»   » ಸುದೀಪ್ ಹಾಲಿವುಡ್ ಹೀರೋಯಿನ್ ಬಗ್ಗೆ ನೀವು ತಿಳಿಯಬೇಕಾದ ವಿಷ್ಯ.!

ಸುದೀಪ್ ಹಾಲಿವುಡ್ ಹೀರೋಯಿನ್ ಬಗ್ಗೆ ನೀವು ತಿಳಿಯಬೇಕಾದ ವಿಷ್ಯ.!

Posted By:
Subscribe to Filmibeat Kannada

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯಿಸುತ್ತಿರುವ ಹಾಲಿವುಡ್ ಚಿತ್ರ ಫಸ್ಟ್ ಲುಕ್ ಪೋಸ್ಟರ್ ಮತ್ತು ಸೌಂಡ್ ಟ್ರ್ಯಾಕ್ ರಿಲೀಸ್ ಮಾಡಿ ಗಮನ ಸೆಳೆಯುತ್ತಿದೆ. ಈ ಮೂಲಕ ಹಾಲಿವುಡ್ ಅಂಗಳಕ್ಕೆ ಕಿಚ್ಚ ಕಾಲಿಟ್ಟಿದ್ದಾರೆ.

ಸೈಂಟಿಫಿಕ್ ಥ್ರಿಲ್ಲರ್‌ ಚಿತ್ರ ಇದಾಗಿದ್ದು, ಈ ಚಿತ್ರಕ್ಕೆ ಕತೆ, ಚಿತ್ರಕಥೆ ಬರೆದು ಆಸ್ಟ್ರೇಲಿಯಾದ ಮೂಲದ ಎಡ್ಡಿ ಆರ್ಯ ನಿರ್ದೇಶನ ಮಾಡುತ್ತಿದ್ದಾರೆ.

ಸುದೀಪ್ ಗೆ ಈ ಚಿತ್ರದಲ್ಲಿ ನಾಯಕಿ ಯಾರಾಗಬಹುದು ಎಂಬ ಕುತೂಹಲಕ್ಕೆ ಈಗಾಗಲೇ ಉತ್ತರ ಸಿಕ್ಕಿದ್ದು, ನಿಕೋಲ್ ಶಾಲ್ಮೋ ಅಭಿನಯಿಸುತ್ತಿದ್ದಾರೆ. ಹಾಗಿದ್ರೆ, ಈ ನಿಕೋಲ್ ಶಾಲ್ಮೋ ಯಾರು? ಇವರ ಹಿನ್ನೆಲೆ ಏನು? ಎಂಬುದರ ಜೊತೆಗೆ ಕೆಲವು ಇಂಟ್ರೆಸ್ಟಿಂಗ್ ವಿಷ್ಯ ಇಲ್ಲಿದೆ. ಮುಂದೆ ಓದಿ...

ಸುದೀಪ್ ಗೆ ಇಬ್ಬರು ನಾಯಕಿಯರು

ರೈಸನ್ ಚಿತ್ರದಲ್ಲಿ ಸುದೀಪ್ ಗೆ ಇಬ್ಬರು ನಾಯಕಿಯರು ಇರಲಿದ್ದಾರಂತೆ. ಇದರಲ್ಲಿ ಒಬ್ಬರು ನಿಕೋಲ್ ಶಾಲ್ಮೋ. ಮತ್ತೊಬ್ಬ ನಾಯಕಿಗಾಗಿ ಚಿತ್ರತಂಡ ಹುಡುಕಾಟ ನಡೆಸುತ್ತಿದೆಯಂತೆ. ಮೂಲಗಳ ಪ್ರಕಾರ ಎರಡನೇ ನಾಯಕಿಯದ್ದು ಭಾರತದ ಮೂಲದ ನಾಯಕಿ ಪಾತ್ರವಂತೆ.

