twitter
    For Quick Alerts
    ALLOW NOTIFICATIONS  
    For Daily Alerts

    ದರ್ಶನ್ ಕಲಾಕೃತಿ ಬಿಡಿಸಿದ ಕಲಾವಿದ ಇವರೇ, ಈತನ ಸಾಧನೆ ತುಂಬಾ ವಿಶೇಷ.!

    |

    Recommended Video

    ದರ್ಶನ್ ಕಲಾಕೃತಿ ಬಿಡಿಸಿದ ಕಲಾವಿದ ಇವರೇ, ಈತನ ಸಾಧನೆ ತುಂಬಾ ವಿಶೇಷ.! | FILMIBEAT KANNADA

    'ಗಾಂಚಲಿ' ಚಿತ್ರದ ನಟ ಆದರ್ಶ್ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಅತಿ ಪುಟ್ಟ ಕಲಾಕೃತಿಯೊಂದನ್ನ ಉಡುಗೊರೆಯಾಗಿ ನೀಡಿ ದೊಡ್ಡ ಸುದ್ದಿಯಾಗಿದ್ದರು. ಆದರ್ಶ್ ಗಿಫ್ಟ್ ಕೊಟ್ಟು ಡಿ ಬಾಸ್ ಭಕ್ತರ ಮೆಚ್ಚುಗೆಗೆ ಪಾತ್ರವಾಗಿತ್ತು. ಆದ್ರೆ, ಆ ಅದ್ಭುತವಾದ ಕಲಾಕೃತಿಯನ್ನ ನಿರ್ಮಿಸಿದ ಕಲಾವಿದ ಬೇರೆ.

    ಸಚಿನ್ ಸಂಘೆ ಎಂಬ ಟೆಕ್ಕಿ ಡಿ-ಬಾಸ್ ಅವರ ಈ ಸುಂದರವಾದ ಚಿಕ್ಕ ಪ್ರತಿಮೆಯನ್ನ ಸೃಷ್ಟಿಸಿದ್ದರು. ಈ ಸಚಿನ್ ಕೇವಲ ದರ್ಶನ್ ಅವರದ್ದು ಮಾತ್ರವಲ್ಲ, ಪ್ರಧಾನಿ ನರೇಂದ್ರ ಮೋದಿ, ಸಚಿನ್ ತೆಂಡೂಲ್ಕರ್ ಅಂತಹ ದಿಗ್ಗಜರ ಕಲಾಕೃತಿಯನ್ನ ಕೂಡ ರಚಿಸಿದ್ದಾರೆ.

    ದಾಸ ದರ್ಶನ್ ಗೆ ತುಂಬಾ ವಿಶೇಷವಾದ ಉಡುಗೊರೆ ನೀಡಿದ ಅಭಿಮಾನಿ ದಾಸ ದರ್ಶನ್ ಗೆ ತುಂಬಾ ವಿಶೇಷವಾದ ಉಡುಗೊರೆ ನೀಡಿದ ಅಭಿಮಾನಿ

    ಈಗ ದರ್ಶನ್ ಅವರ ಕಲಾಕೃತಿ ಹೇಗೆ ನಿರ್ಮಿಸಿದರು ಎಂಬುದನ್ನ ಸಣ್ಣದೊಂದು ವಿಡಿಯೋ ಮೂಲಕ ಬಹಿರಂಗಪಡಿಸಿದ್ದಾರೆ. ಅಷ್ಟಕ್ಕೂ, ದರ್ಶನ್ ಅವರ ಆಕೃತಿ ಬಿಡಿಸಲು ಎಷ್ಟು ಗಂಟೆ ಸಮಯ ತೆಗೆದುಕೊಂಡರು, ಈ ಚಿಕ್ಕ ಆಕೃತಿ ಬಿಡಿಸಲು ಯಾವ ಸಾಧನ ಬಳಸಲಾಗಿದೆ, ಈ ಸಚಿನ್ ಸಂಘೆ ಯಾರು ಎಂಬುದನ್ನ ತಿಳಿಯಲು ಮುಂದೆ ಓದಿ.....

    15 ಗಂಟೆಯಲ್ಲಿ ದರ್ಶನ್ ಆಕೃತಿ

    15 ಗಂಟೆಯಲ್ಲಿ ದರ್ಶನ್ ಆಕೃತಿ

    ಕನ್ನಡ ಚಿತ್ರರಂಗದ ಸ್ಟಾರ್ ನಟ ದರ್ಶನ್ ಅವರ ಕಲಾಕೃತಿ ಬಿಡಿಸಲು ಸಚಿನ್ ಸಂಘೆ ಅವರು ಸುಮಾರು 15 ಗಂಟೆ ಸಮಯ ತೆಗೆದುಕೊಂಡಿದ್ದಾರಂತೆ. 15 ಗಂಟೆಗಳಲ್ಲಿ ಮೂಡಿದ ತಮ್ಮ ಪ್ರತಿಭೆಯನ್ನ ಈಗ 30 ಸೆಕೆಂಡ್ ಗೆ ಇಳಿಸಿ ಅದನ್ನ ತಮ್ಮ ಫೇಸ್ ಬುಕ್ ಪೋಸ್ಟ್ ಮಾಡಿದ್ದಾರೆ.

    ಚಳಿ ಚಳಿಯ ಸ್ವೀಡನ್ ನಲ್ಲಿ 'ಯಜಮಾನ'ನ ಜೊತೆ ರಶ್ಮಿಕಾ.! ಚಳಿ ಚಳಿಯ ಸ್ವೀಡನ್ ನಲ್ಲಿ 'ಯಜಮಾನ'ನ ಜೊತೆ ರಶ್ಮಿಕಾ.!

    ಸಾಫ್ಟ್ ವೇರ್ ಇಂಜಿನಿಯರ್

    ಸಾಫ್ಟ್ ವೇರ್ ಇಂಜಿನಿಯರ್

    ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕು ಮುದುಗೆರೆ ಗ್ರಾಮದ ನಿವಾಸಿಯಾಗಿರುವ ಈ ಸಚಿನ್ ಸಾಂಘೆ, ವೃತ್ತಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್. ಸಿಸ್ಕೋ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಸೀಮೆ ಸುಣ್ಣದಲ್ಲಿ (ಚಾಕ್ ಪೀಸ್) ಸೆಲೆಬ್ರಿಟಿಗಳ ಆಕೃತಿ ಬಿಡಿಸುವ ಕಲೆ ಹೊಂದಿದ್ದಾರೆ.

    'ಆರದ ಗಾಯ'ದಲ್ಲೇ ಶೂಟಿಂಗ್ ಗೆ ಹೊರಟ್ರಾ.? ದರ್ಶನ್ ಕೈ ಈಗ ಹೇಗಿದೆ.? 'ಆರದ ಗಾಯ'ದಲ್ಲೇ ಶೂಟಿಂಗ್ ಗೆ ಹೊರಟ್ರಾ.? ದರ್ಶನ್ ಕೈ ಈಗ ಹೇಗಿದೆ.?

    ಸಚಿನ್ ಹವ್ಯಾಸ ಇದು

    ಸಚಿನ್ ಹವ್ಯಾಸ ಇದು

    ಸಚಿನ್ ಸಂಘೆ ತಮ್ಮ ಶಾಲಾ ದಿನಗಳಿಂದಲೇ ಇಂತಹ ನೂರಾರು ಚಾಕೃತಿಗಳನ್ನ ಬಿಡಿಸಿದ್ದಾರೆ. ಅವುಗಳಿಂದಲೇ ಸಾಕಷ್ಟು ಖ್ಯಾತಿ ಗಳಿಸಿಕೊಂಡಿದ್ದಾರೆ. ಬಿಡುವಿನ ವೇಳೆಯಲ್ಲಿ ಆಯಾ ಸಮಯದ ಟ್ರೆಂಡ್ ಗೆ ತಕ್ಕಂತೆ ವ್ಯಕ್ತಿಗಳು, ದೇವರುಗಳು, ಘಟನೆಗಳು ಚಾಕೃತಿ ಗಳನ್ನ ಬಿಡಿಸೋದು ಇವರ ಹವ್ಯಾಸ.

    ಇವರು 'ಕನ್ನಡದ ರಣ್ಬೀರ್ ಕಪೂರ್' ಎಂದ ತರುಣ್ ಸುಧೀರ್, ಯಾರು ಆ ನಟ.? ಇವರು 'ಕನ್ನಡದ ರಣ್ಬೀರ್ ಕಪೂರ್' ಎಂದ ತರುಣ್ ಸುಧೀರ್, ಯಾರು ಆ ನಟ.?

    ಮೋದಿ, ಸಚಿನ್ ಗೂ ರೂಪ ನೀಡಿದ್ದಾರೆ

    ಮೋದಿ, ಸಚಿನ್ ಗೂ ರೂಪ ನೀಡಿದ್ದಾರೆ

    ದರ್ಶನ್ ಮಾತ್ರವಲ್ಲ, ಬಾಲಿವುಡ್ ನಟ ಅಮಿತಾಬ್ ಬಚ್ಚನ್, ಪ್ರಧಾನಿ ಮಂತ್ರಿ ನರೇಂದ್ರ ಮೋದಿ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅಂತಹ ಖ್ಯಾತನಾಮರ ಚಾಕೃತಿ ಬಿಡಿಸಿ ಅವರಿಂದಲೇ ತಲುಪಿಸಿ ಮೆಚ್ಚುಗೆ ಪಡೆದಿದ್ದರು.

    ದರ್ಶನ್ ಬೇಸರ : ಅಯ್ಯೋ..ಅಂತ ಕನ್ನಡ ಸಿನಿಮಾಗೆ ಬರ್ತಾರೆ ದರ್ಶನ್ ಬೇಸರ : ಅಯ್ಯೋ..ಅಂತ ಕನ್ನಡ ಸಿನಿಮಾಗೆ ಬರ್ತಾರೆ

    ಸಿನಿಮಾ ನಟರದ್ದು ಮಾಡಿದ್ದಾರೆ

    ಸಿನಿಮಾ ನಟರದ್ದು ಮಾಡಿದ್ದಾರೆ

    ಇನ್ನು ಸಿನಿರಂಗದ ಹಲವು ನಟ-ನಿರ್ದೇಶಕರ ಕಲಾಕೃತಿಯನ್ನ ಸಚಿನ್ ಸಂಘೆ ಬಿಡಿಸಿದ್ದಾರೆ. ರಜನಿಕಾಂತ್, ವಿಷ್ಣುವರ್ಧನ್, ರಾಜ್ ಕುಮಾರ್, ಶಿವರಾಜ್ ಕುಮಾರ್, ಯೋಗರಾಜ್ ಭಟ್, ರಕ್ಷಿತ್ ಶೆಟ್ಟಿ ಸೇರಿದಂತೆ ಹಲವರ ಕಲಾಕೃತಿ ರಚಿಸಿದ್ದಾರೆ.

    English summary
    Sachin Sanghe is an engineer by profession. Born in Bengaluru’s Mudugari area, he is just like any other engineer barring one thing. His talent for creating micro-sculptures.
    Saturday, November 24, 2018, 12:11
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X