For Quick Alerts
  ALLOW NOTIFICATIONS  
  For Daily Alerts

  'ಟಗರು' ಸಿನಿಮಾದ 'ಕಾನ್ಸ್ ಟೇಬಲ್ ಸರೋಜ' ಯಾರು ಗೊತ್ತಾ ?

  By Naveen
  |
  'ಟಗರು' ಸಿನಿಮಾದ 'ಕಾನ್ಸ್ ಟೇಬಲ್ ಸರೋಜ' ಯಾರು ಗೊತ್ತಾ ? | Filmibeat Kannada

  ಕೆಲವು ಸಿನಿಮಾಗಳ ಕೆಲವು ಪಾತ್ರಗಳು ನಾಯಕ ನಾಯಕಿ ಪಾತ್ರಕ್ಕಿಂತ ಪರಿಣಾಮಕಾರಿ ಆಗಿರುತ್ತದೆ. ತೆರೆ ಮೇಲೆ ಆ ಪಾತ್ರ ಕೆಲವೇ ನಿಮಿಷ ಬಂದರು ಸಹ ಸಿನಿಮಾ ನೋಡುವ ಪ್ರೇಕ್ಷಕ ಆ ಪಾತ್ರಗಳನ್ನು ಮರೆಯುವುದಿಲ್ಲ. ಚಿತ್ರಮಂದಿರದಿಂದ ಆಚೆ ಬಂದ ಮೇಲೆಯೂ ಅಂತಹ ಪಾತ್ರಗಳು ಪ್ರೇಕ್ಷಕರ ಮನಸಿನಲ್ಲಿ ಇರುತ್ತದೆ. ಸದ್ಯ 'ಟಗರು' ಸಿನಿಮಾದ ಒಂದು ಪಾತ್ರ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

  'ಟಗರು' ಸಿನಿಮಾದಲ್ಲಿ ಒಂದು ಲೇಡಿ ಪೊಲೀಸ್ ಕಾನ್ಸ್ ಟೇಬಲ್ ಪಾತ್ರ ಇದೆ. 'ಕಾನ್ಸ್ ಟೇಬಲ್ ಸರೋಜ' ಎಂಬ ಈ ಪಾತ್ರ ಸಿನಿಮಾದಲ್ಲಿ ಇರುವುದು ಕೆಲವೇ ಕೆಲವು ದೃಶ್ಯಗಳಲ್ಲಿ ಮಾತ್ರ. ಆದರೂ ಸಹ ಈ ಪಾತ್ರ ಎಲ್ಲರ ಮೆಚ್ಚುಗೆಗಳಿಸಿದೆ. 'ಕಾನ್ಸ್ ಟೇಬಲ್ ಸರೋಜ' ಪಾತ್ರ ಒಬ್ಬ ಹಿರೋಯಿನ್ ಪಾತ್ರವಲ್ಲ. ಅದು ಕೇವಲ ಶಿವಣ್ಣನ ಜೊತೆಗೆ ಪೊಲೀಸ್ ಕಾನ್ಸ್ ಟೇಬಲ್ ಆಗಿ ಕೆಲಸ ಮಾಡುವ ಹುಡುಗಿಯ ಪಾತ್ರ. ಇಂತಹ ಸಣ್ಣ ಪಾತ್ರ ಈಗ ಸಿನಿಮಾ ನೋಡಿದ ಎಲ್ಲರ ಗಮನ ಸೆಳೆದಿದೆ. 'ಕಾನ್ಸ್ ಟೇಬಲ್ ಸರೋಜ' ರೋಲ್ ನಲ್ಲಿ ಮಿಂಚಿದ ನಟಿ ಯಾರು ಎನ್ನುವ ಕುತೂಹಲ ಕೂಡ ಹುಟ್ಟಿಕೊಂಡಿದೆ. ಆ ಕುತೂಹಲ ಉತ್ತರ ಮುಂದಿದೆ ಓದಿ...

  ತ್ರಿವೇಣಿ ರಾವ್

  ತ್ರಿವೇಣಿ ರಾವ್

  'ಟಗರು' ಸಿನಿಮಾದಲ್ಲಿ 'ಕಾನ್ಸ್ ಟೇಬಲ್ ಸರೋಜ' ಪಾತ್ರವನ್ನು ಮಾಡಿದ್ದ ನಟಿಯ ನಿಜವಾದ ಹೆಸರು ತ್ರಿವೇಣಿ ರಾವ್. ಬೆಂಗಳೂರಿನ ಆರ್ ಆರ್ ನಗರದಲ್ಲಿ ನೆಲೆಸಿರುವ ತ್ರಿವೇಣಿ ಕನ್ನಡದಲ್ಲಿ 'ಕಿರಾತಕ' ಕೆಲ ಸಿನಿಮಾದ ಸಣ್ಣ ಪಾತ್ರದಲ್ಲಿ ನಟಿಸಿದ್ದಾರೆ.

  'ಬಾಹುಬಲಿ' ಚಿತ್ರದಲ್ಲಿ ನಟನೆ

  'ಬಾಹುಬಲಿ' ಚಿತ್ರದಲ್ಲಿ ನಟನೆ

  ಮಾಡಲಿಂಗ್ ಮಾಡುತ್ತಿದ್ದ ತ್ರಿವೇಣಿ ರಾವ್ 'ಬಾಹುಬಲಿ' ಸಿನಿಮಾದಲ್ಲಿ ನಟನೆ ಮಾಡಿದ್ದಾರೆ. 'ಬಾಹುಬಲಿ' ಚಿತ್ರದಲ್ಲಿ ರಮ್ಯಾಕೃಷ್ಣ ಜೊತೆಗೆ ತ್ರಿವೇಣಿ ರಾವ್ ತೆರೆ ಹಂಚಿಕೊಂಡಿದ್ದಾರೆ.

