನಡೆಯುತ್ತಿದೆ. ಆಗಸ್ಟ್ 30 ರಂದು ಪ್ರಭಾಸ್ ನಟನೆಯ 'ಸಾಹೋ' ಸಿನಿಮಾ ತೆರೆಗೆ ಬರುತ್ತದೆ. ಹೀಗಾಗಿ ದೊಡ್ಡ ಸ್ಪರ್ಧೆ ಶುರುವಾಗಿದೆ. 'ಪೈಲ್ವಾನ್' ಚಿತ್ರವನ್ನು ಕೃಷ್ಣ ನಿರ್ದೇಶನ ಹಾಗೂ ನಿರ್ಮಾಣ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಿನಿಮಾಗೆ ಇದೆ.

More from Filmibeat

English summary
All about pailwan Kannada movie heroine Aakanksha Singh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X