'ರಾಬರ್ಟ್' ಸಿನಿಮಾದ ಪುಟ್ಟ ರಾಮನ ಬಗ್ಗೆ ಎಕ್ಸ್ ಕ್ಲೂಸಿವ್ ಸುದ್ದಿ
'ರಾಬರ್ಟ್' ಸಿನಿಮಾದ ಎರಡನೇ ಮೋಷನ್ ಪೋಸ್ಟರ್ ನೋಡಿದ್ರಾ.. ಇಷ್ಟ ಆಯ್ತಾ..?. ಪೋಸ್ಟರ್ ನಲ್ಲಿ ಆಂಜನೇಯ ಭುಜದ ಮೇಲೆ ಕುಳಿತ್ತಿದ್ದ ರಾಮ ಯಾರು ಎನ್ನುವ ಪ್ರಶ್ನೆ ನಿಮಗೆ ಬಂತ.?
ಇಂದು ಸಂಕ್ರಾಂತಿ ಹಬ್ಬದ ವಿಶೇಷವಾಗಿ 'ರಾಬರ್ಟ್' ಸಿನಿಮಾದ ಎರಡನೇ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ದರ್ಶನ್ ಇಲ್ಲಿ ಹನುಮಂತನ ಅವತಾರದಲ್ಲಿ ದರ್ಶನ ನೀಡಿದ್ದಾರೆ. ಪುಟ್ಟ ರಾಮನನ್ನು ಹೊತ್ತುಕೊಂಡಿದ್ದಾರೆ.
ಇದೇ ಮೊದಲ ಬಾರಿಗೆ ಚಿತ್ರತಂಡ ಬಾಲನಟನನ್ನು ಪರಿಚಯ ಮಾಡಿದೆ. ಈ ಬಾಲನಟ ಕುರಿತ ವಿವರ ಎಕ್ಸ್ ಕ್ಲೂಸಿವ್ ಸಂಗತಿ 'ಫಿಲ್ಮಿಬೀಟ್ ಕನ್ನಡ' ಕಲೆ ಹಾಕಿದೆ.

ಜೇಸನ್ ಎಂಬ ಬಾಂಬೆ ಹುಡುಗ
'ರಾಬರ್ಟ್' ಸಿನಿಮಾದ ಬಾಲ ಕಲಾವಿದನ ಹೆಸರು ಜೇಸನ್. ಜೇಸನ್ ಬಾಂಬೆ ಹುಡುಗ. ಈಗಾಗಲೇ ಅನೇಕ ಹಿಂದಿ ಸಿನಿಮಾ ಹಾಗೂ ಜಾಹಿರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. 10 ವರ್ಷದ ಈ ಹುಡುಗನಿಗೆ ನಟನೆಯಲ್ಲಿ ಒಳ್ಳೆಯ ಅನುಭವ ಇದೆ. ಜೇಸನ್ ತಂದೆ ಉದ್ಯಮಿಯಾಗಿದ್ದಾರೆ.

ಶಾರೂಖ್, ಅಕ್ಷಯ್ ಕುಮಾರ್ ಜೊತೆ ನಟನೆ
ಜೇಸನ್ ಈ ವಯಸ್ಸಿಯಲ್ಲಿಯೇ ಬಾಲಿವುಡ್ ಸೂಪರ್ ಸ್ಟಾರ್ ಗಳ ಜೊತೆಗೆ ಕೆಲಸ ಮಾಡಿದ್ದಾನೆ. ಶಾರೂಖ್ ಖಾನ್, ಅಕ್ಷಯ್ ಕುಮಾರ್ ರೊಂದಿಗೆ ನಟಿಸಿದ್ದಾನೆ. ಹೀಗಾಗಿ ಬಾಲಿವುಡ್ ನಲ್ಲಿ ಜೇಸನ್ ತುಂಬ ಜನಪ್ರಿಯತೆ ಹೊಂದಿರುವ ಹುಡುಗ. ಸಿನಿಮಾ ಹಾಗೂ ಜಾಹಿರಾತು ಎರಡು ಕ್ಷೇತ್ರದಲ್ಲಿ ಜೇಸನ್ ತಮ್ಮ ಪ್ರತಿಭೆ ತೋರಿಸಿದ್ದಾರೆ.

ಕನ್ನಡಕ್ಕೆ ಬಂದ ಬಾಂಬೆ ಬಾಯ್
'ರಾಬರ್ಟ್' ಸಿನಿಮಾದಲ್ಲಿ ಬಾಲನಟನ ಪಾತ್ರ ತುಂಬ ಪ್ರಮುಖವಾಗಿರುತ್ತದೆಯಂತೆ. ಹೀಗಾಗಿ ಈ ಪಾತ್ರಕ್ಕಾಗಿ ಚಿತ್ರತಂಡ ಒಬ್ಬ ಪ್ರತಿಭಾವಂತ ಬಾಲನಟನ ಹುಡುಕಾಟದಲ್ಲಿ ಇತ್ತು. ಆಡಿಷನ್ ಮಾಡಿತ್ತು. ಕೊನೆಗೆ ಈ ಪಾತ್ರಕ್ಕೆ ಜೇಸನ್ ಆಯ್ಕೆ ಆಗಿದ್ದಾರೆ. ಈಗಾಗಲೇ ಅವರ ಭಾಗದ ಚಿತ್ರೀಕರಣವೂ ನಡೆದಿದೆ.

ಮೂರು ಶೇಡ್ ಗಳಲ್ಲಿ ದರ್ಶನ್
'ರಾಬರ್ಟ್' ಸಿನಿಮಾದಲ್ಲಿ ದರ್ಶನ್ ತ್ರಿಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ರಾಬರ್ಟ್, ಸಂಜಯ್ ಮತ್ತು ಅಕ್ಬರ್ ಈ ಮೂರು ಪಾತ್ರಗಳಲ್ಲಿ ಡಿ ಬಾಸ್ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ಬಾರಿಗೆ ಒಂದೇ ಸಿನಿಮಾದಲ್ಲಿ ಮೂರು ಬೇರೆ ಬೇರೆ ರೀತಿಯಲ್ಲಿ ದರ್ಶನ್ ನಟಿಸುತ್ತಿದ್ದಾರೆ. ತರುಣ್ ಸುಧೀರ್ ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದು, ಉಮಾಪತಿ ನಿರ್ಮಾಣವಿದೆ.

ಬೇಸಿಗೆಗೆ ಬರ್ತಾನೆ 'ರಾಬರ್ಟ್'
'ರಾಬರ್ಟ್' ಸಿನಿಮಾ ಯಾವಾಗ ಬಿಡುಗಡೆ ಆಗುತ್ತದೆ ಎನ್ನುವ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಸಿನಿಮಾ ಬೇಸಿಗೆಗೆ ರಿಲೀಸ್ ಆಗಲಿದೆ ಎಂದು ಮೋಷನ್ ಪೋಸ್ಟರ್ ನಲ್ಲಿ ತಿಳಿಸಲಾಗಿದೆ. ಸಿನಿಮಾದ ಹಾಡಿನ ಚಿತ್ರೀಕರಣ ಬಾಕಿ ಇದೆ. ಪೋಸ್ಟ್ ಪ್ರೊಡಕ್ಷನ್ಸ್ ಕೆಲಸ ನಡೆಯುತ್ತಿದೆ. ಆಶಾ ಭಟ್ ಸಿನಿಮಾದ ನಾಯಕಿಯಾಗಿದ್ದಾರೆ.


Click it and Unblock the Notifications