  ಸರೋಜನ ಫ್ಯಾನ್ಸ್ ಪೇಜ್ ಗಳು

  ಸರೋಜನ ಫ್ಯಾನ್ಸ್ ಪೇಜ್ ಗಳು

  'ಟಗರು' ಸಿನಿಮಾದ 'ಕಾನ್ಸ್ ಟೇಬಲ್ ಸರೋಜ' ಪಾತ್ರದ ನಂತರ ನಟಿ ತ್ರಿವೇಣಿ ರಾವ್ ಅವರ ಜನಪ್ರಿಯತೆ ಹೆಚ್ಚಾಗುತ್ತಿದೆ. ಅವರ ಹೆಸರಿನಲ್ಲಿ ಕೆಲವು ಫ್ಯಾನ್ಸ್ ಫೇಜ್ ಗಳು ಈಗಾಗಲೇ ಶುರು ಆಗಿದೆ.

  ಸಿಕ್ಕಾಪಟ್ಟೆ ತಮಾಷೆಯ ಟ್ರೋಲ್ ಗಳು

  ಸಿಕ್ಕಾಪಟ್ಟೆ ತಮಾಷೆಯ ಟ್ರೋಲ್ ಗಳು

  ತ್ರಿವೇಣಿ ರಾವ್ ಮಾಡಿರುವ 'ಕಾನ್ಸ್ ಟೇಬಲ್ ಸರೋಜ' ಪಾತ್ರ ಸಖತ್ ಟ್ರೋಲ್ ಆಗುತ್ತಿದೆ. ಕಿಡ್ಸ್ ಪ್ರಿಯಾ ಪ್ರಕಾಶ್ ವಾರಿಯರ್ ಅನ್ನು ಇಷ್ಟ ಪಡುತ್ತಾರೆ, ಮೆನ್ಸ್ ರಶ್ಮಿಕಾ ಮಂದಣ್ಣ ರನ್ನು ಇಷ್ಟ ಪಡುತ್ತಾರೆ, ಆದರೆ ಲೆಜೆಂಡ್ಸ್ 'ಕಾನ್ಸ್ ಟೇಬಲ್ ಸರೋಜ'ನ ಇಷ್ಟ ಪಡುತ್ತಾರೆ ಎಂದು ತಮಾಷೆಯಾಗಿ ಟ್ರೋಲ್ ಮಾಡಿದ್ದಾರೆ.

  ಡಾಲಿ ಡೈಲಾಗ್

  ಡಾಲಿ ಡೈಲಾಗ್

  'ಟಗರು' ಚಿತ್ರದಲ್ಲಿ ಡಾಲಿ ಹೇಳುವ ಡೈಲಾಗ್ ಶೈಲಿಯಲ್ಲಿ ''ಹೊಡಿತ್ತೀನಿ.. ಕಾನ್ಸ್ ಟೇಬಲ್ ಸರೋಜ ಮೇಲೆ ಕಣ್ಣು ಹಾಕಿದರೆ ಹೊಡಿತ್ತೀನಿ'' ಎಂದು ಟ್ರೋಲ್ ಮಾಡಿದ್ದಾರೆ.

  ವಿಮರ್ಶೆ: ಟಗರು ಖದರು, ಡಾಲಿ ಪೊಗರು, ಸ್ಕ್ರೀನ್ ಪ್ಲೇ ಸೂಪರ್ರುವಿಮರ್ಶೆ: ಟಗರು ಖದರು, ಡಾಲಿ ಪೊಗರು, ಸ್ಕ್ರೀನ್ ಪ್ಲೇ ಸೂಪರ್ರು

  ಫೇಮಸ್ ಟ್ರೋಲ್

  ಫೇಮಸ್ ಟ್ರೋಲ್

  'ಟಗರು' ಚಿತ್ರದ ಪಾತ್ರಗಳಾದ ಚಿಟ್ಟೆ, ಅಂಕಲ್ ಪಾತ್ರವನ್ನು ದ್ವೇಶಿಸಿದರು ಡಾಲಿ ಸುಮ್ಮನೆ ಇರುತ್ತಾನೆ. ಆದರೆ 'ಕಾನ್ಸ್ ಟೇಬಲ್ ಸರೋಜ'ಗೆ ಏನಾದರೂ ಹೇಳಿದರೆ ಡಾಲಿ ಲಾಂಗ್ ಹಿಡಿದು ಬರುತ್ತಾನೆ ಎಂಬ ಟ್ರೋಲ್ ತುಂಬ ಫೇಮಸ್ ಆಗಿದೆ.

  'ಕಾನ್ಸ್ ಟೇಬಲ್ ಸರೋಜ' ಪಾತ್ರದ ಬಗ್ಗೆ

  'ಕಾನ್ಸ್ ಟೇಬಲ್ ಸರೋಜ' ಪಾತ್ರದ ಬಗ್ಗೆ

  'ಟಗರು' ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರ ಮಾಡಿರುವ ಶಿವಣ್ಣನ ಜೊತೆಗೆ 'ಕಾನ್ಸ್ ಟೇಬಲ್ ಸರೋಜ' ಕೆಲಸ ಮಾಡುತ್ತಿರುತ್ತಾಳೆ. ಪೊಲೀಸ್ ಕಾನ್ಸ್ ಟೇಬಲ್ ಆಗಿದ್ದರು ರೌಡಿ ಡಾಲಿಗೆ ಸಹಾಯ ಮಾಡುವ ಪಾತ್ರ ಇದಾಗಿದೆ.

  English summary
  All about actress Triveni Rao. Triveni Rao played Conistable Saroja character in Kannada actor Shiva Rajkumar's 'Tagaru' movie. The movie is directed by Duniya Suri.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X