ನಟಿ ಶ್ರುತಿ ಹರಿಹರನ್ ಪತಿ ರಾಮ್ ಕುಮಾರ್ ಪರಿಚಯ

'ಲೂಸಿಯಾ' ಸಿನಿಮಾ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಅದೃಷ್ಟದ ಬಾಗಿಲು ತೆಗೆದ ಶ್ರುತಿ ಹರಿಹರನ್ ನೋಡುತ್ತಿದ್ದಂತೆ ಬೇಡಿಕೆಯ ನಟಿ ಆಗಿ ಬೆಳೆದು ನಿಂತರು. ಒಳ್ಳೊಳ್ಳೆ ಸಿನಿಮಾಗಳನ್ನ ಮಾಡುತ್ತಾ, ಯಶಸ್ಸಿನ ಹಾದಿಯಲ್ಲೇ ಸಾಗುತ್ತಿದ್ದ ಶ್ರುತಿ ನಟ ಅರ್ಜುನ್ ಸರ್ಜಾ ಅವರ ಮೇಲೆ ಮೀಟೂ ಆರೋಪ ಮಾಡಿ ಇಡೀ ದಕ್ಷಿಣ ಭಾರತ ಚಿತ್ರರಂಗಕ್ಕೆ ಅಚ್ಚರಿ ನೀಡಿದರು.

ಸುಮಾರು ಮೂರು ದಶಕಗಳಿಂದ ಸಿನಿಜಗತ್ತಿನಲ್ಲಿ ಜಂಟಲ್ ಮ್ಯಾನ್ ಎಂದು ಗುರುತಿಸಿಕೊಂಡಿದ್ದ ನಟನ ಮೇಲೆ ಮೀಟೂ ಆರೋಪ ಮಾಡಿದ ಶ್ರುತಿ, ಇಂದು ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಸರ್ಜಾ ಕುಟುಂಬವನ್ನ ಟಾರ್ಗೆಟ್ ಮಾಡಿದ್ದೇ ಶ್ರುತಿಗೆ ಮುಳುವಾಯಿತು ಎಂದು ಮಾತನಾಡಿಕೊಂಡವರು ಇದ್ದಾರೆ. ಆದ್ರೆ, ಅದೇ ಕಾರಣ ಎಂದು ಹೇಳಲು ಸಾಧ್ಯವಿಲ್ಲ.

ಶ್ರುತಿ ಹರಿಹರನ್ ಗೆ ಮದುವೆ ಆಗಿದೆ ಎಂದು ಗೊತ್ತಾಗಿದ್ದೇ ಈ ಮೀಟೂ ವಿವಾದ ಸಂದರ್ಭದಲ್ಲಿ. ಅಲ್ಲಿಯವರೆಗೂ ಪ್ರೀತಿ, ಮದುವೆ, ಗಂಡ, ಲವರ್ ಹೀಗೆ ಶ್ರುತಿ ಖಾಸಗಿ ಜೀವನದ ಯಾವ ವಿಷ್ಯವೂ ಗೊತ್ತಿರಲಿಲ್ಲ. ಸರ್ಜಾ ವಿರುದ್ಧ ನೀಡಿದ ಮೀಟೂ ದೂರಿನಲ್ಲಿ W/O ರಾಮ್ ಕುಮಾರ್ ಎಂದು ಶ್ರುತಿ ನಮೂದಿಸುವ ಮೂಲಕ ಖಾಸಗಿ ಗುಟ್ಟೊಂದನ್ನ ಬಹಿರಂಗಪಡಿಸಿದ್ದರು. ಈಗ ಶ್ರುತಿ ಹರಿಹರನ್ ಗರ್ಭಿಣಿ. ಈ ವಿಷ್ಯವನ್ನ ಸ್ವತಃ ಶ್ರುತಿ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ, ಈ ರಾಮ್ ಯಾರು? ಯಾವಾಗ ಮದುವೆ ಆದರು? ಮುಂದೆ ಓದಿ...

ಮೀಟೂ ವಿವಾದ ನಡುವೆ ಬಯಲಾಯ್ತು ಆ ಸತ್ಯ

ಮೀಟೂ ವಿವಾದ ನಡುವೆ ಬಯಲಾಯ್ತು ಆ ಸತ್ಯ

''ವಿಸ್ಮಯ ಸಿನಿಮಾ ಮಾಡುವ ವೇಳೆ ನಟ ಅರ್ಜುನ್ ಸರ್ಜಾ ಅವರ ನನ್ನ ಬಳಿ ಅಸಭ್ಯವಾಗಿ ವರ್ತಿಸಿದ್ದರು. ನನ್ನನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಪ್ರಯತ್ನ ಪಟ್ಟಿದ್ದರು,'' ಎಂದು ಆರೋಪಿಸಿ ಕಬ್ಬನ್ ಪಾರ್ಕ್ ಪೊಲೀಸ್ ಸ್ಟೇಷನ್ ನಲ್ಲಿ ಶ್ರುತಿ ಹರಿಹರನ್ ಲಿಖಿತ ದೂರು ನೀಡಿದ್ದರು. ಆ ದೂರಿನ ಪ್ರತಿಯಲ್ಲಿ ತನ್ನ ವಿವರ ಬರೆಯುವ ವೇಳೆ ಶ್ರುತಿ ಹರಿಹರನ್ W/O ರಾಮ್ ಕುಮಾರ್ ಎಂದು ಮಾಹಿತಿ ನೀಡಿದ್ದರು. ಅಲ್ಲಿಗೆ ಶ್ರುತಿ ಮದುವೆ ಆಗಿರುವ ಸತ್ಯ ಆ ದಿನ ಬಯಲಾಯ್ತು.

ಯಾರು ಈ ರಾಮ್?

ಯಾರು ಈ ರಾಮ್?

ಶ್ರುತಿ ಹರಿಹರನ್ ಪತಿ ರಾಮ್ ಒಬ್ಬ ಡ್ಯಾನ್ಸರ್, ನಟ, ಕಲಾವಿದ ಮತ್ತು ಮಾರ್ಷಲ್ ಆರ್ಟ್ಸ್ ಪಟು. ನಟಿಯಾಗುವುದಕ್ಕೂ ಮೊದಲು ಶ್ರುತಿ ಕೂಡ ಡ್ಯಾನ್ಸರ್ ಆಗಿದ್ದರು. ಅಲ್ಲಿಂದಲೇ ರಾಮ್ ಮತ್ತು ಶ್ರುತಿ ಪರಿಚಯವಾಗಿದೆ. ಇವರಿಬ್ಬರು ಸುಮಾರು ನಾಲ್ಕೈದು ವರ್ಷ ಪ್ರೀತಿಯಲ್ಲಿದ್ದರಂತೆ. ಬಳಿಕ ಕಳೆದ ಎರಡು ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದರು ಎನ್ನಲಾಗಿದೆ. ಅಂದ್ರೆ, 2017ರಲ್ಲಿ ಅಧಿಕೃತವಾಗಿ ದಾಂಪತ್ಯ ಜೀವನ ಪ್ರವೇಶ ಮಾಡಿದ್ದರು.

ಕಲರಿ ಫೈಟು ಆರ್ಟಿಸ್ಟ್

ಕಲರಿ ಫೈಟು ಆರ್ಟಿಸ್ಟ್

ರಾಮ್ ಕಲರಿ ಫೈಟು ಆರ್ಟಿಸ್ಟ್. ಈ ವಿಭಾಗದ ಡ್ಯಾನ್ಸ್ ನಲ್ಲಿ ರಾಮ್ ಹೆಚ್ಚು ಖ್ಯಾತಿ ಗಳಿಸಿಕೊಂಡಿದ್ದಾರೆ. ಅಂತಾರಾಷ್ಟ್ರಿಯ ಮಟ್ಟದಲ್ಲಿ ನೃತ್ಯ ಸಂಯೋಜನೆ ಮಾಡಿರುವ ಅನುಭವ ಹೊಂದಿದ್ದಾರೆ. ದೇಶ-ವಿದೇಶಗಳಲ್ಲಿ ಅನೇಕ ಕಾರ್ಯಕ್ರಮಗಳನ್ನ ನೀಡಿದ್ದಾರೆ. ಅಲ್ಲೊಂದು ಇಲ್ಲೊಂದು ಸಿನಿಮಾದಲ್ಲೂ ನಟಿಸಿದ್ದಾರೆ. ಜೊತೆ ಸ್ಟೇಜ್ ಕಾರ್ಯಕ್ರಮದಲ್ಲಿ, ನಾಟಕದಲ್ಲೂ ನಟಿಸಿದ್ದಾರೆ.

ಶ್ರುತಿ ಯಶಸ್ಸಿನ ಪಾಲುದಾರ

ಶ್ರುತಿ ಯಶಸ್ಸಿನ ಪಾಲುದಾರ

ಡ್ಯಾನ್ಸರ್ ಆಗಿದ್ದ ಶ್ರುತಿ ಹರಿಹರನ್ ಸಿನಿಮಾ ಇಂಡಸ್ಟ್ರಿಯಲ್ಲಿ ನಾಯಕಿಯಾಗಿ ಬಡ್ತಿ ಪಡೆದು, ಈ ಮಟ್ಟಕ್ಕೆ ಬೆಳೆಯುವಲ್ಲಿ ರಾಮ್ ಅವರ ಸಹಕಾರ ಮತ್ತು ಕೊಡುಗೆ ಇದೆ. ವಿಶೇಷ ಅಂದ್ರೆ ರಾಮ್ ಮತ್ತು ಶ್ರುತಿ ಒಂದು ಆಲ್ಬಂ ಹಾಡಿನಲ್ಲೂ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ಮದುವೆ ವಿಷ್ಯ ಮುಚ್ಚಿಟ್ಟಿದ್ದು ಯಾಕೆ?

ಮದುವೆ ವಿಷ್ಯ ಮುಚ್ಚಿಟ್ಟಿದ್ದು ಯಾಕೆ?

ಪರಸ್ಪರ ಪ್ರೀತಿಸಿ, ಒಪ್ಪಿ ಮದುವೆ ಆಗಿದ್ದರೂ ಈ ವಿಷ್ಯವನ್ನ ಮುಚ್ಚಿಟ್ಟಿದ್ದು ಯಾಕೆ ಎಂಬುದು ಕುತೂಹಲ. ಶ್ರುತಿ ಆಪ್ತ ವಲಯದಲ್ಲಿ ಹೇಳುವ ಪ್ರಕಾರ, ಸಿನಿ ಕೆರಿಯರ್ ಕಾರಣದಿಂದ ಇದನ್ನ ಗೌಪ್ಯವಾಗಿಟ್ಟುಕೊಂಡಿದ್ದರಂತೆ. ಮದುವೆ ಬಗ್ಗೆ ತಮ್ಮ ಪತಿ ಬಗ್ಗೆ ಹೆಚ್ಚಾಗಿ ಎಲ್ಲೂ ಮಾತನಾಡದ ಶ್ರುತಿ ಈಗ ಇನ್ಸ್ಟಾಗ್ರಾಂನಲ್ಲಿ ತಾನು ತಾಯಿಯಾಗುತ್ತಿದ್ದೇನೆ ಎಂದು ಖುಷಿ ಹಂಚಿಕೊಂಡಿದ್ದಾರೆ.

More from Filmibeat

English summary
Kannada actress Sruthi Hariharan confirmed now she is pregnant, she shared her pregnancy photo in Instagram and tagged her husband ram.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X