ಹಾಲಿವುಡ್ ಸಿನಿಮಾ 'ರೈಸನ್'ನಲ್ಲಿ ಸುದೀಪ್ ಕಂಗೊಳಿಸುವುದು ಹೀಗೆ..!

ರಂಗಭೂಮಿ ಕಲಾವಿದೆ

ನ್ಯೂಯಾರ್ಕ್‌ ಮೂಲದ ನಟಿ ನಿಕೋಲ್ ಶಾಲ್ಮೋ ಮೂಲತಃ ರಂಗಭೂಮಿ ಕಲಾವಿದೆ. 8 ವರ್ಷ ವಯಸ್ಸಿನಿಂದ ರಂಗಭೂಮಿ ಜೊತೆ ನಂಟನ್ನು ಉಳಿಸಿಕೊಂಡಿದ್ದಾರೆ. 'ಮ್ಯಾಕ್‍ ಬೆತ್' ನಾಟಕದಲ್ಲಿ ಲೇಡಿ ಮ್ಯಾಕ್‍ ಬೆತ್ ಪಾತ್ರದಲ್ಲಿ ದೊಡ್ಡ ಹೆಸರು ಮಾಡಿದ್ದ ಕಲಾವಿದೆ. 'ಇನ್ ಲವ್ ಇನ್ ಮಿಸರಿ', ನಿಕೋಲ್ ಗೆ ದೊಡ್ಡ ಹೆಸರು ತಂದುಕೊಟ್ಟ ಮತ್ತೊಂದು ನಾಟಕ.

ಸುದೀಪ್ ಬಗ್ಗೆ ಬಾಂಗ್ಲಾ, ಪಾಕಿಸ್ತಾನಿಗಳು ಮಾಡಿರುವ ಕಾಮೆಂಟ್ ನೋಡಿ.!

ನಿಕೋಲ್ ಮೊದಲ ಸಿನಿಮಾ

ನಿಕೋಲ್ ಶಾಲ್ಮೋ ಅಭಿನಯದ ಮೊಸಲ ಸಿನಿಮಾ 'ಫಾಲಿಂಗ್ ಔಟ್ ಆಫ್ ಲವ್'. ಇನ್ನುಳಿದಂತೆ 'ಇನ್ ಲವ್ ಇನ್ ಮಿಸರಿ', ಗೀಕ್ ಆನ್‌ ಸ್ಟ್ರೀಟ್ ಮತ್ತು ಹೆವಿಯರ್ ಥಿಂಗ್ಸ್ ಸೇರಿದಂತೆ ನಾಲ್ಕು ಸಿನಿಮಾಗಳಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ಸುದೀಪ್ ಹಾಲಿವುಡ್ ಚಿತ್ರದ ಫೋಟೋಶೂಟ್ ಮಾಡಿದ ಛಾಯಾಗ್ರಾಹಕ ಫುಲ್ ಖುಷಿ.!

'ರೈಸನ್' ಶೂಟಿಂಗ್ ನಲ್ಲಿ ನಿಕೋಲ್

ಈಗಾಗಲೇ ರೈಸನ್ ಚಿತ್ರದ ಚಿತ್ರೀಕರಣ ಆರಂಭವಾಗಿದ್ದು, ನಿಕೋಲ್ ಅಭಿನಯದ ಕೆಲವು ದೃಶ್ಯಗಳ ಶೂಟಿಂಗ್ ಮುಗಿದಿದೆಯಂತೆ. ಮುಂದಿನ ಶೆಡ್ಯೂಲ್ ಕೆನಡಾ ಮತ್ತು ನ್ಯೂಯಾರ್ಕ್‌ಗಳಲ್ಲಿ ನಡೆಯಲಿದೆ. ಸುದೀಪ್ ಕೂಡ ಭಾಗವಹಿಸಲಿದ್ದಾರೆ.

English summary
Hollywood Actress Nicole Schalmo Playing Female Lead Role Opposite Kiccha Sudeep in Risen Movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada